PVR ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿಗ; 1.20 ಲಕ್ಷ ರೂ. ದಂಡ

ಮಾಲ್‌ಗಳಲ್ಲಿ ಸಿನಿಮಾ ನೋಡಲು ಹೋಗುವ ಬಹುತೇಕರಿಗೆ ಈ ಕಹಿ ಅನುಭವ ಆಗಿರುತ್ತದೆ. ಸಿನಿಮಾ ಆರಂಭಕ್ಕೂ ಮುನ್ನ ಸಾಕಷ್ಟು ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತದೆ. ಕೆಲವೊಮ್ಮೆ ಸಿನಿಮಾ ನೋಡಲು ಹೋಗ್ತಿವೋ ಅವರ ಜಾಹೀರಾತು ನೋಡಲು ಹೋಗ್ತಿವೋ ಎನಿಸಿಬಿಡುತ್ತದೆ. ಆದರೆ ಬೆಂಗಳೂರಿಗರೊಬ್ಬರು ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪಿವಿಆರ್-ಐನಾಕ್ಸ್ ಮಲ್ಟಿಫ್ಲಿಕ್ಸ್‌ನಲ್ಲಿ ಹೇಳಿದ ಸಮಯಕ್ಕೆ ಸಿನಿಮಾ ಪ್ರದರ್ಶನ ಆರಂಭಿಸದೇ 20 ನಿಮಿಷಕ್ಕೂ ಹೆಚ್ಚು ಸಮಯ ಜಾಹೀರಾತು ಪ್ರದರ್ಶನ ಮಾಡಿದ್ದಕ್ಕೆ ಕೋರ್ಟ್ ದಂಡ ವಿಧಿಸಿದೆ. ಬೆಂಗಳೂರಿನ ಅಭಿಷೇಕ್‌ ಎಂಬುವವರು ಎರಡು ವರ್ಷಗಳ ಹಿಂದೆ ಹಿಂದಿಯ 'ಶ್ಯಾಮ್ ಬಹದ್ದೂರ್' ಚಿತ್ರ ವೀಕ್ಷಣೆಗೆ ತೆರಳಿದ್ದರು. ಬುಕ್‌ಮೈಶೋನಲ್ಲಿ 3 ಟಿಕೆಟ್‌ ಬುಕ್ ಮಾಡಿದ್ದರು. ಸಂಜೆ 4:05ಕ್ಕೆ ಅವರ ಶೋ ನಿಗದಿ ಆಗಿತ್ತು. ಆ ಲೆಕ್ಕದಲ್ಲಿ ಸಂಜೆ 6:30ಕ್ಕೆ ಸಿನಿಮಾ ಮುಗಿಸಿ ಬರಬೇಕಿತ್ತು.

Consumer court fined the PVR Rs 1 lakh for playing too many ads

ಸಂಜೆ 4:05ಕ್ಕೆ ಶುರುವಾಗಬೇಕಿದ್ದ ಸಿನಿಮಾ 4.30ಕ್ಕೆ ಶುರುವಾಗಿತ್ತು. ಅಂದರೆ 25 ನಿಮಿಷ ಖಾಸಗಿ ಜಾಹೀರಾತುಗಳನ್ನು ಪ್ರದರ್ಶನ ಮಾಡಲಾಗಿತ್ತು. ಇದರಿಂದ ತಮ್ಮ ಸಮಯ ವ್ಯರ್ಥವಾಗಿದೆ. ತಮ್ಮ ಜಾಹೀರಾತುಗಳನ್ನು ಪ್ರದರ್ಶಿಸಲು ಅರ್ಧ ಗಂಟೆ ಮುಂದೆ ಶೋ ಸಮಯ ನಿಗದಿ ಮಾಡಿ ತಡವಾಗಿ ಸಿನಿಮಾ ಪ್ರದರ್ಶನ ಮಾಡಿದ್ದಾರೆ ಎಂದು ಅಭಿಷೇಕ್ ದೂರು ನೀಡಿದ್ದರು.

ಕನ್‌ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 2019 ಅಡಿಯಲ್ಲಿ ಪಿವಿಆರ್ ವಿರುದ್ಧ ಅಭಿಷೇಕ್ ಕೋರ್ಟ್ ಮೆಟ್ಟಿಲೇರಿದ್ದರು. ಭಾರತದ ಮಾಧ್ಯಮ ಮತ್ತು ಪ್ರಸಾರ ಸಚಿವಾಲಯ ನಿಯಮದ ಪ್ರಕಾರ ಜನಜಾಗೃತಿ ಮೂಡಿಸುವಂತಹ ಜಾಹೀರಾತುಗಳನ್ನು ಸಿನಿಮಾ ಆರಂಭಕ್ಕೂ 10 ನಿಮಿಷ ಮುನ್ನ ಪ್ರದರ್ಶಿಸಬಹುದು. ಅದರಲ್ಲಿ ಖಾಸಗಿ ಜಾಹೀರಾತು ಸಹ ಹಾಕಬಹುದು. ಆದರೆ ಸಿನಿಮಾ ಪ್ರದರ್ಶನ ಸಮಯಕ್ಕೆ ಸರಿಯಾಗಿ ಪ್ರದರ್ಶನ ಮಾಡಲೇಬೇಕು.

ಕೊನೆ ಎರಡು ನಿಮಿಷ ಜನಜಾಗೃತಿ ಜಾಹೀರಾತು ಪ್ರದರ್ಶಿಸಿದರು. ಇನ್ನುಳಿದ 23 ನಿಮಿಷ ಖಾಸಗಿ ಜಾಹೀರಾತು ಹಾಕಿದ್ದರು. ಆದರೆ ಪಿವಿಆರ್ ಪರ ವಕೀಲರು ಆರೋಪವನ್ನು ಅಲ್ಲಗಳೆದಿದ್ದರು. ನಾವು ಜನಜಾಗೃತಿ ಜಾಹೀರಾತು ಹಾಕಿದ್ದೇವೆ ನೋಡಿ ಎಂದು ವಾದಿಸಿ ಸ್ಕ್ರೀನ್‌ ಶಾಟ್ ತೋರಿಸಿದ್ದರು. ಆದರೆ ಯಾವ ಸಮಯದಲ್ಲಿ ಎನ್ನುವುದನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಅಭಿಷೇಕ್ ತಾವು ಮಲ್ಟಿಪ್ಲೆಕ್ಸ್‌ಗೆ ಹೋದ ಸಮಯದಿಂದ ಸಿನಿಮಾ ಪ್ರದರ್ಶನ ಆಗುವವರೆಗೂ ವೀಡಿಯೋ ಚಿತ್ರೀಕರಣ ಮಾಡಿದ್ದರು. ಅರ್ಧ ಗಂಟೆ ಸಮಯದಲ್ಲಿ ಎಷ್ಟು ಖಾಸಗಿ ಜಾಹೀರಾತು ಪ್ರದರ್ಶನ ಮಾಡಿದ್ದರು ಎನ್ನುವುದನ್ನು ಸಾಕ್ಷಿ ಸಮೇತ ರುಜುವಾತು ಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಗ್ರಾಹಕರ ವೇದಿಕೆ ದೂರುದಾರ ಅಭಿಷೇಕ್ ಅವರಿಗೆ 28 ಸಾವಿರ ರೂ. ದಂಡ ಪಾವತಿಸುವಂತೆ ತಿಳಿಸಿದೆ. ಇನ್ನು ಮುಂದೆ ಶೋ ಪ್ರದರ್ಶನ ಸಯಮವನ್ನು ಟಿಕೆಟ್‌ನಲ್ಲಿ ಸರಿಯಾಗಿ ಹಾಕಬೇಕು. ಆ ಸಮಯಕ್ಕ ಸರಿಯಾಗಿ ಶೋ ಪ್ರದರ್ಶನ ಆರಂಭಿಸಬೇಕು ಎಂದು ಆದೇಶಿಸಿದೆ. ಜೊತೆಗೆ ಗ್ರಾಹಕ ಕಲ್ಯಾಣ ನಿಧಿಗೆ 1 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದೆ.

More from Filmibeat

English summary
PVR INOX fined ₹1 lakh for delaying films with excessive ads; bangalorean filed a consumer complaint
Read more about: theater sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X