ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ್ರಾ ಅಣ್ಣಾವ್ರ ಮೊಮ್ಮಗಳು ? ಧನ್ಯಾ ರಾಮ್ ಕುಮಾರ್ ವಿರುದ್ಧ ವ್ಯಾಪಕ ಆಕ್ರೋಶ

ಡಾ.ರಾಜ್ ಕುಮಾರ್ ಕನ್ನಡಿಗರ ಪಾಲಿಗೆ ಕೇವಲ ಹೆಸರಲ್ಲ. ಅದೊಂದು ಅಸ್ಮಿತೆ. ನಾಡು ಮತ್ತು ನುಡಿಯ ಕುರಿತು ಅವರಿಗೆ ಇದ್ದ ನಿಲುವು ಅನುಕರಣೀಯ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಬದ್ಧತೆ ಇಂದು ಬೇರೆಯವರಲ್ಲಿ ಕಾಣಿಸದು. ಕನ್ನಡಿಗರ ಪಾಲಿಗೆ ಡಾ.ರಾಜ್ ಕುಮಾರ್ ಕೇವಲ ಸೂಪರ್ ಸ್ಟಾರ್ ಆಗಿರಲಿಲ್ಲ. ಬದಲಿಗೆ ನಾಡು-ನುಡಿ ಮತ್ತು ಸಂಪ್ರದಾಯಗಳ ಕಾವಲುಗಾರ ಕೂಡ ಆಗಿದ್ದರು.

ಇನ್ನೂ ನಿಮಗೆ ಗೊತ್ತು ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ. ರಾಜ್‌ಕುಮಾರ್ ಅವರ ವಂಶದಲ್ಲಿಯೂ ಕೂಡ ಈ ಪ್ರಯತ್ನಗಳಾಗಿವೆ.

conversion-fans-angry-as-dhanya-ramkumar-flaunts-cross-rajkumar-legacy-erased

ಆದರೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹೊರತು ಪಡಿಸಿದರೆ ಬೇರೆ ಯಾರು ಕನ್ನಡಿಗರ ಹೃದಯವನ್ನು ಇಲ್ಲಿಯವರೆಗೆ ಗೆದ್ದಿಲ್ಲ. ವಿನಯ್ ರಾಜ್‌ಕುಮಾರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆಯಾದರೂ ಅವರಿಗೆ ಬೇಕಿರುವ ದೊಡ್ಡದೊಂದು ಗೆಲುವು ಇನ್ನೂ ಸಿಕ್ಕಿಲ್ಲ.

ಇವರನ್ನು ಹೊರತು ಪಡಿಸಿದರೆ ಸರತಿ ಸಾಲಿನಲ್ಲಿರುವವರು ಧನ್ಯಾ ರಾಮ್‌ಕುಮಾರ್. ದೊಡ್ಮನೆಯಿಂದ ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ಮೊದಲ ಮಹಿಳೆ ಇವರು. ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್ ಮತ್ತು ಧೀರೇನ್ ರಾಜ್‌ಕುಮಾರ್ ಅವರ ಮೇಲಿರುವಂತೆ ಇವರ ಮೇಲೆ ಕೂಡ ದೊಡ್ಮನೆ ಅಭಿಮಾನಿಗಳಿಗೆ ಅಪಾರವಾದ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಧನ್ಯಾ ಪ್ರಯತ್ನ ಮಾಡುತ್ತಿದ್ದಾರೆ ಕೂಡ.

ಆದರೆ, ದೊಡ್ಡವರ ಮಕ್ಕಳಾಗಿ ಹುಟ್ಟುವುದು ಸುಲಭ ಅಲ್ಲ. ಅದರಲ್ಲಿಯೂ ಡಾ.ರಾಜ್ ಕುಮಾರ್ ಅಂತಹ ದಂತಕಥೆಯ ಹೆಸರಿನ ಭಾರ ಹೊತ್ತು ಬದುಕುವುದು ಖಂಡಿತ ಸುಲಭ ಅಲ್ಲವೇ ಅಲ್ಲ. ಯಾಕೆಂದರೆ ಇವರ ಮೇಲೆ ವಿಪರೀತವಾದ ನಿರೀಕ್ಷೆಗಳಿರುತ್ತವೆ. ಇವರ ನಡೆ-ನುಡಿ-ಆಚಾರ-ವಿಚಾರದ ಮೇಲೆ ಸಮಾಜದ ಬಹುದೊಡ್ಡ ವರ್ಗದ ಕಣ್ಣೀರುತ್ತೆ. ಚೂರು ಯಾಮಾರಿದರೂ ಟ್ರೋಲಿಗರಿಗೆ ಆಹಾರವಾಗಬೇಕಾಗುತ್ತೆ. ಧನ್ಯಾ ರಾಮ್ ಕುಮಾರ್ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ಮೂರು-ನಾಲ್ಕು ದಿನದ ಹಿಂದೆ ಧನ್ಯಾ ರಾಮ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹತ್ತು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸ್ನೇಹಿತೆಯರ ಜೊತೆ ವಾರಾಂತ್ಯಕ್ಕೆಂದು ಮೋಜು ಮಸ್ತಿ ಮಾಡಲು ಎಂದು ಹೋದ ಫೋಟೊಗಳಿವು.

conversion-fans-angry-as-dhanya-ramkumar-flaunts-cross-rajkumar-legacy-erased

ಈ ಫೋಟೊಗಳಲ್ಲಿ ಧನ್ಯಾ ಮಿರರ್ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಸಮಯದಲ್ಲಿ ಹಲವರ ಕಣ್ಣು ಇವರ ಕುತ್ತಿಗೆಯ ಮೇಲೆ ಬಿದ್ದಿದೆ. ಕೊರಳಿನಲ್ಲಿರುವ ಶಿಲುಬೆ ಹಲವರ ಕಣ್ಣು ಕುಕ್ಕಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಹಲವರು ಧನ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ. ಕೀಬೋರ್ಡ್‌ ಮುಂದೆ ಕುಳಿತು ತಮ್ಮ ಮನದ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಧರ್ಮ-ಹಿಂದೂತ್ವ-ಸನಾತನದ ಪಾಠವನ್ನು ಹಲವರು ಸದ್ಯ ಧನ್ಯಾ ರಾಮ್ ಕುಮಾರ್ ಅವರಿಗೆ ಮಾಡುತ್ತಿರುವ ಹಲವರಲ್ಲಿ ಒಬ್ಬರು ತಾತಾನ ಹೆಸರು ಉಳಿಸ್ತೀಯ ಬಿಡಮ್ಮ ಎಂದು ಕಾಮೆಂಟ್ ಮಾಡಿದರೆ ಇನ್ನೂ ಒಬ್ಬರು ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ಧಾರೆ. ಮತ್ತೊಬ್ಬರು ನೀವು ಯಾವಾಗ ಮತಾಂತರಗೊಂಡ್ರೀ ಎಂದು ಪ್ರಶ್ನೆ ಮಾಡಿದ್ದಾರೆ.

ಕೇವಲ ಧನ್ಯಾ ರಾಮ್‌ಕುಮಾರ್ ಅವರ ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿ ಮಾತ್ರ ಈ ಮತಾಂತರದ ಚರ್ಚೆ ನಡೆಯುತ್ತಿಲ್ಲ. ಧನ್ಯಾ ರಾಮ್‌ಕುಮಾರ್ ಅವರನ್ನು ಟ್ರೋಲ್ ಮಾಡಲಾಗುತ್ತಿಲ್ಲ. ಬದಲಿಗೆ ಎಕ್ಸ್‌(ಟ್ವಿಟರ್)ನಲ್ಲಿಯೂ ಈ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಧನ್ಯಾ ವಿರುದ್ಧ ಆಕ್ರೋಶದ ಅಕೆ ಎದ್ದಿದೆ.

ತಮ್ಮ ವಿರುದ್ದ ನಡೆಯುತ್ತಿರುವ ಈ ಚರ್ಚೆಗಳನ್ನು ಮತ್ತು ಟ್ರೋಲ್‌ಗಳನ್ನು ಧನ್ಯಾ ಗಮನಿಸಿದ್ದಾರಾ..? ಗೊತ್ತಿಲ್ಲ. ಗಮನಿಸಿದ್ದರೆ ಅವರು ತಮ್ಮ ವಿರುದ್ಧ ಮಾತನಾಡುತ್ತಿರುವವರಿಗೆ, ತಮ್ಮ ಧರ್ಮನಿಷ್ಠೆಯನ್ನು ಪ್ರಶ್ನೆ ಮಾಡುತ್ತಿರುವವರಿಗೆ ತಿರುಗೇಟು ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
"‘Have you converted?’—The question everyone is asking after Dhanya Ramkumar’s latest photo. From Raghavendra’s wallpaper to this viral cross, see why millions of Dr. Rajkumar fans are angry and calling for the protection of their Hindu roots."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X