For Quick Alerts
  ALLOW NOTIFICATIONS  
  For Daily Alerts

  ಸಂಜನಾ ಗಲ್ರಾನಿಗೆ ಬಲವಂತದ ಮತಾಂತರ: ಮೌಲ್ವಿ ವಿರುದ್ಧ ದೂರು

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿಗೆ ಕೆಲವು ದಿನಗಳ ಹಿಂದಷ್ಟೆ ಷರತ್ತು ಬದ್ಧ ಜಾಮೀನು ದೊರೆತಿದೆ.

  ಬಲವಂತದಿಂದ ಸಂಜನಾ ಮತಾಂತರ ಆಗಿದ್ಯಂತೆ..? | Sanjanna Galrani | Filmibeat Kannada

  ನಟಿ ಸಂಜನಾ ರ ಬಂಧನವಾದಾಗ ಅವರ ಬಗ್ಗೆ ಹಲವಾರು ಸುದ್ದಿಗಳು ಹರಿದಾಡಿದವು, ಅದರಲ್ಲಿ ಒಂದೆಂದರೆ, ಸಂಜನಾ ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು. ಇದಕ್ಕೆ ಸಂಬಂಧಿಸಿದಂತೆ ದಾಖಲೆಯೊಂದನ್ನು ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

  ಇದೀಗ, ವಕೀಲರೊಬ್ಬರು, ನಟಿ ಸಂಜನಾ ಗಲ್ರಾನಿಯನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಮೌಲ್ವಿಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಸಂಜನಾ ರನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ, ಸಂಜನಾ ಹೆಸರನ್ನು 'ಮಹಿರಾ' ಎಂದು ಬದಲಾಯಿಸಲಾಗಿದೆ. ಈ ಬಲವಂತದ ಮತಾಂತರ ಮಾಡಿರುವುದು ಟ್ಯಾನರಿ ರಸ್ತೆಯ ದಾರುಲ್ ಉಲುಮ್ ಶಾ ವಲಿಯುಲ್ಲಾ ಮದರಸಾದ ಮೌಲ್ವಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ.

  ವೈದ್ಯ ಅಜೀಜ್ ಎಂಬುವರ ಜೊತೆಗೆ ಸಂಜನಾ ರ ವಿವಾಹವಾಗಿದೆ ಎನ್ನಲಾಗುತ್ತಿದೆ, ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರೂ ಹಾರಗಳನ್ನು ತೊಟ್ಟಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಂಜನಾರ ಕುಟುಂಬದವರು ಹೇಳಿರುವಂತೆ, ಸಂಜನಾ-ಅಜೀಜ್‌ಗೆ ನಿಶ್ಚಿತಾರ್ಥವಷ್ಟೆ ಆಗಿದೆ, ಇನ್ನೂ ಮದುವೆ ಆಗಿಲ್ಲ.

  English summary
  Complaint filed against a maulvi for converting Sanjjanaa Galrani's religion forcefully.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X