For Quick Alerts
  ALLOW NOTIFICATIONS  
  For Daily Alerts

  ಅಲ್ಲಾಹ್ ಕುರಿತು ಫೇಸ್‌ಬುಕ್ ಪೋಸ್ಟ್: ಪ್ರಥಮ್ ವಿರುದ್ಧ ದೂರು ದಾಖಲು

  |

  ಬಿಗ್‌ಬಾಸ್ ಪ್ರಥಮ್ ವಿರುದ್ಧ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಜಿ ಹಳ್ಳಿ, ಡಿಕೆ ಹಳ್ಳಿ ಗಲಭೆ ಕುರಿತು ಪ್ರಥಮ್ ಹಾಕಿದ್ದ ಪೋಸ್ಟ್ ಈ ದೂರಿಗೆ ಕಾರಣ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಆರೋಪಿಗಳ ಸಂಬಂಧಿ ಮಹಿಳೆಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ತಮಗೆ 4 ತಿಂಗಳ ಮಗು ಹಾಗೂ ಏಳು ತಿಂಗಳ ಮಗು ಇದೆ ಎಂದು ಹೇಳಿದ್ದರು. ಇದನ್ನು ವ್ಯಂಗ್ಯದ ಧಾಟಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು ಪ್ರಥಮ್. ಈ ಪೋಸ್ಟ್ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

  'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ

  ಫ್ರಥಮ್‌ ವಿರುದ್ಧ ಹಲಸೂರು ಗೇಟ್ ಪೋಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಸದಸ್ಯ ಅಬ್ದುಲ್ ಫಾರೂಕ್ ಎಂಬಾತ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್ 295 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  ಅಲ್ಲಾ ಪವಾಡ ಮಾಡಿರಬೇಕು ಎಂದಿದ್ದ ಪ್ರಥಮ್

  ಅಲ್ಲಾ ಪವಾಡ ಮಾಡಿರಬೇಕು ಎಂದಿದ್ದ ಪ್ರಥಮ್

  'ಇಂತಹ ಮುಗ್ಧ ಮುಸ್ಲಿಮ್‌ಗಳು ಅನ್‌-ಎಜ್ಯುಕೇಟೆಡ್‌ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರಬೇಕು. 4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ?' ಎಂದು ಪೋಸ್ಟ್ ಹಾಕಿದ್ದರು.

  ಎಲ್ಲಾ ಅಲ್ಲಾ ಮಹಿಮೆ ಎಂದು ವ್ಯಂಗ್ಯವಾಡಿದ್ದ ಪ್ರಥಮ್

  ಎಲ್ಲಾ ಅಲ್ಲಾ ಮಹಿಮೆ ಎಂದು ವ್ಯಂಗ್ಯವಾಡಿದ್ದ ಪ್ರಥಮ್

  ಮುಂದುವರೆದು, '4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ? ಸೈನ್ಸ್‌ಗೆ ಅಸಾಧ್ಯವಾದದ್ದು ಅಲ್ಲಾಗೆ ಮಾತ್ರ ಸಾಧ್ಯ. ಖುದಾಫೀಸ್‌. ಸಬ್‌ ಅಲ್ಲಕ್‌ ಮೆಹರುಬಾನಿ!' ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು ಪ್ರಥಮ್.

  ಕೆಜಿ ಹಳ್ಳಿ ಗಲಭೆ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಪ್ರಥಮ್ ಗೆ ಬೆದರಿಕೆ ಕರೆ: ದೂರು ನೀಡುವುದಾಗಿ ಎಚ್ಚರಿಕೆಕೆಜಿ ಹಳ್ಳಿ ಗಲಭೆ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಪ್ರಥಮ್ ಗೆ ಬೆದರಿಕೆ ಕರೆ: ದೂರು ನೀಡುವುದಾಗಿ ಎಚ್ಚರಿಕೆ

  ಪ್ರಥಮ್‌ಗೆ ಬೆದರಿಕೆ ಸಂದೇಶ

  ಪ್ರಥಮ್‌ಗೆ ಬೆದರಿಕೆ ಸಂದೇಶ

  ಈ ಪೋಸ್ಟ್‌ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್‌ ಅನ್ನು ಡಿಲೀಟ್ ಮಾಡಿದ ಪ್ರಥಮ್, 'ಕೆಲವು ಮುಸ್ಲಿಂ ಗೆಳೆಯರು ಸಲಹೆ ನೀಡಿದ್ದರಿಂದ ಪೋಸ್ಟ್ ಡಿಲೀಟ್ ಮಾಡಿದ್ದೇನೆ. ಆದರೆ ಕೆಲವರು ನನಗೆ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕಚೇರಿ ಸಂಖ್ಯೆಗೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ' ಎಂದಿದ್ದಾರೆ.

  ಲಿಖಿತ ದೂರು ನೀಡುತ್ತೇನೆಂದ ಪ್ರಥಮ್

  ಲಿಖಿತ ದೂರು ನೀಡುತ್ತೇನೆಂದ ಪ್ರಥಮ್

  ತಮಗೆ ಬರುತ್ತಿರುವ ಬೆದರಿಕೆ ಸಂದೇಶಗಳ ವಿರುದ್ಧ ತಾವೂ ಸಹ ಪ್ರಕರಣ ದಾಖಲಿಸುವುದಾಗಿ ಪ್ರಥಮ್ ಹೇಳಿದ್ದರು. ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಲಿಖಿತ ದೂರು ದಾಖಲಿಸುತ್ತೇನೆ. ನಾನು ದೂರು ದಾಖಲಿಸಿದರೆ ಮತ್ತಷ್ಟು ಕುಟುಂಬಗಳು ಸಮಸ್ಯೆಗೆ ಒಳಗಾಗುತ್ತವೆ ಎಂದು ಹೇಳಿದ್ದರು ಪ್ರಥಮ್.

  English summary
  Police complaint lodge against Bigg Boss Pratham for hurting religious feelings. Pratham saind he will also lodge complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X