»   » ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ನಾಳೆ ತೀರ್ಪು

ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ನಾಳೆ ತೀರ್ಪು

Posted By:
Subscribe to Filmibeat Kannada
ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ | Filmibeat Kannada

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನ ಇಂದು ನಡೆಸಿದ ಜೋಧ್ ಪುರ್ ಸೆಷನ್ಸ್ ಕೋರ್ಟ್ ತೀರ್ಪನ್ನ ನಾಳೆಗೆ ಕಾಯ್ದಿರಿಸಿದೆ. ಹೀಗಾಗಿ, ಸಲ್ಮಾನ್ ಖಾನ್ ಮತ್ತೊಂದು ದಿನ ಜೈಲಿನಲ್ಲಿ ಕಳೆಯಬೇಕಿದೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ ಸಲ್ಲುಗೆ 5 ಐದು ವರ್ಷ ಜೈಲು ಶಿಕ್ಷೆ ನೀಡಿತ್ತು. ತಕ್ಷಣವೇ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಕೀಲರ ವಾದ ಆಲಿಸಿತು. ಆದ್ರೆ, ತೀರ್ಪನ್ನ ನಾಳೆಗೆ ಮುಂದೂಡಿದೆ.

court reserves salman khan bail plea order

ಶನಿವಾರ ಬೆಳಿಗ್ಗೆ 10.30ಕ್ಕೆ ಮತ್ತೆ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ನಡೆಯಲಿದ್ದು, ಆದೇಶವೂ ನಾಳೆಯೇ ಹೊರಬೀಳಲಿದೆ.

ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!

ಸೆಪ್ಟೆಂಬರ್ 26, 1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ಜೋಧ್ ಪುರ ಬಳಿಯ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪ ಸಲ್ಮಾನ್ ಖಾನ್ ಮೇಲಿದೆ.

ಸಲ್ಮಾನ್ ಖಾನ್ ಅವರ ಸಾಮಾಜಿಕ ಕಳಕಳಿ, ಮತ್ತು ಬಾಲಿವುಡ್ ನಿರ್ಮಾಪಕರು ಹೂಡಿರುವ ಬಂಡವಾಳದ ಕಾರಣದಿಂದ ನ್ಯಾಯಾಲಯ ಜಾಮೀನು ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

English summary
Salman Khan will have to stay in Jodhpur Central Jail another day, as the Jodhpur Sessions Court delayed until tomorrow an order on a bail plea by the actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X