ವೈದ್ಯರ ನಿರ್ಲಕ್ಷ್ಯದಿಂದಲೇ ನಟಿ ಸಾವು? ಪರವಾನಗಿ ಇಲ್ಲದಿದ್ದರೂ ಶಸ್ತಚಿಕಿತ್ಸೆ?
ಬೆಂಗಳೂರಿನ ಡಾ.ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್‌ನಲ್ಲಿ ಫ್ಯಾಟ್ ಬರ್ನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನ ಹೊಂದಿದ್ದು, ಈ ಸಾವು ಆಸ್ಪತ್ರೆಯವರ ನಿರ್ಲಕ್ಷ್ಯದಿಂದಲೇ ಆಗಿದೆ ಎನ್ನಲಾಗುತ್ತಿದೆ.
ಡಾ.ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್‌ಗೆ ಪ್ಲಾಸ್ಟಿಕ್ ಸರ್ಜರಿ ಮಾಡುವ ಪರವಾನಗಿಯೇ ಇಲ್ಲ ಅದಾಗ್ಯೂ ಕಾಸ್ಮೆಟಿಕ್ ಸೆಂಟರ್‌ನವರು ನಿಯಮಬಾಹಿರವಾಗಿ ನಟಿ ಚೇತನಾ ರಾಜ್‌ಗೆ ಶಸ್ತಚಿಕಿತ್ಸೆ ಮಾಡಿ ಆಕೆಯ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾಗಿದೆ.
ಡಾ ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್‌ಗೆ ಪ್ಲಾಸ್ಟಿಕ್ ಸರ್ಜರಿಗೆ ಬೇಕಾದ ಪರವಾನಗಿ ಇಲ್ಲವೆಂಬುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿರುವುದಾಗಿ ರಿಪಬ್ಲಿಕ್ ಟಿವಿ ವರದಿ ಪ್ರಕಟಿಸಿದೆ.

ಡಾ ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್ ಕೇವಲ ಪಾಲಿ ಕ್ಲೀನಿಕ್ ಪರವಾನಗಿ ಪಡೆದಿದ್ದು, ಯಾವುದೇ ರೀತಿಯ ಶಸ್ತಚಿಕಿತ್ಸೆ ಮಾಡುವ ಪರವಾನಗಿಯನ್ನು ಪಡೆದಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪರವಾನಗಿ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಶಸ್ತಚಿಕಿತ್ಸೆ ನಡೆಸಿರುವುದಲ್ಲದೆ ನಟಿ ಚೇತನಾ ರಾಜ್ ಸಾವಿಗೆ ಕಾರಣವಾಗಿರುವ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ನೊಟೀಸ್ ನೀಡಿದ್ದು, ಮೆಡಿಕಲ್ ಕೌನ್ಸಿಲ್‌ಗೂ ಸಹ ಪತ್ರ ಮಾಹಿತಿ ರವಾನಿಸಿದ್ದಾರೆ.
ಇನ್ನು ನಟಿ ಚೇತನಾ ರಾಜ್ ಅನೈಸರ್ಗಿಕ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ 174(ಸಿ) ಅಡಿಯಲ್ಲಿ ಯುಡಿಆರ್ (ಅನ್ ನ್ಯಾಚುರಲ್ ಡೆತ್) ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಚೇತನಾ ರಾಜ್‌ರ ಮೃತದೇಹದ ಕೆಲವು ಆಂತರಿಕ ಭಾಗಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಮರಣೋತ್ತರ ಪರೀಕ್ಷಾ ವರದಿ ಸಹ ಬರಲಿದೆ. ಇವುಗಳ ಆಧಾರದ ಮೇಲೆ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಇನ್ನು ನಟಿ ಚೇತನಾ ರಾಜ್‌ರ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ಮೇ 16 ರಂದು ನಟಿ ಚೇತನಾ ರಾಜ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ಅವರನ್ನು ಮಂಜುನಾಥ ನಗರದ ಕಾಡೆ ಆಸ್ಪತ್ರೆಗೆ ದಾಖಲಿಸಲಾಯ್ತು ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ, ಸ್ನೇಹಿತರೊಂದಿಗೆ ಆಕೆ ಶಸ್ತ್ರಚಿಕಿತ್ಸೆಗೆ ತೆರಳಿದ್ದರು ಎಂದು ಚೇತನಾ ರಾಜ್ ಪೋಷಕರು ದೂರಿನಲ್ಲಿ ಹೇಳಿದ್ದಾರೆ.
ನಟಿ ಚೇತನಾ ರಾಜ್ 'ಗೀತಾ', 'ದೊರೆಸಾನಿ' ಧಾರಾವಾಹಿಗಳಲ್ಲಿ ನಟಿಸಿದ್ದರು. ಸೊಂಟ ದಪ್ಪಗಾಗಿದೆ ಎಂದು ಬೊಜ್ಜು ಕರಗಿಸುವ ಶಸ್ತಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೇತನಾ ಸಾವನ್ನಪ್ಪಿದ್ದಾರೆ.


Click it and Unblock the Notifications











