For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ವಿವಾದಾತ್ಮಕ ವೆಡ್ಡಿಂಗ್ ಫೋಟೋಶೂಟ್, ಹಾಟ್ ಲುಕ್‌ನಲ್ಲಿ ಯುವತಿ

  |

  ವಿವಾದಾತ್ಮಕವಾಗಿ ವಿವಾಹ ಪೂರ್ವ ಫೋಟೋಶೂಟ್ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ನವ ಜೋಡಿಗಳು ಮದುವೆಗೂ ಮುಂಚೆ ಫೋಟೋಶೂಟ್ ಮಾಡಿಸುವುದು ವಾಡಿಕೆ. ಪಾರ್ಕ್‌, ಸಮುದ್ರದ ಕಿನಾರೆ ಅಥವಾ ಒಂದೊಳ್ಳೆ ಪರಿಸರದಲ್ಲಿ ಫೋಟೋಶೂಟ್ ಮಾಡುವುದು ಸಹಜ. ಸಂಪ್ರದಾಯಸ್ಥ ಅಥವಾ ಆಧುನಿಕ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸುವುದು ಕಾಣಬಹುದು.

  ಆದ್ರೀಗ, ವಿವಾದಾತ್ಮಕವಾಗಿ ಫೋಟೋಶೂಟ್ ಮಾಡಿಸುವುದು ಹೆಚ್ಚಾಗಿದೆ. ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ನಗ್ನವಾಗಿ, ಅರೆನಗ್ನವಾಗಿ ಫೋಟೋಶೂಟ್‌ಗಳನ್ನು ಮಾಡಿರುವುದು ವರದಿಯಾಗಿತ್ತು. ಇದೀಗ, ಹೊಸದಾಗಿ ಮಾಡಿಸಿರುವ ಫೋಟೋಶೂಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಮುಂದೆ ಓದಿ...

  ಕೈಯಲ್ಲಿ ಬಿಯರ್, ಸಿಗರೇಟ್

  ಕೈಯಲ್ಲಿ ಬಿಯರ್, ಸಿಗರೇಟ್

  ವಿವಾಹ ಪೂರ್ವ ಫೋಟೋಶೂಟ್ ಎಂದು ಹೇಳಲಾಗುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದರಲ್ಲಿ ಜೋಡಿ ಇಲ್ಲ. ಯುವತಿಯೊಬ್ಬಳು ಮಾತ್ರ ಕಾಣಿಸಿಕೊಂಡಿದ್ದಾಳೆ. ಮದುಮಗಳು ರೀತಿ ಶೃಂಗಾರ ಮಾಡಿಕೊಂಡಿರುವ ಯುವತಿ ಅರ್ಧ ಸಂಪ್ರದಾಯಸ್ಥೆ ರೂಪದಲ್ಲಿ ಹಾಗೂ ಇನ್ನರ್ಧ ಮಾರ್ಡನ್ ಲುಕ್‌ನಲ್ಲಿ ಮಿಂಚಿದ್ದಾಳೆ. ಜೊತೆಗೆ ಒಂದು ಕೈಯಲ್ಲಿ ಬಿಯರ್ ಬಾಟಲ್ ಮತ್ತೊಂದು ಕೈಯಲ್ಲಿ ಸಿಗರೇಟ್ ಸಹ ನೋಡಬಹುದು.

  ಅನಾಥ ಮಕ್ಕಳೊಂದಿಗೆ ಚೇತನ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್

  ಸ್ವೀಟ್ ಅಂಡ್ ಸಾಲ್ಟ್

  ಸ್ವೀಟ್ ಅಂಡ್ ಸಾಲ್ಟ್

  ಮದುಮಗಳಂತೆ ಆಭರಣಗಳನ್ನು ತೊಟ್ಟಿರುವ ಯುವತಿ ಮಲ್ಲಿಗೆ ಹೂವು ಸಹ ಮುಡಿದಿದ್ದಾಳೆ. ಸಂಭ್ರಮದ ವಾತಾವರಣ ಎನ್ನುವಂತಹ ಹಿನ್ನೆಲೆಯಲ್ಲಿ ಫೋಟೋಶೂಟ್ ಮಾಡಲಾಗಿದೆ. ಸಮುದ್ರದ ಕಡಲ ತೀರಾದಲ್ಲಿ ಯುವತಿ ನಡೆದು ಬರುತ್ತಿರುವ ಫೋಟೋ ಲುಕ್‌ ಪಡ್ಡೆ ಹೈಕ್ಳ ಮನಸ್ಸಿನಲ್ಲಿ ತಲ್ಲಣ ಸೃಷ್ಟಿವಂತಿದೆ.

  ಋಷಿ ದಂಪತಿಯ ಫೋಟೋಶೂಟ್

  ಋಷಿ ದಂಪತಿಯ ಫೋಟೋಶೂಟ್

  ಈ ರೀತಿ ವಿವಾದಾತ್ಮಕ ವೆಡ್ಡಿಂಗ್ ಫೋಟೋಶೂಟ್‌ಗಳು ಮಾಡಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಟೀಕೆಗೆ ಗುರಿಯಾದ ಹಲವು ಫೋಟೋಶೂಟ್‌ಗಳಿವೆ. ಈ ಹಿಂದೆ ಋಷಿ ದಂಪತಿಯ ಗೆಟಪ್‌ನಲ್ಲಿ ಸಖತ್ ಹಾಟ್‌ ಆಗಿ ಕಾಣಿಸಿಕೊಂಡಿರುವ ಫೋಟೋಶೂಟ್ ವೈರಲ್ ಆಗಿತ್ತು.

  ನಗ್ನ ಫೋಟೋಶೂಟ್?

  ನಗ್ನ ಫೋಟೋಶೂಟ್?

  ಜೋಡಿಯೊಂದು ನಗ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. ಬಳಿ ಬಣ್ಣದ ಬಟ್ಟೆಯೊಂದನ್ನು ಅಡ್ಡವಾಗಿಟ್ಟು ನಗ್ನವಾಗಿರುವಂತೆ ಬಿಂಬಿಸಿ ಮಾಡಲಾದ ಫೋಟೋಶೂಟ್ ಹೆಚ್ಚು ಟೀಕೆಗೆ ಗುರಿಯಾಗಿತ್ತು.

  Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada
  English summary
  Controversial Pre-Wedding Indian couples photoshoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X