ಮೈಕಲ್ ಮಧು ಮೃತದೇಹಕ್ಕೆ ಕೊರೊನಾ ಟೆಸ್ಟ್
ಕನ್ನಡದ ಖ್ಯಾತ ಹಾಸ್ಯನಟ ಮೈಕಲ್ ಮಧು ಅವರು ನಿನ್ನೆ ಮರಣಹೊಂದಿದ್ದಾರೆ. ಅಚಾನಕ್ಕಾಗಿ ಮನೆಯಲ್ಲಿ ಕುಸಿದ ಬಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯ ಉಸಿರೆಳೆದರು.
Recommended Video
ಇಹ ಲೋಕ ತ್ಯಜಿಸಿದ ಕನ್ನಡದ ಹಾಸ್ಯನಟ ಮೈಕೆಲ್ ಮಧು ! | Micheal Madhu No more!
ಮೈಕಲ್ ಮಧು ಅವರ ಮೃತದೇಹ ಕಿಮ್ಸ್ ಆಸ್ಪತ್ರೆಯಲ್ಲಿದ್ದು, ಮೃತ ದೇಹಕ್ಕೆ ಕೊರೊನಾ ಟೆಸ್ಟ್ ಮಾಡಲಾಗಿದೆ. ವರದಿ ಇಂದು ಸಂಜೆ ಬರಲಿದೆ.
ಮೈಕಲ್ ಮಧು ಅವರ ಮೃತದೇಹದ ಕೊರೊನಾ ವರದಿ ಬಂದ ನಂತರವೇ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.

ಮೈಕಲ್ ಮಧು ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡಿದ್ದರು. ಭಿಕ್ಷುಕನ ಪಾತ್ರಗಳು ಅವರ ಟ್ರೇಡ್ ಮಾರ್ಕ್ ಆಗಿತ್ತು. ಲವ್ ಟ್ರೈನಿಂಗ್ ಸ್ಕೂಲ್ ಸಿನಿಮಾದ ಅವರ ಪಾತ್ರ ಭಾರಿ ಜನಪ್ರೀಯತೆ ಗಳಿಸಿತ್ತು.
More from Filmibeat
English summary
Coronavirus test for Micheal Madhu dead body. Report will come today evening.


Click it and Unblock the Notifications











