For Quick Alerts
  ALLOW NOTIFICATIONS  
  For Daily Alerts

  ದಿನ ಬದಲಿಸಿದ ಕುರುಕ್ಷೇತ್ರ: ಚಿಂತೆಗೆ ಒಳಗಾದ ಕೋಮಲ್, ರಾಜ್ ಬಿ ಶೆಟ್ಟಿ.!

  |

  ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಸ್ಯಾಂಡಲ್ ವುಡ್ ಗೆ ಭಾರಿ ಟೆನ್ಷನ್ ಕೊಟ್ಟಿದೆ. ಹಬ್ಬದ ದಿನ ಯಾವ ಚಿತ್ರ ಬರಬಹುದು ಎಂಬ ಲೆಕ್ಕಾಚಾರ ಇನ್ನು ಸ್ಪಷ್ಟವಾಗಿಲ್ಲ. ಇದಕ್ಕೆಲ್ಲಾ ಕಾರಣ ಮುನಿರತ್ನ ಕುರುಕ್ಷೇತ್ರ.

  ಮೊದಲು ಸುದೀಪ್ ಅಭಿನಯದ ಪೈಲ್ವಾನ್ ವರಮಹಾಲಕ್ಷ್ಮಿ ಹಬ್ಬ ಟಾರ್ಗೆಟ್ ಮಾಡಿದ್ರು. ಬಳಿಕ ಕುರುಕ್ಷೇತ್ರ ಚಿತ್ರವೂ ಅದೇ ದಿನ ಬರ್ತಿವಿ ಅಂದ್ರು. ಇಬ್ಬರು ದೊಡ್ಡ ಸ್ಟಾರ್ ಗಳು ಒಟ್ಟಿಗೆ ಬರ್ತಿರುವಾಗ ಬೇರೆ ನಟರ ಚಿತ್ರಗಳು ಸಾಮಾನ್ಯವಾಗಿ ಆ ದಿನಕ್ಕೆ ಬರಲ್ಲ. ಯಾವ ಚಿತ್ರವೂ ಬರುವ ಧೈರ್ಯ ಮಾಡಿರಲಿಲ್ಲ.

  ಆಮೇಲೆ ಕುರುಕ್ಷೇತ್ರ ಆಗಸ್ಟ್ 2ಕ್ಕೆ ಹೋಯ್ತು. ಪೈಲ್ವಾನ್ ಸೆಪ್ಟೆಂಬರ್ ತಿಂಗಳಿಗೆ ಹೋಯ್ತು. ನಂತರ ವರಮಹಾಲಕ್ಷ್ಮಿ ಹಬ್ಬದ ದಿನ ಖಾಲಿಯಾಯಿತು. ಇದೇ ಸಮಯವನ್ನ ಕಾಯುತ್ತಿದ್ದ ಕೋಮಲ್ ನಟನೆಯ 'ಕೆಂಪೇಗೌಡ-2' ಮತ್ತು ರಾಜ್ ಬಿ ಶೆಟ್ಟಿ ನಟನೆಯ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರಗಳು ಆಗಸ್ಟ್ 9 ಲಾಕ್ ಮಾಡಿಕೊಂಡರು.

  'ಕುರುಕ್ಷೇತ್ರ' ಮತ್ತೆ ಮುಂದಕ್ಕೆ : ದರ್ಶನ್ ಅಭಿಮಾನಿಗಳಲ್ಲಿ ಮುನಿರತ್ನ ಕ್ಷಮೆ 'ಕುರುಕ್ಷೇತ್ರ' ಮತ್ತೆ ಮುಂದಕ್ಕೆ : ದರ್ಶನ್ ಅಭಿಮಾನಿಗಳಲ್ಲಿ ಮುನಿರತ್ನ ಕ್ಷಮೆ

  ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುವಷ್ಟರಲ್ಲಿ ಕುರುಕ್ಷೇತ್ರ ಸಿನಿಮಾ ತಂಡ ಮತ್ತೆ ಶಾಕ್ ನೀಡಿದೆ. ಆಗಸ್ಟ್ 2ಕ್ಕೆ ಆಗಲ್ಲ, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9ಕ್ಕೆ ಬರುತ್ತೇವೆ ಎಂದು ಮತ್ತೆ ದಿನಾಂಕ ಬದಲಿಸಿಕೊಂಡಿದ್ದಾರಂತೆ.

  ಈ ಬದಲಾವಣಿಯಿಂದ ಕೋಮಲ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿಯ ಚಿತ್ರಗಳು ಸಹಜವಾಗಿ ಚಿಂತೆಗೆ ಒಳಗಾಗಿದೆ. ಬಹುದೊಡ್ಡ ತಾರಬಳಗ ಹೊಂದಿರುವ ಕುರುಕ್ಷೇತ್ರದ ಮುಂದೆ ಬರುವುದರಿಂದ ನಷ್ಟವಾಗುವುದೇ ಹೆಚ್ಚು ಎಂಬ ಅಭಿಪ್ರಾಯವಿದೆ.

  ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂಪೇಗೌಡನ ಜೊತೆ ಇನ್ನೊಂದು ನಿರೀಕ್ಷೆಯ ಚಿತ್ರ ಎಂಟ್ರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂಪೇಗೌಡನ ಜೊತೆ ಇನ್ನೊಂದು ನಿರೀಕ್ಷೆಯ ಚಿತ್ರ ಎಂಟ್ರಿ

  ಸೋ, ಈ ಎರಡು ಚಿತ್ರಗಳು ಈಗಾಗಲೇ ರಿಲೀಸ್ ದಿನಾಂಕವನ್ನ ಘೋಷಣೆ ಮಾಡಿ ಆಗಿದೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ, ಕುರುಕ್ಷೇತ್ರ ಚಿತ್ರತಂಡದವರು ಆ ಡೇಟ್ ಈ ಡೇಟ್ ಅಂತ ಗೊಂದಲ ಮೂಡಿಸುತ್ತಿದ್ದಾರೆ. ಇದರಿಂದ ಇತರೆ ಚಿತ್ರಗಳಿಗೆ ಸಹಜವಾಗಿ ಕಷ್ಟವಾಗುತ್ತಿದೆ. ಒಂದು ವೇಳೆ ಕುರುಕ್ಷೇತ್ರ ಆಗಸ್ಟ್ 9ಕ್ಕೆ ಬಂದ್ರೆ ಈ ಎರಡು ಚಿತ್ರಗಳು ಮತ್ತೆ ಮುಂದಕ್ಕೆ ಹೋಗುತ್ತಾ ಅಥವಾ ಅದೇ ದಿನ ಬರುತ್ತಾ ಕಾದು ನೋಡಬೇಕಿದೆ.

  English summary
  Confusion between kurukshetra and other films regarding release date. kempegowda 2 and gubbi mele brahmastra already announced august 9th. but, kurukshetra again postponed to august 9th from august 2.
  Thursday, July 25, 2019, 15:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X