»   » ಪಕ್ಷ ಘೋಷಿಸಿದ ಬೆನ್ನಲ್ಲೆ ಉಪೇಂದ್ರ ವಿರುದ್ಧ ದೂರು ದಾಖಲು.!

ಪಕ್ಷ ಘೋಷಿಸಿದ ಬೆನ್ನಲ್ಲೆ ಉಪೇಂದ್ರ ವಿರುದ್ಧ ದೂರು ದಾಖಲು.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯ ಪಕ್ಷದ ಹೆಸರು ಘೋಷಿಸಿ ಚುನಾವಣ ಅಖಾಡಕ್ಕೆ ಸಜ್ಜಾಗುತ್ತಿದ್ದಾರೆ. 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಮೂಲಕ ಜನರ ಮುಂದೆ ಬರ್ತಿದ್ದಾರೆ.

ತಮ್ಮ ಪ್ರಜಾಕಾರಣದ ಪಕ್ಷದ ಘೋಷಿಸಿದ ಎರಡೇ ದಿನಕ್ಕೆ ಉಪೇಂದ್ರ ವಿರುದ್ಧ ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಷ್ಟಕ್ಕೂ, ಕೆಪಿಜೆಪಿ ಪಕ್ಷದ ಅಧ್ಯಕ್ಷ ಉಪೇಂದ್ರ ಅವರ ವಿರುದ್ಧ ದೂರು ನೀಡಿದ್ದು ಯಾರು? ದೂರು ನೀಡಿರುವುದಾದರೂ ಯಾಕೆ ಎಂಬ ಪ್ರಶ್ನೆಗೆ ಉತ್ತರ ಮುಂದೆ ನೀಡಲಾಗಿದೆ.

ಭ್ರಷ್ಟಾಚಾರಕ್ಕೆ ಪ್ರಚೋದನೆ ಆರೋಪ

ಪಕ್ಷದ ಉದ್ಘಾಟನೆ ಸಮಾರಂಭದಲ್ಲಿ ಉಪೇಂದ್ರ ಅವರು ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಪೊಲೀಸ್ ದೂರು ನೀಡಲಾಗಿದೆ.

ಉಪೇಂದ್ರ ಹೇಳಿದ್ದೇನು?

ಪಕ್ಷದ ಉದ್ಘಾಟನೆ ಸಮಾರಂಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಉಪೇಂದ್ರ ಅವರು ''ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ಹಣ ನೀಡಿದರೆ ತೆಗೆದುಕೊಳ್ಳಿ, ಆದ್ರೆ ವೋಟ್ ಅವರಿಗೆ ಹಾಕಬೇಡಿ ಎಂದು ಹೇಳಿಕೆ ನೀಡಿದ್ದಾರೆ.'' ಇದು ಜನರನ್ನ ಪ್ರಚೋಸುವಂತಿದೆ ಎಂದು ದೂರಿದ್ದಾರೆ.

ದೂರು ನೀಡಿರುವುದು ಯಾರು?

ಅಷ್ಟಕ್ಕೂ, ಉಪೇಂದ್ರ ಅವರ ವಿರುದ್ಧ ದೂರು ನೀಡಿರುವುದು ಜೆಡಿಯು ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್. ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಚುನಾವಣೆ ಅಧಿಕಾರಿಗೂ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಉಪ್ಪಿ ಪ್ರಜಾಕಾರಣಕ್ಕೆ ಆರಂಭ ವಿಘ್ನ

ಇತ್ತೀಚೆಗೆ ಮೋದಿ ಹೆಸರು ಪ್ರಸ್ತಾಪಿಸಿದ್ದಕ್ಕೆ ಉಪೇಂದ್ರ ಅವರ ವಿರುದ್ಧ ಬಿಜೆಪಿ ನಾಯಕಿ ಶೋಭ ಕರಂದ್ಲಾಜೆ ಕಿಡಿಕಾರಿದ್ದರು. ಈಗ ಜೆಡಿಯು ಪಕ್ಷದವರು ದೂರು ನೀಡಿದ್ದಾರೆ. ಉಪೇಂದ್ರ ಅವರು ಈಗಷ್ಟೇ ಪಕ್ಷ ಘೋಷಿಸಿ ಹೆಜ್ಜೆ ಇಡುತ್ತಿದ್ದಾರೆ. ಹೀಗಿರುವಾಗಲೇ ಆರಂಭದಲ್ಲೇ ಕಂಟಕ ಎದುರಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.

English summary
Complaint Filed Against karnataka pragnavantha janata party President Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X