Vijay Antony Daughter: ತಮಿಳು ಖ್ಯಾತ ನಟ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಆತ್ಮಹತ್ಯೆ, ಆಘಾತದಲ್ಲಿ ಚಿತ್ರರಂಗ
ತಮಿಳು ಚಿತ್ರೋದ್ಯಮದ ಖ್ಯಾತ ಸಂಗೀತ ಸಂಯೋಜಕ, ನಟ ಮತ್ತು ನಿರ್ಮಾಪಕ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಅವರು ಸೆಪ್ಟೆಂಬರ್ 19 ರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 16 ವರ್ಷ ವಯಸ್ಸಾಗಿತ್ತು. ಘಟನೆಯಿಂದ ಇಡೀ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
ವರದಿಗಳ ಪ್ರಕಾರ, ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಅವರ ಚೆನ್ನೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೀರಾರನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬಾಲಕಿಯ ಸಾವಿಗೆ ಕಾರಣವಾಯಿತೇ ಖಿನ್ನತೆ!?
ಸೆಪ್ಟೆಂಬರ್ 19 ರಂದು ಮುಂಜಾನೆ 3 ಗಂಟೆಗೆ ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ವಿಜಯ್ ಆಂಟೋನಿ ಮಗಳು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆಯ ತಂದೆ ವಿಜಯ್ ಆಂಟೋನಿ ಮಗಳ ಕೋಣೆಗೆ ಬಂದಾಗ ಆಕೆ ಫ್ಯಾನ್‌ಗೆ ನೇಣು ಬಿಗಿದಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ನಂತರ ಆಕೆಯನ್ನು ಸಮೀಪದ ಕಾವೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಸಮಯ ಮೀರಿತ್ತು. ಈ ಬಗ್ಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚೆನ್ನೈನ ಜನಪ್ರಿಯ ಚರ್ಚ್ ಪಾರ್ಕ್ ಶಾಲೆಯಲ್ಲಿ ಓದುತ್ತಿದ್ದ ಅವರು ಖಿನ್ನತೆಯಿಂದ ಬಳಲುತ್ತಿದ್ದಳು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದ್ದರಿಂದ ಪೊಲೀಸರು ಮುಂದಿನ ಹಂತದ ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸಿನಿ ವಲಯದಲ್ಲಿ ಭಾರೀ ಬೇಸರ ಮೂಡಿಸಿದೆ.
ವಿಜಯ್ ಆಂಟೋನಿ
ವಿಜಯ್ ಆಂಟೋನಿ ಜನಪ್ರಿಯ ಸಂಗಿತ ಸಂಯೋಜಕ, ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಸಂಗೀತ ಸಂಯೋಜಕರಾಗಿದ್ದ ಅವರು ನಿರ್ಮಾಪಕ, ನಟ, ಗೀತರಚನೆಕಾರ, ಎಡಿಟರ್, ಆಡಿಯೊ ಎಂಜಿನಿಯರ್ ಮತ್ತು ನಿರ್ದೇಶಕರೂ ಆಗಿ ಖ್ಯಾತಿ ಗಳಿಸಿದ್ದಾರೆ.

ವಿಜಯ್ ಆಂಟೋನಿ ಫಾತಿಮಾ ಅವರನ್ನು ವಿವಾಹವಾಗಿದ್ದಾರೆ. ಫಾತಿಮಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಾರೆ. ವಿಜಯ್ ಮತ್ತು ಫಾತಿಮಾ ಅವರಿಗೆ ಮೀರಾ ಮತ್ತು ಲಾರಾ ಎಂಬ ಹೆಣ್ಣು ಮಕ್ಕಳಿದ್ದಾರೆ. ವಿಜಯ್ ಆಂಟೋನಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, 'ರಥಂ' ಬಿಡುಗಡೆಗೆ ಸಜ್ಜಾಗಿದ್ದಾರೆ. ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ದೊಡ್ಡ ಹಿಟ್ ಆಗಿತ್ತು.


Click it and Unblock the Notifications










