For Quick Alerts
  ALLOW NOTIFICATIONS  
  For Daily Alerts

  ಮಗಳನ್ನು ಕೊಡ್ತೀನಿ ಎಂದು ರಜನಿ ಮೋಸ, ದೂರು

  By ಶಂಕರ್, ಚೆನ್ನೈ
  |

  ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ ದೇವರೆಂದೇ ಭಾವಿಸುವ ಅಭಿಮಾನಿ ಬಳಗವಿದೆ. ಇದುವರೆಗೂ ರಜನಿಕಾಂತ್ ಅದೆಷ್ಟೂ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಆ ರೀತಿಯ ವ್ಯಕ್ತಿಯ ಮೇಲೆ ವ್ಯಕ್ತಿಯೊಬ್ಬ ಗಂಭೀರ ಆರೋಪ ಮಾಡಿದ್ದಾರೆ.

  ಕೇವಲ ಆರೋಪವಷ್ಟೇ ಅಲ್ಲ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತಿದ್ದಾರೆ. ಸುಮಾರು 38ರ ಪ್ರಾಯದ ಪಿ.ಕೆ. ಕರುಣಾ ಎಂಬುವವರು ರಜನಿಕಾಂತ್ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ಈತ ಮಾಡುತ್ತಿರುವ ಆರೋಪವೂ ಸಖತ್ ಇಂಟರೆಸ್ಟಿಂಗ್ ಆಗಿದೆ.

  ರಜನಿಕಾಂತ್ ತಮ್ಮ ಮಗಳು ಐಶ್ವರ್ಯಾರನ್ನು ತನಗೆ ಕೊಟ್ಟು ಮದುವೆ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರು. ಆದರೆ ಅವರು ತಮ್ಮ ಮಾತನ್ನು ಮುರಿದು ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆತನ ಮಾತನ್ನು ಕೇಳಿದ ಪೊಲೀಸರು ಶಾಕ್ ಆಗಿದ್ದಾರೆ. ಬಳಿಕ ಆತನಿಗೆ ಎಚ್ಚರಿಕೆ ಕೊಟ್ಟು ಮನೆಗೆ ಸಾಗಹಾಕಿದ್ದಾರೆ.

  ಅಷ್ಟಕ್ಕೆ ಸುಮ್ಮನಾಗದ ಕರುಣಾ ಒಂದು ಆಂಗ್ಲ ಪತ್ರಿಕೆಯನ್ನು ಸಂಪರ್ಕಿಸಿ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಐಶ್ವರ್ಯಾ ರಜನಿಕಾಂತ್ ಅವರು ಒಂದು ಅನಿಮೇಷನ್ ಮೂವಿ ಮಾಡಲು ನಿರ್ಧರಿಸಿದ್ದರು. ತಾನು ಸೆಟ್ ಹಾಕಲು ಒಪ್ಪಿಕೊಂಡಿದ್ದೆ. ಈ ಸಂದರ್ಭದಲ್ಲಿ ರಜನಿಕಾಂತ್ ಅವರು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮಾತುಕೊಟ್ಟಿದ್ದರು.

  ಚಿತ್ರದಲ್ಲಿ ಲೀಡ್ ಪಾತ್ರಕ್ಕೆ ಅವಕಾಶ ಕೊಡುತ್ತೇನೆ ಎಂದೂ ಭರವಸೆ ಕೊಟ್ಟಿದ್ದರು. ಈಗ ಅವರು ತಮ್ಮ ಮಾತನ್ನು ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈತನ ಮಾತಿನಲ್ಲಿ ಹುರುಳಿಲ್ಲ ಹಾಗೂ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ.

  English summary
  According TOI, There was a flutter at the police commissioner's office here on Friday when a 38-year-old man came to lodge a complaint against actor Rajinikanth. Karuna, said, "I am from a village near Karuna. When Aishwarya Rajnikanth was planning an animation movie, I promised to fix the sets. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X