For Quick Alerts
  ALLOW NOTIFICATIONS  
  For Daily Alerts

  ಸೈಮಾ ಬೆಸ್ಟ್ ನಟ ಪ್ರಶಸ್ತಿಯಲ್ಲಿ ಅಪ್ಪು ಕಿಂಗ್; ಅತಿಹೆಚ್ಚು ಬಾರಿ ಸೈಮಾ ಬೆಸ್ಟ್ ನಟಿ ಪಡೆದ ಕನ್ನಡತಿ ಯಾರು?

  |

  ಕಳೆದ ಶನಿವಾರ ಹಾಗೂ ಭಾನುವಾರ ನಮ್ಮ ಬೆಂಗಳೂರಿನಲ್ಲಿ ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಜರುಗಿತು. ಈ ಪೈಕಿ ಮೊದಲ ದಿನ ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ಮತ್ತು ಭಾನುವಾರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

  ಇನ್ನು ಈ ಬಾರಿಯ ಸೈಮಾ ಅವಾರ್ಡ್ಸ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯುವರತ್ನ ಚಿತ್ರದಲ್ಲಿನ ತನ್ನ ಮನೋಜ್ಞ ಅಭಿನಯಕ್ಕಾಗಿ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಇನ್ನು ಬಡವ ರಾಸ್ಕಲ್ ಚಿತ್ರಕ್ಕಾಗಿ ನಟಿ ಅಮೃತಾ ಅಯ್ಯಂಗಾರ್ ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರೆ, ಆಶಿಕಾ ರಂಗನಾಥ್ ಮದಗಜ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

  ಹೀಗೆ ಈ ಬಾರಿಯ ಸೈಮಾದಲ್ಲಿ ಪ್ರಶಸ್ತಿ ಈ ಇಬ್ಬರು ನಟಿಯರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರೆ, ಇಲ್ಲಿಯವರೆಗೂ ನಡೆದಿರುವ ಸೈಮಾ ಅವಾರ್ಡ್‌ಗಳಲ್ಲಿ ಯಾರು ಯಾರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕೆಳಕಂಡಂತಿದೆ ಹಾಗೂ ಅತಿಹೆಚ್ಚು ಬಾರಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕನ್ನಡತಿ ಯಾರು ಎಂಬ ವಿವರ ಮುಂದೆ ಇದೆ.

  ಇಲ್ಲಿಯವರೆಗೂ ಸೈಮಾ ಅತ್ಯುತ್ತಮ ನಾಯಕಿ ಪ್ರಶಸ್ತಿ ಗೆದ್ದವರ ಪಟ್ಟಿ

  ಇಲ್ಲಿಯವರೆಗೂ ಸೈಮಾ ಅತ್ಯುತ್ತಮ ನಾಯಕಿ ಪ್ರಶಸ್ತಿ ಗೆದ್ದವರ ಪಟ್ಟಿ

  2012 - ರಮ್ಯಾ (ಸಂಜು ವೆಡ್ಸ್ ಗೀತಾ)

  2013 - ಪ್ರಿಯಾಮಣಿ (ಚಾರುಲತಾ) ಮತ್ತು ರಾಗಿಣಿ ಶಿವ ಚಿತ್ರಕ್ಕಾಗಿ (ಕ್ರಿಟಿಕ್ಸ್)

  2014 - ಐಂದ್ರಿತಾ ರೇ (ಭಜರಂಗಿ) ಮತ್ತು ಅಮೂಲ್ಯ ಶ್ರಾವಣಿ ಸುಬ್ರಹ್ಮಣ್ಯ ಚಿತ್ರಕ್ಕಾಗಿ (ಕ್ರಿಟಿಕ್ಸ್)

  2015 - ರಾಧಿಕಾ ಪಂಡಿತ್ (ಮಿ & ಮಿ ರಾಮಾಚಾರಿ) ಕೃತಿ ಖರಬಂದ ಸೂಪರ್ ರಂಗ ಚಿತ್ರಕ್ಕಾಗಿ (ಕ್ರಿಟಿಕ್ಸ್)

  2016 - ರಚಿತಾ ರಾಮ್ (ರನ್ನ) ಮತ್ತು ಶಾನ್ವಿ ಶ್ರೀವಾಸ್ತವ ಮಾಸ್ಟರ್‌ಪೀಸ್ ಚಿತ್ರಕ್ಕಾಗಿ (ಕ್ರಿಟಿಕ್ಸ್)

  2017 - ಶ್ರದ್ಧಾ ಶ್ರೀನಾಥ್ (ಯು ಟರ್ನ್) ಮತ್ತು ಪಾರುಲ್ ಯಾದವ್ ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  2018 - ಶಾನ್ವಿ ಶ್ರೀವಾಸ್ತವ (ತಾರಕ್) ಮತ್ತು ಶ್ರುತಿ ಹರಿಹರನ್ ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  2019 - ರಚಿತಾ ರಾಮ್ (ಅಯೋಗ್ಯ) ಮತ್ತು ಮಾನ್ವಿತಾ ಹರೀಶ್ ಟಗರು ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  2020 - ರಚಿತಾ ರಾಮ್ (ಆಯುಷ್ಮಾನ್ಭವ) ಮತ್ತು ರಶ್ಮಿಕಾ ಮಂದಣ್ಣ ಯಜಮಾನ ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  2021 - ಮಿಲನಾ ನಾಗರಾಜ್ (ಲವ್ ಮಾಕ್‌ಟೇಲ್) ಮತ್ತು ಖುಷಿ ರವಿ ದಿಯಾ ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  2022 - ಆಶಿಕಾ ರಂಗನಾಥ್ (ಮದಗಜ) ಮತ್ತು ಅಮೃತ ಅಯ್ಯಂಗಾರ್ ಬಡವ ರಾಸ್ಕಲ್ ಚಿತ್ರಕ್ಕಾಗಿ ( ಕ್ರಿಟಿಕ್ಸ್ )

  ರಚಿತಾ ಅತಿಹೆಚ್ಚು ಪ್ರಶಸ್ತಿ

  ರಚಿತಾ ಅತಿಹೆಚ್ಚು ಪ್ರಶಸ್ತಿ

  ಇನ್ನು ಸೈಮಾ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ನಟಿ ಎಂಬ ಖ್ಯಾತಿಗೆ ರಚಿತಾ ರಾಮ್ ಪಾತ್ರರಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ರನ್ನ ಚಿತ್ರಕ್ಕಾಗಿ ಬೆಸ್ಟ್ ನಟಿ ಪ್ರಶಸ್ತಿ ಪಡೆದ ರಚಿತಾ ರಾಮ್ 2019 ಅಯೋಗ್ಯ ಚಿತ್ರಕ್ಕಾಗಿ ಹಾಗೂ 2020ರಲ್ಲಿ ಆಯುಷ್ಮಾನ್‌ ಭವ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂಲಕ ಒಟ್ಟು ಮೂರು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ರಚಿತಾ ರಾಮ್ ಅತಿಹೆಚ್ಚು ಬಾರಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ನಟಿ ಎನಿಸಿಕೊಂಡಿದ್ದಾರೆ.

  ನಟರಲ್ಲಿ ಅಪ್ಪು ಟಾಪ್

  ನಟರಲ್ಲಿ ಅಪ್ಪು ಟಾಪ್

  ಇನ್ನು ಕನ್ನಡ ವಿಚಾರಕ್ಕೆ ಬಂದರೆ ಅಪ್ಪು ಸಮಕ್ಕೆ ಯಾರೂ ಇಲ್ಲ. ಇಲ್ಲಿಯವರೆಗೂ ಯೂತ್ ಐಕಾನ್ ಪ್ರಶಸ್ತಿಯೂ ಸೇರಿದಂತೆ ಒಟ್ಟು ಐದು ಬಾರಿ ಸೈಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

  ಈ ಬಾರಿ ಪ್ರಶಸ್ತಿ ಗೆದ್ದವರ ಪಟ್ಟಿ

  ಈ ಬಾರಿ ಪ್ರಶಸ್ತಿ ಗೆದ್ದವರ ಪಟ್ಟಿ

  ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

  ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

  ಅತ್ಯುತ್ತಮ ಛಾಯಾಗ್ರಾಹಕ - ಸುಧಾಕರ್ ರಾಜ್ (ರಾಬರ್ಟ್)

  ಅತ್ಯುತ್ತಮ ನಟ - ಪುನೀತ್ ರಾಜ್‌ಕುಮಾರ್ (ಯುವರತ್ನ)

  ಅತ್ಯುತ್ತಮ ನಟಿ - ಅಮೃತ ಅಯ್ಯಂಗಾರ್ - ( ಬಡವ ರಾಸ್ಕಲ್ )

  ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

  ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಆರೋಹಿ ನಾರಾಯಣ (ದೃಶ್ಯ 2)

  ಅತ್ಯುತ್ತಮ ಖಳನಟ - ಪ್ರಮೋದ್ ಶೆಟ್ಟಿ (ಹೀರೊ)

  ಅತ್ಯುತ್ತಮ ಹಾಸ್ಯನಟ - ಚಿಕ್ಕಣ್ಣ (ಪೊಗರು)

  ಅತ್ಯುತ್ತಮ ಉದಯೋನ್ಮುಖ ನಟ - ನಾಗಭೂಷಣ ಎನ್ ಎಸ್ (ಇಕ್ಕಟ್)

  ಅತ್ಯುತ್ತಮ ಉದಯೋನ್ಮುಖ ನಟಿ - ಶರಣ್ಯ ಶೆಟ್ಟಿ (1980)

  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಗುರು ಶಂಕರ್ (ಬಡವ ರಾಸ್ಕಲ್)

  ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

  ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯ (ರಾಬರ್ಟ್)

  ಅತ್ಯುತ್ತಮ ಗೀತರಚನೆಕಾರ - ವಾಸುಕಿ ವೈಭವ್ - ನಿನ್ನ ಸನಿಹಕೆಯಿಂದ "ನಿನ್ನ ಸನಿಹಕೆ"

  ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲಿಕ್, ಥಮನ್ ಎಸ್ - ಯುವರತ್ನದಿಂದ "ನೀನಾದೆ ನಾ"

  ಅತ್ಯುತ್ತಮ ಹಿನ್ನೆಲೆ ಗಾಯಕಿ - ಚೈತ್ರ ಜೆ ಆಚಾರ್ - "ಸೂಜುಗದ ಸೂಜುಮಲ್ಲಿಗೆ" - ಗರುಡ ಗಮನ ವೃಷಭ ವಾಹನ

  English summary
  Complete List of Kannada Actress who have won SIIMA Best Actress Award from 2012 to 2022
  Tuesday, September 13, 2022, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X