For Quick Alerts
  ALLOW NOTIFICATIONS  
  For Daily Alerts

  ಆಮಿ ಜಾಕ್ಸನ್ 'ಗೆಳತಿ' (Wife) ಬಗ್ಗೆ ಕುತೂಹಲಕಾರಿ ಸಂಗತಿ

  By Bharath Kumar
  |

  ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಪೋಸ್ಟ್ ಮಾಡಿದ್ದ ಲೇಟೆಸ್ಟ್ ಫೋಟೋ ಮತ್ತು ಸ್ಟೇಟಸ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಠಿಸಿತ್ತು. ಗೆಳತಿಯೊಬ್ಬಳ ಜೊತೆ ತುಂಬಾ ಆತ್ಮೀಯವಾಗಿ ತಬ್ಬಿಕೊಂಡು ''ವೈಫ್-ಲೈಫ್'' ಎಂದು ಅಡಿಬರಹ ನೀಡಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು.

  ಆಮಿ ಜಾಕ್ಸನ್ ರೀತಿಯಲ್ಲೇ ಈ ನಟಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಆಮಿ ಮತ್ತು ತಾನು ಒಟ್ಟಿಗೆ ಇರುವ ಫೋಟೋ ಹಾಕಿ ಅದಕ್ಕೆ 'ವೈಫಿ' ಎಂದು ಬರೆದುಕೊಂಡಿದ್ದಾರೆ.

  ಇದನ್ನ ಗಂಭೀರವಾಗಿ ನೋಡಿದ್ದ ನೆಟ್ಟಿಗರು ಬಹುಶಃ ಇವರು 'ಸಲಿಂಗಕಾಮಿ' ಇರಬಹುದು ಎಂದು ಕಾಮೆಂಟ್ ಮಾಡಿದ್ದರು. ಅಷ್ಟಕ್ಕೂ, ಆಮಿ ಜಾಕ್ಸನ್ ಅವರನ್ನ ತಬ್ಬಿಕೊಂಡಿದ್ದ ಮತ್ತೋರ್ವ ಹುಡುಗಿ ಯಾರು ಎಂಬುದು ಸದ್ಯದ ಕುತೂಹಲ. ಆಮಿ ಜಾಕ್ಸನ್ ಗೆಳತಿ ಯಾರು ಎಂಬುದು ಮುಂದೆ ಓದಿ...

  ಈಕೆ ಮೂಲತಃ ಭಾರತದವರು

  ಈಕೆ ಮೂಲತಃ ಭಾರತದವರು

  ಆಮಿ ಜಾಕ್ಸನ್ ಅವರ ಗೆಳತಿ ಹೆಸರು ನೀಲಂ ಗಿಲ್. ನೀಲಂ ಗಿಲ್ ಅವರ ಹಿರಿಯರು ಮೂಲತಃ ಭಾರತದವರು. ಪಂಜಾಬ್ ನ ಸಿಖ್ ಕುಟುಂಬದವರು. ನಂತರ ಯುನೈಟೆಡ್ ಕಿಂಗ್‍ಡಮ್ ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ.

  ಅಚ್ಚರಿ ಮೂಡಿಸಿದ ಸ್ಟೇಟಸ್: ಆಮಿ ಜಾಕ್ಸನ್ 'ಸಲಿಂಗಕಾಮಿ'ನಾ.? ಅಚ್ಚರಿ ಮೂಡಿಸಿದ ಸ್ಟೇಟಸ್: ಆಮಿ ಜಾಕ್ಸನ್ 'ಸಲಿಂಗಕಾಮಿ'ನಾ.?

  ಜೈನಾ ಮಲ್ಲಿಕ್ ಜೊತೆ ಡೇಟಿಂಗ್.!

  ಜೈನಾ ಮಲ್ಲಿಕ್ ಜೊತೆ ಡೇಟಿಂಗ್.!

  ಇಂಗ್ಲೀಷ್ ಸಿಂಗರ್ ಹಾಗೂ ಬರಹಗಾರ ಜೈನಾ ಮಲ್ಲಿಕ್ ಜೊತೆ ನೀಲಂ ಗಿಲ್ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ನಂತರ ಅದು ಸುಳ್ಳು ಎಂದು ತಿಳಿಯಿತು. ಅದಾದ ಬಳಿಕ ಮತ್ತೆ ಯಾವ ಅಫೇರ್ ಬಗ್ಗೆಯೂ ವರದಿಯಾಗಿಲ್ಲ.

  ಬ್ರಿಟಿಷ್ ಏರ್ವೇಸ್ ನಲ್ಲಿ ಕೆಲಸ

  ಬ್ರಿಟಿಷ್ ಏರ್ವೇಸ್ ನಲ್ಲಿ ಕೆಲಸ

  ನೀಲಂ ಗಿಲ್ ಬ್ರಿಟಿಷ್ ಏರ್ವೇಸ್ ಜೊತೆ ಕೆಲಸ ಮಾಡಿದ್ದು, ಸೀರೆಯುಟ್ಟು ಸಂಪ್ರದಾಯಸ್ಥ ಹುಡುಗಿಯಾಗಿ ಗಮನ ಸೆಳೆದಿದ್ದಾರೆ. ಭಾರತ ಮತ್ತು ಯುಕೆಗೆ ಸಂಬಂಧಪಟ್ಟ ಜಾಹೀರಾತಿನಲ್ಲಿ ನೀಲಂ ಗಿಲ್ ಅಭಿನಯಿಸಿದ್ದಾರೆ.

  ಬ್ರಿಟಿಷ್ ಕೋಟ್ಯಾಧಿಪತಿ ಜೊತೆ 'ವಿಲನ್' ಬೆಡಗಿ ಆಮಿ ಜಾಕ್ಸನ್ ಡೇಟಿಂಗ್.!ಬ್ರಿಟಿಷ್ ಕೋಟ್ಯಾಧಿಪತಿ ಜೊತೆ 'ವಿಲನ್' ಬೆಡಗಿ ಆಮಿ ಜಾಕ್ಸನ್ ಡೇಟಿಂಗ್.!

  ನೀಲಂ ಖ್ಯಾತ ಮಾಡೆಲ್

  ನೀಲಂ ಖ್ಯಾತ ಮಾಡೆಲ್

  ನೀಲಂ ಗಿಲ್ ಲಿಂಗರಿ ಮಾದರಿಯ ಮಾಡೆಲ್ ಆಗಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಶೋ ಕೊಟ್ಟಿರುವ ಈಕೆ ಸಾಕಷ್ಟು ಹಾಟ್ ಫೋಟೋಶೂಟ್ ನಲ್ಲಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ 2018ರ ಕ್ಯಾನ್ಸ್ ರೆಡ್ ಕಾರ್ಪೆಟ್ ನಲ್ಲೂ ಭಾಗಿಯಾಗಿದ್ದರು.

  'ದಿ ವಿಲನ್' ಬೆಡಗಿಯ ಈ ಫೋಟೋ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ'ದಿ ವಿಲನ್' ಬೆಡಗಿಯ ಈ ಫೋಟೋ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ

  'ಲೈಫ್ ಬಾಲ್'ನಲ್ಲಿ ಭಾಗಿಯಾಗಿದ್ದ ಆಮಿ-ನೀಲಂ

  'ಲೈಫ್ ಬಾಲ್'ನಲ್ಲಿ ಭಾಗಿಯಾಗಿದ್ದ ಆಮಿ-ನೀಲಂ

  ಇನ್ನು ಲೈಫ್ ಬಾಲ್ ಕಾರ್ಯಕ್ರಮದಲ್ಲಿ ನಟಿ ಆಮಿ ಜಾಕ್ಸನ್ ಜೊತೆ ನೀಲಂ ಗಿಲ್ ಭಾಗವಹಿಸಿದ್ದರು. ಈ ಫೋಟೋ ಹಂಚಿಕೊಂಡಿದ್ದ ನೀಲಂ 'ವೈಫಿ' ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಹೀಗಾಗಿ, ಇವರಿಬ್ಬರು ಮಧ್ಯೆ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಆದ್ರೆ, ಹಲವರು ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

  English summary
  Amy Jackson has confused her fans with her latest Instagram picture as the post shows a hot and tall woman hugging Amy from the back and the caption set alarm bells as it read "Wife life". who is the lady hugging Amy from the back.? check out here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X