»   » ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!

ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!

Posted By:
Subscribe to Filmibeat Kannada

ನಿರ್ದೇಶಕ ಶ್ರೀನಿವಾಸ್ ರಾಜು ರವರಿಗೂ ವಿವಾದಕ್ಕೂ ಒಂಥರಾ ಬಿಡಿಸಲಾರದ ನಂಟು. ಶ್ರೀನಿವಾಸ್ ರಾಜು ಯಾವುದೇ ಸಿನಿಮಾ ಮಾಡಿದರೂ, ಒಂದಲ್ಲಾ ಒಂದು ಕಾಂಟ್ರವರ್ಸಿಯಿಂದ ಸದ್ದು ಮಾಡ್ತಾರೆ.

ಅದಕ್ಕೆ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾ ಕೂಡ ಹೊರತಾಗಿಲ್ಲ. ಔಟ್ ಅಂಡ್ ಔಟ್ ಹಾರರ್ ಕಾಮಿಡಿ ಆಗಿರುವ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾದಲ್ಲಿ ಏನಿದೆಯೋ ಗೊತ್ತಿಲ್ಲ. ಆದ್ರೆ, ಚಿತ್ರದ ಶೀರ್ಷಿಕೆ ಬಗ್ಗೆ ಮಾತ್ರ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದೆ.['ಪುಟ್ಟಣ್ಣ' ನ ಅವತಾರ ಎತ್ತಿದ ಕಾಮಿಡಿ ಕಿಂಗ್ ಕೋಮಲ್!]

Controversy surrounds 'Kathe Chitrakathe Nirdheshana Puttanna' Movie

''ಪುಟ್ಟಣ್ಣ ಕಣಗಾಲ್ ಹೆಸರಿಟ್ಟುಕೊಂಡು ಸಿನಿಮಾ ಮಾಡುವ ಅವಶ್ಯಕತೆ ಏನಿದೆ. ಸಿನಿಮಾದಲ್ಲಿ ಅವರ ಕುರಿತು ಏನಿದೆ ಎಂಬುದನ್ನ ನಾವು ನೋಡಬೇಕು. ಒಂದ್ವೇಳೆ ಸಿನಿಮಾದಲ್ಲಿ ಪುಟ್ಟಣ್ಣ ಕುರಿತು ಅವಹೇಳನ ಮಾಡಿದ್ದರೆ, ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ'' ಅಂತ ಪುಟ್ಟಣ್ಣ ಕಣಗಾಲ್ ಪತ್ನಿ ನಾಗಲಕ್ಷ್ಮೀ ಹೇಳುತ್ತಾರೆ.

ಸಿನಿಮಾ ತೋರಿಸುವವರೆಗೂ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಅಂತ ಪುಟ್ಟಣ್ಣ ಕಣಗಾಲ್ ಕುಟುಂಬ ಪಟ್ಟು ಹಿಡಿದಿರುವ ಕಾರಣ, ಸ್ಪೆಷಲ್ ಸ್ಕ್ರೀನಿಂಗ್ ಮಾಡುವ ಬಗ್ಗೆ ಚಿತ್ರತಂಡ ವ್ಯವಸ್ಥೆ ಮಾಡುತ್ತಿದೆ.[ಹಾಲಿವುಡ್ ಮಾಷ್ ಕಾಲೆಳೆದ, ಕೋಮಲ್ ಹೊಸ ಚಿತ್ರದ ಪೋಸ್ಟರ್]

''ಚಿತ್ರಕ್ಕೂ ಪುಟ್ಟಣ್ಣ ಕಣಗಾಲ್ ರವರಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಹಾರರ್ ಕಾಮಿಡಿ ಸಿನಿಮಾ. ಬಿಡುಗಡೆಗೂ ಮುನ್ನ ಪುಟ್ಟಣ್ಣ ಸರ್ ಕುಟುಂಬಕ್ಕೆ ಖಂಡಿತ ಸಿನಿಮಾ ತೋರಿಸುತ್ತೇವೆ'' ಅಂತಾರೆ ನಟ ಕೋಮಲ್.

ಇದೇ ಮೊದಲ ಬಾರಿಗೆ ಕೋಮಲ್ ಜೊತೆ ನಟಿ ಪ್ರಿಯಾಮಣಿ ನಟಿಸಿರುವ ಸಿನಿಮಾ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ'. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬಿಜಿಯಾಗಿದೆ.

English summary
Komal Kumar starrer Kannada Movie 'Kathe Chitrakathe Nirdheshana Puttanna' is in trouble. Kannada Director Late Puttanna Kanagal family wants to watch the film prior the film release.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada