BREAKING: ನಿಖಿಲ್ ಮದುವೆಗೂ ಕೊರೊನಾ ಎಫೆಕ್ಟ್, ಮದುವೆ ಶಿಫ್ಟ್?
ಕೊರೊನಾ ಎಫೆಕ್ಟ್ ಹಿನ್ನೆಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಆಯೋಜಿಸಿದ್ದ ನಿಖಿಲ್ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಹೆಚ್ಡಿಕೆ ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ.
Recommended Video
ರಾಮನಗರದ ಸುಮಾರು 60 ಎಕರೆ ಜಮೀನಿನಲ್ಲಿ ಈಗಾಗಲೇ ಸಿದ್ಧತೆ ನಡೆದಿತ್ತು. ಜಾನಪದ ಲೋಕದ ಜಮೀನಿನಲ್ಲಿ ಈಗಾಗಲೇ 6 ಕೊಳವೆಬಾವಿ ಕೊರೆಸಲಾಗಿತ್ತು ಆದರೆ ಕೊರೊನಾ ಭೀತಿಯಿಂದ ಸ್ಥಳ ಬದಲಾವಣೆ ಮಾಡುವ ಸಂಭವ ಇದೆ. ದೇವೆಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರಂತೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೆ ಹೊರಬೀಳಬೇಕಿದೆ.
ಈಗಾಗಲೇ 8 ಲಕ್ಷ ವಿವಾಹ ಆಮಂತ್ರಣವನ್ನ ಮುದ್ರಿಸಿ. ಲಗ್ನಪತ್ರಿಕೆಯಲ್ಲಿ ಸಪ್ತಪದಿ ಮಂಟಪ ಎಂದು ಮದುವೆ ನಡೆಯುವ ಸ್ಥಳ ಹೆಸರಿಸಲಾಗಿದೆ. ಆದರೆ ಈಗ ಅಚಾನಕ್ಕಾಗಿ ಸ್ಥಳ ಬದಲಾವಣೆ ನಿರ್ಣಯ ಕೈಗೊಂಡಿದೆ ಕುಟುಂಬ.

ಜಾನಪದ ಲೋಕ ಸಜ್ಜುಗೊಳಿಸಲಾಗುತ್ತಿತ್ತು
ಜಾನಪದಲೋಕದ ಬಳಿಮದುವೆ ಮಂಟಪ ನಿರ್ಮಿಸಲು, ಡೈನಿಂಗ್ ಹಾಲ್ ನಿರ್ಮಿಸಲು ಮುಂಬೈನ ವಿನ್ಯಾಸಕಾರರ ಜೊತೆ ಚರ್ಚಿಸಿ ಬ್ಲೂಪ್ರಿಂಟ್ ಕೂಡ ಸಿದ್ಧಗೊಂಡಿತ್ತು.

ಭಾವನಾತ್ಮಕ ಸಂದೇಶ ನೀಡಲಿದ್ದರು ಕುಮಾರಸ್ವಾಮಿ
ಕುಮಾರಸ್ವಾಮಿ ಅವರು, ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ಮಗನ ಮದುವೆ ಮಾಡಿ ಭಾವನಾತ್ಮಕ ಸಂದೇಶ ರವಾನೆ ಮಾಡೋದಿಕ್ಕೆ ಹೆಚ್ಡಿಕೆ ತಯಾರಿ ನಡೆಸಿದ್ದರು. ಜಾನಪದಲೋಕದ ಬಳಿ ಸ್ಥಳಕ್ಕೆ ಈಗಾಗಲೇ ಹೆಚ್ಡಿಕೆ ದಂಪತಿ ಹೋಮ,ಹವನ ನಡೆಸಿ ಭರ್ಜರಿ ಸಿದ್ಧತೆಗೆ ಚಾಲನೆ ನೀಡಿದ್ದರು. ಹೆಚ್ಡಿಡಿ ಮತ್ತು ಹೆಚ್ಡಿಕೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಬಗ್ಗೆಯೂ ಚರ್ಚೆ ಮಾಡಿ ಅಂತಿಮನಿರ್ಧಾರ ಮಾಡಿದ್ದರು.

ಅರಮನೆ ಮೈದಾನದಲ್ಲಿ ಮದುವೆ ನಡೆಯುವ ಸಾಧ್ಯತೆ
ಒಂದೊಮ್ಮೆ ಮದುವೆಯು ರಾಮನಗರದಿಂದ ಶಿಫ್ಟ್ ಆದಲ್ಲಿ ಅರಮನೆ ಮೈದಾನ ಅಥವಾ ಯಾವುದಾದರೂ ದೊಡ್ಡ ಕಲ್ಯಾಣ ಮಂಟಪದಲ್ಲಿ ವಿವಾಹ ನೆರವೇರಿಸಲು ಹೆಚ್ಡಿಕೆ ಕುಟುಂಬ ತೀರ್ಮಾನ ಮಾಡಿದೆ. ಅತ್ಯಾಪ್ತರಿಗೆ ವಿವಾಹ ಆಮಂತ್ರಣ ನೀಡಬಹುದೆಂಬ ಮಾಹಿತಿ ಇದೆ.

ಕೊರೊನಾ ಭೀತಿಯಿಂದ ಮದುವೆ ಸ್ಥಳಾಂತರ
ಕೊರೋನಾ ಎಫೆಕ್ಟ್ ನಿಂದ ಮದುವೆ ಸ್ಥಳಾಂತರಿಸುವ ನಿರ್ಧಾರದಿಂದ ಹೆಚ್ಡಿಕೆ ಕುಟುಂಬ ಬೇಸರದಲ್ಲಿ. ಆದರೂ ನಿರ್ಧಾರವಾಗಿರೋ ಶುಭಮಹೂರ್ತದಲ್ಲಿ ಪ್ರೀತಿಪಾತ್ರ ಪುತ್ರ ನಿಖಿಲ್ ವಿವಾಹ ನಡೆಸಲು ಹೆಚ್ಡಿಕೆ ಸಿದ್ಧತೆ.


Click it and Unblock the Notifications











