ರವಿಶಂಕರ್ ಎದುರು ಮನೆಯಲ್ಲಿ ಕೊರೊನಾ: ಆತಂಕದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿದ ಸುದೀಪ್, ಗಣೇಶ್, ಸೃಜನ್

ಕೊರೊನಾ ಆತಂಕ ಈಗ ಸ್ಯಾಂಡಲ್ ವುಡ್ ಕಲಾವಿದರನ್ನು ಕಾಡುತ್ತಿದೆ. ಸುದೀಪ್ ಮನೆಯ ಪಕ್ಕದ ಮನೆಯಲ್ಲಿಯೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

Recommended Video

ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

ಹೊಸಕೆರೆಹಳ್ಳಿ ಸಮೀಪ ಇರುವು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ನಟ ರವಿಶಂಕರ್ ಗೌಡ ಕುಟುಂಬ ವಾಸವಿದೆ. ರವಿಶಂಕರ್ ಇದ್ದ ಮನೆಯ ಎದುರು ಮನೆಯಲ್ಲಿಯೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ರವಿಶಂಕರ್ ಪತ್ನಿ, ಮಕ್ಕಳಲ್ಲಿ ಆತಂಕ ಮನೆಮಾಡಿದೆ. ಭಯದಲ್ಲಿರುವ ರವಿಶಂಕರ್ ಅವರಿಗೆ ಸ್ನೇಹಿತರು ಧೈರ್ಯ ತುಂಬಿದ್ದಾರೆ. ಮುಂದೆ ಓದಿ...

ಮಕ್ಕಳನ್ನು ಕರೆದುಕೊಂಡ ಬಾ ಎಂದ ಸುದೀಪ್, ಗಣೇಶ್, ಸೃಜನ್

ಮಕ್ಕಳನ್ನು ಕರೆದುಕೊಂಡ ಬಾ ಎಂದ ಸುದೀಪ್, ಗಣೇಶ್, ಸೃಜನ್

ನಟ ರವಿಶಂಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎದುರು ಮನೆಗೆ ಕೊರೊನಾ ವಕ್ಕರಿಸಿದೆ, ಮಕ್ಕಳನ್ನು ದೇವರೆ ಕಾಪಾಡಬೇಕೆಂದು ಆತಂಕ ವ್ಯಕ್ತಪಡಿಸಿದ ರವಿಶಂಕರ್ ಗೆ ನಟ ಸುದೀಪ್, ಗಣೇಶ್, ಸೃಜನ್ ಲೋಕೇಶ್ ಮತ್ತು ರಘುರಾಮ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಸುದೀಪ್ ಮತ್ತು ಗಣೇಶ್ ಮಕ್ಕಳನ್ನು ಕರೆದುಕೊಂಡು ಮನೆಗೆ ಬಾ ಎಂದು ಕರೆದಿದ್ದಾರೆ ಎಂದು ರವಿಶಂಕರ್ ಹೇಳಿದ್ದಾರೆ.

ರವಿಶಂಕರ್ ಟ್ವೀಟ್

ರವಿಶಂಕರ್ ಟ್ವೀಟ್

"ನನ್ನ ಅಪಾರ್ಟ್ ಮೆಂಟ್ ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ Quarantin. ಸುದೀಪ , ಗಣಪ , ಸೃಜನ, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್, ರಘುರಾಮ್, ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

ರವಿಶಂಕರ್ ಗೆ ಧೈರ್ಯ ತುಂಬಿದ ರಘುರಾಮ್

ರವಿಶಂಕರ್ ಗೆ ಧೈರ್ಯ ತುಂಬಿದ ರಘುರಾಮ್

"ರವಿ ಜೀ ನೀವು ರಾಯರ ಭಕ್ತ ಅವರ ಆಶೀರ್ವಾದ ನಿಮ್ಮ ಮೇಲೆ ಇರುವವರೆಗೂ ನೀವು ಹಾಗು ನಿಮ್ಮ ಕುಟುಂಬ ಸದಾ ಸುರಕ್ಷಿತ" ಎಂದು ನಟ ಮತ್ತು ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿ ರವಿಶಂಕರ್ ಗೌಡ ಅವರಿಗೆ ಧೈರ್ಯ ಹೇಳಿದ್ದಾರೆ.

ಧೈರ್ಯ ತುಂಬಿದ ಸ್ನೇಹಿತರಿಗೆ ಧನ್ಯವಾದ

ಧೈರ್ಯ ತುಂಬಿದ ಸ್ನೇಹಿತರಿಗೆ ಧನ್ಯವಾದ

"ಸಹೃದಯದ ಅಣ್ಣ ತಮ್ಮಂದಿರೆ, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಅಭಿಮಾನವಿಟ್ಟು ನಿಮ್ಮ ಅಂತರಾತ್ಮದಿಂದ ಹರಸಿದ್ದೀರಿ, ನಿಮ್ಮೆಲ್ಲರ ಹೊಟ್ಟೆ ತಣ್ಣಗಿರಲಿ. ನಿಮ್ಮ ಕುಟುಂಬಕ್ಕೂ ದೇವರ ಆಶೀರ್ವಾದವಿರಲಿ. ನಮಸ್ಕಾರ" ಎಂದು ಧೈರ್ಯ ತುಂಬಿದ ಸೇಹ್ನಿತರಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Corona positive in Sandalwood Actor Ravi Shankar Gowda's house opposite house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X