ಸ್ಟಾರ್ ನಟನಿಗೆ ಅಕ್ಕ ಆದ 'ಟಗರು' ಖ್ಯಾತಿಯ ಕಾನ್ಸ್ ಟೇಬಲ್ ಸರೋಜ

Recommended Video

ಇದೇನಿದು ಸರೋಜ ದುನಿಯಾ ವಿಜಿ ಅಕ್ಕಾನಾ..? | Filmibeat Kannada

'ಟಗರು' ಸಿನಿಮಾ ಮುಗಿದ ಮೇಲೆ ಆ ಚಿತ್ರದ ಸಣ್ಣ ಸಣ್ಣ ಪಾತ್ರಗಳನ್ನು ಜನ ಗುರುತಿಸುವುದಕ್ಕೆ ಶುರು ಮಾಡಿದರು. ಹಾಗೆ ಇದ್ದಕ್ಕಿದ್ದ ಹಾಗೆ ಫೇಮಸ್ ಆದ ಪಾತ್ರ ಕಾನ್ಸ್ ಟೇಬಲ್ ಸರೋಜ.

ಕಾನ್ಸ್ ಟೇಬಲ್ ಸರೋಜ ಪಾತ್ರವನ್ನು ಮಾಡಿದ್ದು ನಟಿ ತ್ರಿವೇಣಿ ರಾವ್. ಈ ಪಾತ್ರದ ನಂತರ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರುತ್ತಲೇ ಇದೆ. ಸದ್ಯ ಸಾಕಷ್ಟು ಸ್ಟಾರ್ ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದು, ಇದೀಗ ಮತ್ತೊಂದು ಹೊಸ ಸಿನಿಮಾಗೆ ಅವಕಾಶ ಸಿಕ್ಕಿದೆ. ವಿಶೇಷ ಅಂದರೆ, ಈ ಬಾರಿ ನಟ ದುನಿಯಾ ವಿಜಯ್ ಅಕ್ಕನ ಪಾತ್ರದಲ್ಲಿ ತ್ರಿವೇಣಿ ನಟಿಸುತ್ತಿದ್ದಾರೆ.

ಅಂದಹಾಗೆ, ದುನಿಯಾ ವಿಜಯ್ ಹಾಗೂ ತ್ರಿವೇಣಿ ಅವರ ಈ ಹೊಸ ಸಿನಿಮಾ ಯಾವುದು ಎಂಬ ವಿವರ ಮುಂದಿದೆ ಓದಿ...

'ಕುಸ್ತಿ' ತಂಡ ಸೇರಿದ ಸರೋಜ

'ಕುಸ್ತಿ' ತಂಡ ಸೇರಿದ ಸರೋಜ

ನಟಿ ತ್ರಿವೇಣಿ ಈಗ 'ಕುಸ್ತಿ' ತಂಡವನ್ನು ಸೇರಿದ್ದಾರೆ. ಮೊದಲ ಬಾರಿಗೆ ದುನಿಯಾ ವಿಜಯ್ ಜೊತೆಗೆ ಅವರು ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅಕ್ಕನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 'ಕುಸ್ತಿ' ದುನಿಯಾ ವಿಜಯ್ ನಟನೆ ಹಾಗೂ ನಿರ್ಮಾಣದ ಹೊಸ ಸಿನಿಮಾವಾಗಿದೆ.

ಮೂರು ನಟಿಯರ ಎಂಟ್ರಿ

ಮೂರು ನಟಿಯರ ಎಂಟ್ರಿ

'ಕುಸ್ತಿ' ಸಿನಿಮಾದ ಲೀಡ್ ಪಾತ್ರಕ್ಕೆ ಅಧಿತಿ ಪ್ರಭುದೇವಾ ಆಯ್ಕೆ ಆಗಿದ್ದಾರೆ. ದುನಿಯಾ ವಿಜಯ್ ಜೋಡಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಟಿ ಕಲ್ಯಾಣಿ ಸಿನಿಮಾದ ದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ನಟಿ ತ್ರಿವೇಣಿ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಸಾಕಷ್ಟು ಬ್ಯುಸಿ ಇದ್ದಾರೆ ತ್ರಿವೇಣಿ

ಸಾಕಷ್ಟು ಬ್ಯುಸಿ ಇದ್ದಾರೆ ತ್ರಿವೇಣಿ

'ಬಾಹುಬಲಿ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರೂ ನಟಿ ತ್ರಿವೇಣಿ ಅವರಿಗೆ 'ಟಗರು' ಸಿನಿಮಾದ ನಂತರ ದೊಡ್ಡ ದೊಡ್ಡ ಅವಕಾಶ ಸಿಕ್ಕಿತು. ಸದ್ಯ ಅವರು 'ಐ ಲವ್ ಯೂ', 'ರಾಜಮಾರ್ತಾಂಡ', 'ತಾಯಿಗೆ ತಕ್ಕ ಮಗ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತೊಡಗಿದ್ದಾರೆ.

ಕುಸ್ತಿ ಸಿನಿಮಾದ ಬಗ್ಗೆ

ಕುಸ್ತಿ ಸಿನಿಮಾದ ಬಗ್ಗೆ

'ಕುಸ್ತಿ' ಚಿತ್ರವನ್ನು ರಘು ಶಿವಮೊಗ್ಗ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ಕನ್ನಡ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾದ ಹೆಸರೇ ಹೇಳುವ ಹಾಗೆ ಇದು ಕುಸ್ತಿಯ ಮೇಲೆ ನಿಂತಿರುವ ಸಿನಿಮಾವಾಗಿದೆ. ಉಳಿದಂತೆ, ಮಾಸ್ತಿ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ.

More from Filmibeat

English summary
Constable Saroja fame actress Triveni Rao playing actor Duniya Vijay's sister role in 'Kusthi' kannada movie. The movie is directed by Raghu Shivamogga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X