For Quick Alerts
  ALLOW NOTIFICATIONS  
  For Daily Alerts

  ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದೀಪ್ ವಿರುದ್ದ ದೂರು ದಾಖಲು

  By Pavithra
  |
  ಸುದೀಪ್ ವಿರುದ್ದ ದೂರು ದಾಖಲು | Sudeep faceing a case..! | Filmibeat Kannada

  ಕಿಚ್ಚ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾದ 'ವಾರಸ್ದಾರ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿತ್ತು. ಪ್ರೋಮೋ ಮೂಲಕವೇ ಭಾರಿ ಸುದ್ದಿ ಮಾಡಿದ್ದ 'ವಾರಸ್ದಾರ' ಸೀರಿಯಲ್ ಆರಂಭದಲ್ಲಿ ಭಾರಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.

  ಆದರೆ ಕೆಲವೇ ಕೆಲವು ದಿನಗಳಲ್ಲಿ 'ವಾರಸ್ದಾರ' ಧಾರಾವಾಹಿ ಟಿ ಆರ್ ಪಿ ಕಳೆದುಕೊಂಡ ಹಿನ್ನಲೆಯಲ್ಲಿ ಅರ್ಧಕ್ಕೆ ನಿಂತು ಹೋಯಿತು. ಸೀರಿಯಲ್ ಟಿ ಆರ್ ಪಿ ಯಲ್ಲಿ ನಷ್ಟ ಮಾಡಿಕೊಂಡಿದ್ದು ಮಾತ್ರವಲ್ಲದೆ, ಚಿತ್ರೀಕರಣಕ್ಕಾಗಿ ಜಾಗ ನೀಡಿದವರಿಗೂ ಧಾರಾವಾಹಿ ತಂಡದಿಂದ ಮೋಸ ಆಗಿದೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

  22 ವರ್ಷದ ಹಿಂದೆ ಸೋತ ಜಾಗದಲ್ಲಿಂದು ಸುದೀಪ್ ಸಂಭ್ರಮಾಚರಣೆ22 ವರ್ಷದ ಹಿಂದೆ ಸೋತ ಜಾಗದಲ್ಲಿಂದು ಸುದೀಪ್ ಸಂಭ್ರಮಾಚರಣೆ

  'ವಾರಸ್ದಾರ' ಧಾರಾವಾಹಿಯ ಚಿತ್ರೀಕರಣ ಚಿಕ್ಕ ಮಂಗಳೂರಿನ ಬಳಿ ನಡೆಸಲಾಗುತ್ತಿತ್ತು. ಚಿತ್ರೀಕರಣಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಿಕೊಂಡ ತಂಡ ಕಾಫಿ ತೋಟದಲ್ಲಿದ್ದ ಮರ, ಗಿಡಗಳನ್ನು ಕತ್ತರಿಸಿ ಧಾರಾವಾಹಿ ಸೆಟ್ ನಿರ್ಮಾಣ ಮಾಡಿಕೊಂಡಿದ್ದರು. ನಂತರ ಅದರ ವೆಚ್ಚವನ್ನು ಭರಿಸುವುದಾಗಿ ಧಾರಾವಾಹಿ ತಂಡ ಭರವಸೆ ನೀಡಿದ್ದರು. ಆದರೆ ಈಗ ಕಿಚ್ಚ ಕ್ರಿಯೇಷನ್ಸ್ ನಿಂದ ಕೊಟ್ಟ ಭರವಸೆಯನ್ನು ಪೂರೈಸದ ಹಿನ್ನಲೆಯಲ್ಲಿ ಕಾಫಿ ತೋಟದ ಮಾಲಿಕರು ಮುಖ್ಯಮಂತ್ರಿಗಳಿಗೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸುದೀಪ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಹಾಗಾದರೆ ದೂರು ನೀಡಿದವರು ಯಾರು? ದೂರಿನಲ್ಲಿ ಏನಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ಕಿಚ್ಚ ಕ್ರಿಯೇಷನ್ಸ್ ವಿರುದ್ಧ ದೂರು

  ಕಿಚ್ಚ ಕ್ರಿಯೇಷನ್ಸ್ ವಿರುದ್ಧ ದೂರು

  ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಆಗಿದ್ದ 'ವಾರಸ್ದಾರ' ಧಾರಾವಾಹಿ ಚಿತ್ರೀಕರಣಕ್ಕಾಗಿ ಜಾಗ ಬಳಸಿಕೊಂಡು. ಅಲ್ಲಿದ್ದ ಬೆಳೆಯನ್ನು ನಾಶ ಮಾಡಿ ಸೆಟ್ ನಿರ್ಮಾಣ ಮಾಡಿದ್ದರು. ನಂತರ ಅದಕ್ಕೆ ತಕ್ಕನಾದ ಹಣವನ್ನು ನೀಡುವುದಾಗಿ ಕಿಚ್ಚ ಕ್ರಿಯೇಷನ್ಸ್ ಸಿಬ್ಬಂದಿ ತಿಳಿಸಿದ್ದರಂತೆ. ಆದರೆ ಈಗ ಯಾವುದೇ ಹಣ ಪಾವತಿ ಮಾಡದೇ ನಷ್ಟ ಮಾಡಿದ್ದಾರೆ ಎಂದು ತೋಟದ ಮಾಲಿಕರಾದ ದೀಪಕ್ ಮಯೂರ್ ಪಟೇಲ್ ದೂರು ದಾಖಲು ಮಾಡಿದ್ದಾರೆ.

  ಕಿಚ್ಚ ಕ್ರಿಯೇಷನ್ಸ್ ನಿಂದ ಕೋಟಿಗಟ್ಟಲೆ ನಷ್ಟ

  ಕಿಚ್ಚ ಕ್ರಿಯೇಷನ್ಸ್ ನಿಂದ ಕೋಟಿಗಟ್ಟಲೆ ನಷ್ಟ

  ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಕಾಫಿ ಮತ್ತು ಮೆಣಸಿನ ಗಿಡವನ್ನು ಸಂಪೂರ್ಣವಾಗಿ ಧಾರಾವಾಹಿ ತಂಡದವರು ನಾಶ ಮಾಡಿದ್ದಾರೆ. ಇದರಿಂದ ಒಂದೂವರೆ ಕೋಟಿ ನಷ್ಟವಾಗಿದೆ ಎಂದು ದೀಪಕ್ ಆರೋಪಿಸಿದ್ದಾರೆ.

  ಸುದೀಪ್ ಮ್ಯಾನೇಜರ್ ವಿರುದ್ಧ ಆರೋಪ

  ಸುದೀಪ್ ಮ್ಯಾನೇಜರ್ ವಿರುದ್ಧ ಆರೋಪ

  ಇದೇ ವಿಚಾರವಾಗಿ ಸುದೀಪ್ ಅವರ ಮ್ಯಾನೇಜರ್ ಅವರನ್ನು ಸಂಪರ್ಕ ಮಾಡಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಕಾಫಿ ತೋಟದ ಮಾಲಿಕರಾದ ದೀಪಕ್ ಮಯೂರ್ ಪಟೇಲ್ ತಿಳಿಸಿದ್ದಾರೆ.

  ಅರ್ಧಕ್ಕೆ ನಿರ್ಮಾಣ ನಿಲ್ಲಿಸಿದ್ದ ಕಿಚ್ಚ?

  ಅರ್ಧಕ್ಕೆ ನಿರ್ಮಾಣ ನಿಲ್ಲಿಸಿದ್ದ ಕಿಚ್ಚ?

  'ವಾರಸ್ದಾರ' ಧಾರಾವಾಹಿ ತಂಡಕ್ಕೂ ಹಾಗೂ ಸುದೀಪ್ ಅವರಿಗೂ ಸರಿಯಾದ ಹೊಂದಾಣಿಕೆ ಆಗದ ಕಾರಣ ಸುದೀಪ್ ನಿರ್ಮಾಣದಿಂದ ಹೊರ ಬಂದಿದ್ದರು ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ತಿಳಿಯಬೇಕಿದೆ. ಸದ್ಯ ಇದು ಯಾರಿಂದ ಆಗಿರುವ ತಪ್ಪು ಎನ್ನುವ ವಿಚಾರ ಹೊರ ಬರಬೇಕಿದೆ.

  English summary
  The complaint was filed against Sudeep at karnataka film chamber of commerce.The owner of a coffee plantation in Chikmagalur filed a complaint with film chamber against Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X