ಹತ್ತು ವರ್ಷದ ಬಳಿಕ ಗಣೇಶ್ ಗೆ ಕೋರ್ಟ್ ನಲ್ಲಿ ಸಿಕ್ತು ನ್ಯಾಯ
Recommended Video

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮೋಕ್ಷ ಅಗರಬತ್ತಿ ನಡುವಿನ ವಿವಾದಕ್ಕೆ ತೆರೆ ಬಿದ್ದಿದ್ದೆ. ಸುಮಾರು ಹತ್ತು ವರ್ಷಗಳಿಂದ ನಡೆದ ಜಟಾಪಟಿಯಲ್ಲಿ ನ್ಯಾಯ ಗಣೇಶ್ ಅವರ ಪರವಾಗಿ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಸಮಯದಲ್ಲಿ ಮೋಕ್ಷ ಅಗರಬತ್ತಿ ಕಂಪನಿ ಜೊತೆಯಲ್ಲಿ ಜಾಹೀರಾತು ಒಪ್ಪಂದವನ್ನ ಮಾಡಿಕೊಳ್ಳಲಾಗಿತ್ತು.
ಸಿನಿಮಾ ಪ್ರಚಾರಕ್ಕಾಗಿ ಮೂರು ತಿಂಗಳ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಮೋಕ್ಷ ಅಗರಬತ್ತಿ ಮೂರು ತಿಂಗಳ ಒಪ್ಪಂದದ ಬಳಿಕವೂ ಗಣೇಶ್ ಅವರ ಬೇರೆ ಭಾವಚಿತ್ರವನ್ನ ಬಳಕೆ ಮಾಡಿದ್ದರು. ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಗಣೇಶ್ 2008ರಲ್ಲಿ 75 ಲಕ್ಷ ಹಣ ಕಟ್ಟಿಕೊಡುವಂತೆ ಕೇಳಿದ್ದರು.

ಸಾಕಷ್ಟು ವರ್ಷಗಳಿಂದ ಕೋರ್ಟ್ ನಲ್ಲಿ ಪರ ವಿರೋಧ ವಾದ -ವಿವಾದ ಆದ ನಂತರ ಇಂದು ಕೇಸ್ ಕ್ಲಿಯರ್ ಆಗಿದೆ. ಮೋಕ್ಷ ಅಗರಬತ್ತಿ ಕಂಪನಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ 75 ಲಕ್ಷ ಕಟ್ಟಿಕೊಡುವಂತೆ ಕೋರ್ಟ್ ಆದೇಶ ನೀಡಿದೆ. ಒಟ್ಟಾರೆ ಈ ಆದೇಶದಿಂದ ಕಲಾವಿದರ ಪೋಟೋಗಳನ್ನ ಅವರ ಒಪ್ಪಿಗೆ ಇಲ್ಲದೆ ಬಳಸಿಕೊಂಡು ವ್ಯಾಪಾರ ಮಾಡಬಾರದು ಎಂದು ಖಚಿತವಾಗಿದೆ.


Click it and Unblock the Notifications











