»   » ಯಶ್ ಹೆಸರಲ್ಲಿ ಬಿಟ್ಟಿ ಪಬ್ಲಿಸಿಟಿ ಪಡೆಯುತ್ತಿರುವವರು ಯಾರು?

ಯಶ್ ಹೆಸರಲ್ಲಿ ಬಿಟ್ಟಿ ಪಬ್ಲಿಸಿಟಿ ಪಡೆಯುತ್ತಿರುವವರು ಯಾರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಗೆಲ್ಲುವ ಕುದುರೆ ಅಂದ್ರೆ ಅದು ಯಶ್. ರಾಕಿಂಗ್ ಸ್ಟಾರ್ ಯಶ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುವ ಸಮಯ ಇದು.

'ರಾಜಾಹುಲಿ', 'ಗೂಗ್ಲಿ', 'ಗಜಕೇಸರಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಮಾಸ್ಟರ್ ಪೀಸ್'...ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿರುವ ಯಶ್ ಜೊತೆ ಡ್ಯುಯೆಟ್ ಹಾಡಲು ಯಾವ ನಾಯಕಿ ಬಯಸಲ್ಲ ಹೇಳಿ?

Confirmed; Rachita Ram not playing lead with Yash in 'KGF'

'ಲಕ್ಕಿ' ಯಶ್ ಅಭಿನಯಿಸಲು ಒಪ್ಪಿಕೊಂಡಿರುವ 'ಕೆ.ಜಿ.ಎಫ್' ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಅಂತ ಇಂದು ಬೆಳಗ್ಗೆ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು.[ಮುಂದಿನ ಚಿತ್ರದಲ್ಲಿ ಯಶ್ ಜೊತೆ ರಚಿತಾ ರಾಮ್ ಡ್ಯುಯೆಟ್?]

ಆದ್ರೆ, ಇದು 'ಶುದ್ಧ ಸುಳ್ಳು' ಅಂತ 'ಕೆ.ಜಿ.ಎಫ್' ಚಿತ್ರತಂಡ ಹೇಳಿದೆ. ''ಕೆ.ಜಿ.ಎಫ್' ಚಿತ್ರಕ್ಕಿನ್ನೂ ನಾಯಕಿ ಫಿಕ್ಸ್ ಆಗಿಲ್ಲ. ರಚಿತಾ ರಾಮ್ ಜೊತೆ ಮಾತುಕತೆ ಕೂಡ ನಡೆಸಿಲ್ಲ'' ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ 'ಕೆ.ಜಿ.ಎಫ್' ಚಿತ್ರತಂಡ ತಿಳಿಸಿದೆ. [ರಚಿತಾ ರಾಮ್ ಫೋಟೋ ಗ್ಯಾಲರಿ]

ಹಾಗಾದ್ರೆ, ಯಶ್ ಜೊತೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಡ್ಯುಯೆಟ್ ಹಾಡ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು? ಬಹುಶಃ ಈ ಜೋಡಿಯನ್ನ ನೋಡುವ ಆಸೆ ಅವರಿಗಿರಬೇಕು.! ಇಲ್ಲಾಂದ್ರೆ, ಯಶ್ ಜೊತೆ ನಟಿಸಲು ಕಾದು ಕುಳಿತಿರುವವರೇ ಹೀಗೆ ಮಾಡಿರಬೇಕು.!!! ಯಾರಿಗೊತ್ತು..??!

English summary
Kannada Movie 'KGF' team has rubbished the rumors of Kannada Actress Rachita Ram playing lead along with Yash in the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada