twitter
    For Quick Alerts
    ALLOW NOTIFICATIONS  
    For Daily Alerts

    ಮತ ಚಲಾವಣೆ ಮಾಡದ ರಮ್ಯಾಗೆ ನಾಚಿಕೆ ಆಗಬೇಕು: ಛೀಮಾರಿ ಹಾಕಿದ ನೆಟ್ಟಿಗರು.!

    By Harshitha
    |

    ''ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅದ್ಯಾವ ಸೀಮೆ ರಾಜಕಾರಣಿ.? ಮತದಾನ ಮಾಡದ ರಮ್ಯಾಗೆ ನಾಚಿಕೆ ಆಗಬೇಕು.!'' - ಹೀಗಂತ ನೆಟ್ಟಿಗರು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿಯೇ ಹರಿಹಾಯ್ತಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಮತದಾನ ಪ್ರಕ್ರಿಯೆ ಮುಗಿದಿದೆ. ಚುನಾವಣೆ ದಿನವಾದ ನಿನ್ನೆ (ಮೇ 12) ಪ್ರಜ್ಞಾವಂತ ಜನಸಾಮಾನ್ಯರು ಮತ ಚಲಾವಣೆ ಮಾಡಿ ಜವಾಬ್ದಾರಿ ಮೆರೆದಿದ್ದಾರೆ. ಹಲವು ರಾಜಕಾರಣಿಗಳು, ಅನೇಕ ತಾರೆಯರು ಕೂಡ ವೋಟ್ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

    ಆದ್ರೆ, ನಟಿ ಕಮ್ ರಾಜಕಾರಣಿ ಆಗಿರುವ... ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿ ಕಾರ್ಯ ನಿರ್ವಹಿಸುತ್ತಿರುವ ರಮ್ಯಾ ಮಾತ್ರ ಮತದಾನ ಮಾಡಿಲ್ಲ. ಇದನ್ನ ಗಮನಿಸಿದ ಟ್ವೀಟಿಗರು ರಮ್ಯಾ ರನ್ನ ಯದ್ವಾ ತದ್ವಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಹ ಕೆಲ ಟ್ವೀಟ್ ಗಳು ಇಲ್ಲಿವೆ ನೋಡಿ...

    ಅದ್ಯಾವ ಸೀಮೆ ರಾಜಕಾರಣಿ ನೀವು.?

    ಅದ್ಯಾವ ಸೀಮೆ ರಾಜಕಾರಣಿ ನೀವು.?

    ''ದಿವ್ಯ ಸ್ಪಂದನ/ರಮ್ಯಾ ಅದ್ಯಾವ ಸೀಮೆ ರಾಜಕಾರಣಿ ನೀವು.? ಮತದಾನ ಮಾಡದ ನಿಮಗೆ ನಾಚಿಕೆ ಆಗಲ್ವಾ.? ಭಾರತದ ಪ್ರಜೆಯಾಗಿ ಜವಾಬ್ದಾರಿ ನಿರ್ವಹಿಸುವುದನ್ನು ಕಲಿಯಿರಿ'' ಎಂದು ರಮ್ಯಾ ಗೆ ಛೀಮಾರಿ ಹಾಕಿದ್ದಾರೆ ಟ್ವೀಟಿಗರು.

    ಹಕ್ಕು ಚಲಾಯಿಸಿದ ಕಿರುತೆರೆಯ ಕಲಾವಿದರುಹಕ್ಕು ಚಲಾಯಿಸಿದ ಕಿರುತೆರೆಯ ಕಲಾವಿದರು

    ಇನ್ಮೇಲೆ ರಾಜಕೀಯದ ಬಗ್ಗೆ ಮಾತನಾಡಬಾರದು.!

    ಇನ್ಮೇಲೆ ರಾಜಕೀಯದ ಬಗ್ಗೆ ಮಾತನಾಡಬಾರದು.!

    ''ವೋಟ್ ಮಾಡದ ರಮ್ಯಾಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ಪ್ರಧಾನಿ ಅವರ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ ರಮ್ಯಾ ಮತದಾನ ಮಾಡುವುದನ್ನು ಮರೆತಿದ್ದಾರೆ. ಇವರೆಲ್ಲ ಪ್ರಜಾಪ್ರಭುತ್ವದ ಹಿಂಬಾಲಕರು.!'' ಎಂದು ಟ್ವೀಟಿಗರು ರಮ್ಯಾ ರನ್ನ ಲೇವಡಿ ಮಾಡಿದ್ದಾರೆ.

    ಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳುಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳು

    ಹಕ್ಕು ಇಲ್ಲವೇ ಇಲ್ಲ.!

    ಹಕ್ಕು ಇಲ್ಲವೇ ಇಲ್ಲ.!

    ''ನೀವು ಹಕ್ಕು ಚಲಾಯಿಸದೇ ಇರುವುದು ಸರಿಯಾಗಿದೆ. ಮುಂಬರುವ ಸರ್ಕಾರದ ವಿರುದ್ಧ ದನಿ ಎತ್ತುವ ನೈತಿಕತೆ ನಿಮಗೆ ಇಲ್ಲ'' ಎಂದಿದ್ದಾರೆ ನೆಟ್ಟಿಗರು.

    ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರುವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು

    ಜವಾಬ್ದಾರಿಯುವ ಪ್ರಜೆ ಆಗಿ.!

    ಜವಾಬ್ದಾರಿಯುವ ಪ್ರಜೆ ಆಗಿ.!

    ''ದಿವ್ಯ ಸ್ಪಂದನ ಮೊದಲು ಜವಾಬ್ದಾರಿಯುತ ಪ್ರಜೆ ಆಗಿ. ಆಮೇಲೆ ಇನ್ನೊಬ್ಬರ ಬಗ್ಗೆ ಮಾತನಾಡಿ'' ಎನ್ನುವ ಟ್ವೀಟ್ ಗಳೇ ಹೆಚ್ಚಾಗಿವೆ.

    ನಕಲಿ ಪ್ರಜೆಗಳು

    ನಕಲಿ ಪ್ರಜೆಗಳು

    ''ರಮ್ಯಾ ಹಾಗೂ ಪ್ರಕಾಶ್ ರೈ ನಕಲಿ ಪ್ರಜೆಗಳು. ಇವರಿಬ್ಬರಿಗೂ ನಾಚಿಕೆ ಆಗಬೇಕು'' ಅಂತಿದ್ದಾರೆ ಟ್ವೀಟಿಗರು.

    English summary
    Kannada Actress, Congress Politician, INC's Social Media Head Ramya aka Divya Spandana gets trolled on Social Media for not voting in Karnataka Assembly Elections 2018.
    Sunday, May 13, 2018, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X