For Quick Alerts
  ALLOW NOTIFICATIONS  
  For Daily Alerts

  ಹರ್ಷಿಕಾ ಮಾಡಿದ ಸಹಾಯ ನೆನೆದು ಮಗುವಿಗೆ ನಟಿಯದ್ದೇ ಹೆಸರಿಟ್ಟ ಪೋಷಕರು

  |

  ಕೊಡಗಿನ ಸುಂದರಿ, ನಟಿ ಹರ್ಷಿಕಾ ಪೂಣಚ್ಚ ಈ ಲಾಕ್‌ಡೌನ್ ಅವಧಿಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  ಕೊಡಗು, ಬೆಂಗಳೂರು ಸೇರಿದಂತೆ ಇನ್ನು ಕೆಲವು ಕಡೆಗಳಿಗೆ ತೆರಳಿ ಬಡವರಿಗೆ ಉಚಿತ ದಿನಸಿ ವಿತರಣೆ ಮಾಡುವ ಜೊತೆಗೆ, ಕೋವಿಡ್‌ ರೋಗಿಗಳಿಗೆಂದು ಆಮ್ಲಜನಕ ಪೂರೈಕೆ, ಉಚಿತ ಆಂಬುಲೆನ್ಸ್ ವ್ಯವಸ್ಥೆ ಇನ್ನಿತರೆ ಸೇವೆಗಳನ್ನು ಹರ್ಷಿಕಾ ಪೂಣಚ್ಚ ಮಾಡಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ತೆರಳಿ ಅಲ್ಲಿಯೂ ಸಹಾಯ ಮಾಡಿದ್ದಾರೆ.

  ಹರ್ಷಿಕಾ ಪೂಣಚ್ಚ ಅವರ ಈ ಸೇವಾ ಕಾರ್ಯದಲ್ಲಿ ನಟ ಭುವನ್ ಪೊನ್ನಪ್ಪ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಹರ್ಷಿಕಾ ಮತ್ತು ಭುವನ್ ಅವರು ಉತ್ತರ ಕರ್ನಾಟಕದಲ್ಲಿ ಕೊರೊನಾ ಜಾಗೃತಿ ಪ್ರವಾಸದಲ್ಲಿದ್ದಾಗ ಬೆಳಗಾವಿ ಜಿಲ್ಲೆಯ ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಿದ್ದರು. ಆ ಗ್ರಾಮದಲ್ಲಿ 80 ಮಂದಿ ಕೊರೊನಾ ಕಾರಣಕ್ಕೆ ನಿಧನ ಹೊಂದಿದ್ದರು.

  ಊರಿನ ಜನರೊಟ್ಟಿಗೆ ಮಾತನಾಡಿದ ಹರ್ಷಿಕಾ ಹಾಗೂ ಭುವನ್ ಊರ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮಾಸ್ಕ್‌ನ ಮಹತ್ವವನ್ನು ಸಾರಿ ಹೇಳಿದ್ದಾರೆ. ಹರ್ಷಿಕಾ ಅವರ ಸೇವೆಯನ್ನು ಮೆಚ್ಚಿದ ಅದೇ ಊರಿನ ದಂಪತಿಯೊಬ್ಬರು ತಮಗೆ ಹುಟ್ಟಿದ ಹೆಣ್ಣು ಮಗುವಿ ಹರ್ಷಿಕಾ ಎಂದೇ ನಾಮಕರಣ ಮಾಡಿದ್ದಾರೆ.

  ಹರ್ಷಿಕಾ ನಮ್ಮ ಊರಿಗೆ ಬಂದು ನಮಗೆ ಸಹಾಯ ಮಾಡಿದ್ದಾರೆ. ನಮಗೆ ಸಾಂತ್ವಾನ ಹೇಳಿದ್ದಾರೆ. ಹಾಗಾಗಿ ನಮ್ಮ ಮಗಳೂ ಸಹ ಹಾಗೆಯೇ ಆಗಬೇಕು ಎಂದು ಮಗಳಿಗೆ ಹರ್ಷಿಕಾ ಎಂದು ನಾಮಕರಣ ಮಾಡಿದ್ದಾಗಿ ಹೇಳಿದ್ದಾರೆ. ಹೀಗೆ ನಾಮಕರಣ ಮಾಡುವುದರ ಹಿಂದೆ ಮಗುವಿನ ಚಿಕ್ಕಪ್ಪನ ಒತ್ತಾಸೆಯೂ ಇದೆ.

  ತಮ್ಮ ಜಿಲ್ಲೆ‌ ಮಾತ್ರವಲ್ಲ ಉತ್ತರ ಕರ್ನಾಟಕದ ಬಡವರಿಗೂ ನೆರವಾದ Bhuvan & Harshika | Filmibeat Kannada

  ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹರ್ಷಿಕಾ ಪೂಣಚ್ಚ, 'ನನ್ನ ಜೀವನಕ್ಕೆ ಹೊಸ ಅರ್ಥ ಸಿಕ್ಕಿರುವ ಹಾಗಿದೆ , ಈ ಮುದ್ದು ಪುಟಾಣಿ ಕಂದಮ್ಮನಿಗೆ ನನ್ನ ಹೆಸರು ಇಟ್ಟಿದ್ದಾರೆ .ನಿಮ್ಮ ಪ್ರೀತಿಗೆ ನನ್ನ ಮನಸ್ಸು ತುಂಬಿದೆ . ಈ ವಿಶ್ವಾಸಕ್ಕೆ ನಾನೆಂದು ಚಿರಋಣಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಗುವಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

  English summary
  A couple in Belgaum impressed with heroine Harshika Poonacha's social work, decided to name their baby girl as Harshika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X