ಖ್ಯಾತ ಖಳ ನಟ ಧರ್ಮ ವಿರುದ್ಧ ದೂರು ದಾಖಲು

By Pavithra

Recommended Video

ಧರ್ಮದೇಟು ಬೀಳುವ ಕೆಲಸ ಮಾಡಿದ್ದಾನೆ ಧರ್ಮ..!! | Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಖಳ ನಟನಾಗಿ ಗುರುತಿಸಿಕೊಂಡಿರುವ ಧರ್ಮ ಅವರ ಮೇಲೆ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧರ್ಮ ಮಹಿಳೆಯ ಅಶ್ಲೀಲ ವಿಡಿಯೋ ಮಾಡಿ ಬೆದರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂರು ತಿಂಗಳ ಹಿಂದೆ ನಟ ಧರ್ಮ ಮಹಿಳೆಯೊಬ್ಬರಿಗೆ ಶೂಟಿಂಗ್ ಇದೆ ಎಂದು ತನ್ನ ಕಾರು ಚಾಲಕ ನವೀನ್ ಮೂಲಕ ಕರೆಸಿಕೊಂಡಿದ್ದರಂತೆ. ನಂತ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎನ್ನುವ ಕಾರಣ ಹೇಳಿ ಊಟಕ್ಕೆ ಕರೆದೊಯ್ದು ಊಟದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿಕೊಂಡಿದ್ದಾರಂತೆ

complaint has been lodged againstactor Dharma

ಆ ವಿಡಿಯೋವನ್ನು ಮಹಿಳೆಯ ಮನೆಯವರಿಗೆ ತೋರಿಸುವುದಾಗಿ ಬೆದರಿಸಿ 15 ಲಕ್ಷ ವಸೂಲಿ ಮಾಡಿದ್ದಾರಂತೆ. ಇದರಿಂದ ಬೇಸತ್ತು ಮಹಿಳೆ ಕೊನೆಗೆ ಎರಡು ತಿಂಗಳ ಹಿಂದೆಯೇ ಬೇಗೂರು ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಎರಡು ತಿಂಗಳಾದರು ಧರ್ಮನನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರನ್ನು ಮಹಿಳೆ ವಿಚಾರಿಸಿದರೆ ಧರ್ಮ ಹಾಗೂ ಚಾಲಕ ನವೀನ್ ತಲೆತಪ್ಪಿಸಿಕೊಂಡಿದ್ದಾರೆ ಎಂದು ಸಬೂಬು ಹೇಳುತ್ತಾರಂತೆ.

complaint has been lodged againstactor Dharma

ಧರ್ಮ ಕನ್ನಡದ ಪ್ರಮುಖ ಚಿತ್ರಗಳಲ್ಲಿ ಪ್ರಮುಖ ನಾಯಕ ನಟರೊಡನೆ ಖಳನಾಯಕನ ಪಾತ್ರ, ಪೊಲೀಸ್ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ ಧರ್ಮ ಮೇಲೆ ಸೆಕ್ಷನ್ 506 ಹಾಗೂ 384 ಆಡಿ ದೂರು ದಾಖಲಾಗಿದೆ. ಆದ್ರೆ ಪೊಲೀಸರು ಮಾತ್ರ ಇದೂವರೆಗೂ ಧರ್ಮ ಅವರನ್ನು ಬಂಧಿಸಿಲ್ಲ. ಇತ್ತ ಈ ವಿಚಾರ ಮಹಿಳೆಯ ಮನೆಯಲ್ಲಿ ತಿಳಿದು ಮಹಿಳೆಯ ಕುಟುಂಬದಲ್ಲಿ ಕೌಟುಂಬಿಕ ಕಲಹ ಶುರುವಾಗಿದೆ.

More from Filmibeat

English summary
A complaint has been lodged against a Kannada film actor Dharma at Begur police station. woman alleges of blackmail from actor dharma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X