For Quick Alerts
  ALLOW NOTIFICATIONS  
  For Daily Alerts

  ಯಾರ್ರೀ ಹೇಳಿದ್ದು ಸುದೀಪ್ ಗೆ 'ಮೆಗಾ' ಆಫರ್ ಕೈತಪ್ಪಿ ಹೋಯ್ತು ಅಂತ.?!

  By Harshitha
  |

  ಮೆಗಾ ಸ್ಟಾರ್ ಚಿರಂಜೀವಿ ಜೊತೆಗೆ ಕನ್ನಡದ ಕೆಚ್ಚೆದೆಯ ಕಿಚ್ಚ ಸುದೀಪ್ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ರಿ.

  ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!

  ಆದ್ರೆ, ಚಿರಂಜೀವಿ ರವರ 151ನೇ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುವುದಿಲ್ಲ ಎಂಬ ಗುಸುಗುಸು ಸಹ ಕೇಳಿಬಂದಿತ್ತು. ಇದೀಗ ಚಿರಂಜೀವಿ ಜೊತೆಗೆ ಸುದೀಪ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

  ಇಂದು ಚಿರಂಜೀವಿ ಹುಟ್ಟುಹಬ್ಬದ ಪ್ರಯುಕ್ತ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಮುಂದೆ ಓದಿರಿ...

  'ಸೈರಾ ನರಸಿಂಹ ರೆಡ್ಡಿ' ಫಸ್ಟ್ ಲುಕ್ ಔಟ್

  'ಸೈರಾ ನರಸಿಂಹ ರೆಡ್ಡಿ' ಫಸ್ಟ್ ಲುಕ್ ಔಟ್

  ಇಂದು (ಆಗಸ್ಟ್ 22) ಮೆಗಾಸ್ಟಾರ್ ಚಿರಂಜೀವಿ ರವರ 62ನೇ ಹುಟ್ಟುಹಬ್ಬದ ಪ್ರಯುಕ್ತ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

  ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ ಕಿಚ್ಚ ಸುದೀಪ್

  ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ ಕಿಚ್ಚ ಸುದೀಪ್

  'ಸೈರಾ ನರಸಿಂಹ ರೆಡ್ಡಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಕೂಡ ಮಿಂಚಲಿದ್ದಾರೆ. ಬೇಕಾದ್ರೆ, ಚಿತ್ರದ ತಾರಾಗಣ ಹಾಗೂ ತಂತ್ರಜ್ಞರ ಪಟ್ಟಿಯನ್ನ ನೀವೇ ನೋಡ್ಕೊಂಡ್ ಬನ್ನಿ...

  ಮುಖ್ಯಭೂಮಿಕೆಯಲ್ಲಿ ಅಮಿತಾಬ್ ಬಚ್ಚನ್

  ಮುಖ್ಯಭೂಮಿಕೆಯಲ್ಲಿ ಅಮಿತಾಬ್ ಬಚ್ಚನ್

  ಇನ್ನೂ ಇದೇ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಮಿತಾಬ್ ಬಚ್ಚನ್ ಕೂಡ ಇರುವುದು ಖಾತ್ರಿ ಆಗಿದೆ.

  ನಾಯಕಿ ನಯನತಾರಾ

  ನಾಯಕಿ ನಯನತಾರಾ

  'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿರುವವರು ನಯನತಾರಾ. ಉಳಿದಂತೆ ಜಗಪತಿ ಬಾಬು, ವಿಜಯ್ ಸೆತುಪತಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಇರಲಿದೆ.

  ಐತಿಹಾಸಿಕ ಸಿನಿಮಾ

  ಐತಿಹಾಸಿಕ ಸಿನಿಮಾ

  ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನ ಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರವೇ 'ಸೈರಾ ನರಸಿಂಹ ರೆಡ್ಡಿ'. ಉಯ್ಯಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ನಟ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ.

  ಸುದೀಪ್ ಗಿದೆ ಬಹುಮುಖ್ಯ ಪಾತ್ರ

  ಸುದೀಪ್ ಗಿದೆ ಬಹುಮುಖ್ಯ ಪಾತ್ರ

  'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಗೆ ಲಭಿಸಿರುವ ಪಾತ್ರ ಬಹಳ ಪವರ್ ಫುಲ್ ಆಗಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಮಾತನಾಡುವ ಪರಿಣಾಮಕಾರಿ ವ್ಯಕ್ತಿಯಾಗಿ ಸುದೀಪ್ ಕಂಗೊಳಿಸಲಿದ್ದಾರೆ.

  ಮೆಗಾ ಬಜೆಟ್ ಸಿನಿಮಾ

  ಮೆಗಾ ಬಜೆಟ್ ಸಿನಿಮಾ

  'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ರಾಮ್ ಚರಣ್ ಬಂಡವಾಳ ಹೂಡಲಿದ್ದು, ಬರೋಬ್ಬರಿ 150 ಕೋಟಿ ಬಜೆಟ್ ನಲ್ಲಿ ಚಿತ್ರ ತಯಾರಾಗಲಿದೆ.

  English summary
  Kiccha Sudeep is all set to act in Chiranjeevi's 151st film 'Sye Raa Narasimha Reddy'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X