For Quick Alerts
  ALLOW NOTIFICATIONS  
  For Daily Alerts

  ಬಾಡಿಗೆ ವಿವಾದ: ನಟ ಆದಿತ್ಯ ಕುಟುಂಬದ ವಿರುದ್ಧ ಮನೆ ಮಾಲೀಕ ದೂರು

  |

  ಮನೆ ಬಾಡಿಗೆ ಕಟ್ಟಿಲ್ಲ ಮತ್ತು ಮನೆ ಖಾಲಿ ಮಾಡುತ್ತಿಲ್ಲ ಎಂದು ಆರೋಪಿಸಿ ಸ್ಯಾಂಡಲ್ ವುಡ್ ನಟ ಆದಿತ್ಯ ಕುಟುಂಬ ವಿರುದ್ಧ ಮನೆ ಮಾಲೀಕ ಪ್ರಸನ್ನ ಎಂಬುವರರು ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದರು.

  ಕೋರ್ಟ್ ನಲ್ಲಿ ಕೇಸ್ ಇದ್ದರೂ ಮತ್ತೆ ಮನೆಯ ಬಳಿ ಗಲಾಟೆ ಮಾಡುತ್ತಿದ್ದಾರೆ, ಧಮ್ಕಿ ಹಾಕುತ್ತಿದ್ದಾರೆ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಮನೆ ಮಾಲಿಕ ಪ್ರಸನ್ನ ಪೊಲೀಸ್ ದೂರು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  ಸದಾಶಿವನಗರದ ಆರ್.ಎಂ.ವಿ ಎಕ್ಷಟೆನ್ಷನ್ ಲ್ಲಿರುವ ಪ್ರಸನ್ನ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಟ ಆದಿತ್ಯ ಅವರ ಕುಟುಂಬ ಬಾಡಿಗೆಗೆ ವಾಸವಾಗಿದೆ. ಆದ್ರೆ, ಕಳೆದ ಏಳು ತಿಂಗಳಿನಿಂದ ಬಾಡಿಗೆ ನೀಡಿರಲಿಲ್ಲ. ಇದನ್ನ ಕೇಳಿದ್ದ ನಮ್ಮ ಮೇಲೆ ದೌರ್ಜನ್ಯ ಮಾಡ್ತಾರೆ ಎಂದು ಆರೋಪಿಸಿದ್ದಾರೆ.

  ಇಂಡಸ್ಟ್ರಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ: ಆದಿತ್ಯ ಫುಲ್ ಗರಂ ಇಂಡಸ್ಟ್ರಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ: ಆದಿತ್ಯ ಫುಲ್ ಗರಂ

  ನಟ ಆದಿತ್ಯ, ಅವರ ತಂದೆ ಖ್ಯಾತ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ತಂಗಿ ರಿಷಿಕಾ ಸಿಂಗ್ ಹಾಗೂ ತಾಯಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ಮನೆ ಮಾಲೀಕ ಪ್ರಸನ್ನ ಅವರ ಹೇಳುವ ಪ್ರಕಾರ, 2.88 ಲಕ್ಷ ಬಾಡಿಗೆ ಹಣ ಪಾವತಿಸಬೇಕಾಗಿದೆ ಎಂದಿದ್ದಾರೆ.

  ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ''ಈ ಬಗ್ಗೆ ಕೋರ್ಟ್ ನಲ್ಲಿ ಪ್ರಕರಣ ಇದೆ. ಸದ್ಯದಲ್ಲೇ ವಿಚಾರಣೆಯೂ ನಡೆಯುತ್ತೆ. ನಾವು ಕೋರ್ಟ್ ಗೆ ಬಾಡಿಗೆ ಕಟ್ಟುತ್ತೇವೆ. ನಮ್ಮ ವಕೀಲರು ಅದೇ ಹೇಳಿದ್ದಾರೆ'' ಎಂದು ತಿಳಿಸಿದ್ದಾರೆ.

  ಈ ಕಡೆ ಸದಾಶಿವನಗರದಲ್ಲಿ ರಾಜೇಂದ್ರಸಿಂಗ್ ಬಾಬು ಮತ್ತು ಆದಿತ್ಯ ವಿರುದ್ಧ ಮನೆ ಮಾಲೀಕ ನೀಡಿರುವ ದೂರಿನ ಅನ್ವಯ ವಿಚಾರಣೆ ಕೂಡ ನಡೆಯುವ ಸಾಧ್ಯತೆ ಇದೆ.

  English summary
  House owner prasanna has filed complaint against director sv rajendra singh babu and his son aditya in sadashiv nagar police station regarding house rent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X