ಬೇಬಿ ಡಾಲ್ ವಿರುದ್ಧ ದೂರು ದಾಖಲು: ನಿವೇದಿತಾ ನಿಮಗಿದು ಬೇಕಿತ್ತಾ.?

By Harshitha

Recommended Video

ನಿವೇದಿತಾ ಗೌಡ ವಿರುದ್ಧ ದೂರು ದಾಖಲು..! | Filmibeat Kannada

ಡಬ್ ಸ್ಮ್ಯಾಶ್ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದ ಮೈಸೂರು ಮೂಲದ ನಿವೇದಿತಾ ಗೌಡ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ಮೇಲೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಫೇಮಸ್ ಆಗ್ಬಿಟ್ರು.

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿರುವ ನಿವೇದಿತಾ ಗೌಡ ಸಾಮಾಜಿಕ ಜವಾಬ್ದಾರಿಯನ್ನು ಮರೆತು 'ಕಿಕಿ ಚಾಲೆಂಜ್' ಕ್ರೇಜ್ ಗೆ ಮರುಳಾಗಿ 'ಕಿಕಿ ಡು ಯು ಲವ್ ಮಿ..' ಹಾಡಿಗೆ ಚಲಸುತ್ತಿದ್ದ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿ, ಆ ವಿಡಿಯೋನ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು.

ನಿವೇದಿತಾ ಗೌಡರ ಈ ನಡೆ ನೆಟ್ಟಿಗರಿಗೆ ಕೋಪ ತರಿಸಿತ್ತು. 'ಕಿಕಿ ಚಾಲೆಂಜ್' ಹಲವು ಕಡೆ ಬ್ಯಾನ್ ಆಗಿದೆ. ಇದರ ಬಗ್ಗೆ ತಿಳಿದುಕೊಳ್ಳದೇ, ನಿವೇದಿತಾ ಗೌಡ ವಿಡಿಯೋ ಹಾಕಿದ್ಮೇಲೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಬರಲು ಶುರು ಆಯ್ತು.

ಇದೀಗ ಇದೇ ವಿಡಿಯೋದಿಂದ ನಿವೇದಿತಾ ಗೌಡಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ, ನಿವೇದಿತಾ ಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ.....

ಹಲಸೂರು ಗೇಟ್ ಪೊಲೀಸ್ ಠಾಣೆ ದೂರು

ಹಲಸೂರು ಗೇಟ್ ಪೊಲೀಸ್ ಠಾಣೆ ದೂರು

'ಬೇಬಿ ಡಾಲ್' ನಿವೇದಿತಾ ಗೌಡ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡ ಒಕ್ಕೂಟ ಸಂಘಟನೆ ನಿವೇದಿತಾ ಗೌಡ ಬಗ್ಗೆ ಕಂಪ್ಲೇಂಟ್ ಮಾಡಿದೆ.

ಕಾನೂನು ಕ್ರಮ ಕೈಗೊಳ್ಳಬೇಕು

ಕಾನೂನು ಕ್ರಮ ಕೈಗೊಳ್ಳಬೇಕು

ಮೈಸೂರಿನಲ್ಲಿ ಚಲಿಸುತ್ತಿದ್ದ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿ 'ಕಿಕಿ ಚಾಲೆಂಜ್' ಸಂಪೂರ್ಣಗೊಳಿಸಿದ್ದಾರೆ ನಿವೇದಿತಾ ಗೌಡ. ಸಾಲದಕ್ಕೆ, ವಿಡಿಯೋನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದರಿಂದ, 'ಕಿಕಿ ಚಾಲೆಂಜ್' ಸ್ವೀಕರಿಸುವಂತೆ ಹಲವರಿಗೆ ಪ್ರಚೋದನೆ ಕೊಟ್ಟ ಹಾಗೆ ಆಗಿದೆ. ಹೀಗಾಗಿ, ನಿವೇದಿತಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಒಕ್ಕೂಟ ಸಂಘಟನೆ ಪೊಲೀಸರಿಗೆ ಒತ್ತಾಯಿಸಿದೆ.

ನಿವೇದಿತಾ ಗೌಡಗೆ ಇದು ಬೇಕಿತ್ತಾ.?

ನಿವೇದಿತಾ ಗೌಡಗೆ ಇದು ಬೇಕಿತ್ತಾ.?

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಿವೇದಿತಾ ಗೌಡಗೆ 'ಕಿಕಿ ಚಾಲೆಂಜ್' ನಿಂದ ಆಗಿರುವ ಅನಾಹುತಗಳ ಬಗ್ಗೆ ಅರಿವು ಇರ್ಲಿಲ್ವಾ.? 'ಕಿಕಿ ಚಾಲೆಂಜ್' ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಇದನ್ನೆಲ್ಲಾ ತಿಳಿದುಕೊಳ್ಳದೇ ನಿವೇದಿತಾ ಗೌಡ 'ಕಿಕಿ ಚಾಲೆಂಜ್' ಒಪ್ಪಿಕೊಂಡ್ರಾ.? 'ಬಿಗ್ ಬಾಸ್' ಮೂಲಕ ಎಲ್ಲರ ಮನಗೆದ್ದಿದ್ದ ನಿವೇದಿತಾ ಗೌಡಗೆ ಇದು ಬೇಕಿತ್ತಾ.?

ಏನಿದು ಕಿಕಿ ಚಾಲೆಂಜ್.?

ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.! ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು. 'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಕೆಲವೆಡೆ ಬ್ಯಾನ್ ಮಾಡಲಾಗಿದೆ.

More from Filmibeat

English summary
Complaint filed against Niveditha Gowda for accepting Dangerous KiKi Challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X