For Quick Alerts
  ALLOW NOTIFICATIONS  
  For Daily Alerts

  ಕೌಟುಂಬಿಕ ಕಲಹ: ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ, ಕೇಸ್ ದಾಖಲು?

  |

  ಕನ್ನಡ ಚಿತ್ರರಂಗದ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಸೋದರಳಿಯನ ಪತ್ನಿ ಸನಾ ಕರಜಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  ಅಕ್ಕನ ಪುತ್ರ ಫಯಾಜ್ ಕರಜಗಿ ಮತ್ತು ಪತ್ನಿ ಸನಾ ನಡುವಿನ ಕೌಟುಂಬಿಕ ಕಲಹದಲ್ಲಿ ಮಧ್ಯಪ್ರವೇಶಿಸಿದ ರಾಜು ತಾಳಿಕೋಟೆ ಸೋದರಳಿಯನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ದಿಗ್ವಿಜಯ-ನ್ಯೂಸ್ ಫಸ್ಟ್ ಸುದ್ದಿ ವಾಹಿನಿಗಳು ವರದಿ ಮಾಡಿವೆ.

  ಸನಾ ಕರಜಗಿ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂದು ದೂರಿ ಸನಾ ಕರಜಗಿ ತಾಯಿ ಫಾತಿಮಾ ಶಿರಹಟ್ಟಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜು ತಾಳಿಕೋಟೆ, ಪತ್ನಿ ಪ್ರೇಮಾ ತಾಳಿಕೋಟೆ, ಫಯಾಜ್ ಕರಜಗಿ, ಸನಾ ಭಾವ ಪಿಂಟು ಸೇರಿ ಆರು ಜನರ ವಿರುದ್ಧ ಕೇಸ್ ದಾಖಲಾಗಿದೆ.

  ಅಕ್ಕನ ಮಗನ ದಾಂಪತ್ಯ ಕಲಹ ಎಂಬ ಕಾರಣಕ್ಕೆ ಮಾತುಕತೆಗಾಗಿ ತೆರಳಿದ್ದ ರಾಜು ತಾಳಿಕೋಟೆ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. 'ಮಾತನಾಡಲು ಹೋದಾಗ ನನ್ನ ಮೇಲೆಯೇ ಹಲ್ಲೆ ಮಾಡಿದ್ದಾರೆ' ಎಂದು ರಾಜು ತಾಳಿಕೋಟೆ ಪ್ರತ್ಯಾರೋಪ ಮಾಡಿದ್ದು, ತಾವೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಸನಾ ಸಂಬಂಧಿಕರು ಪಿಸ್ತೂಲ್ ತೋರಿಸಿ ನಮಗೆ ಬೆದರಿಕೆ ಹಾಕಿದರು. ಈ ಹಿನ್ನೆಲೆ ತಾನು ಕೂಡ ಸನಾ ಕರಜಗಿ ಹಾಗೂ ಸಂಬಂಧಿಕ ಎಸ್‌ಕೆ ಮೋದಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.

  English summary
  Complaint filed against comedy actor Raju Taalikote in Vijayapura for assaulting family member.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X