ಸಿನಿಮಾ ಮಂದಿರಗಳಲ್ಲಿ 50% ಆಕ್ಯೂಪೆನ್ಸಿ ಜಾರಿ: ಚಿತ್ರಗಳ ರಿಲೀಸ್ ಮುಂದೂಡಿಕೆ?
ಸುಮಾರು ಆರು ತಿಂಗಳಿನಿಂದ ನಿಯಂತ್ರಣದಲ್ಲಿ ಇದ್ದ ಕೊರೊನಾ, ಈಗ ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಿನ ಸಂಖ್ಯೆ ಕಂಡು ಬರುತ್ತಿವೆ. ಹಾಗಾಗಿ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನಿಯಮಗಳನ್ನು ಜಾರಿ ಮಾಡಿದೆ.
Recommended Video

ಕೊರೊನಾದಿಂದ ಮತ್ತೆ ಚಿತ್ರಮಂದಿರಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ. ಸದ್ಯಕ್ಕೆ ಚಿತ್ರ ಮಂದಿರಗಳಲ್ಲಿ 50% ಆಕ್ಯುಪೆನ್ಸಿಯನ್ನು ಜಾರಿ ಮಾಡಲಾಗಿದೆ. ಅಂದರೆ ಈ ಹಿಂದೆ ಕೊರೊನಾ ಸಮಯದಲ್ಲಿ ಜಾರಿಯಾಗಿದ್ದ 50% ಆಕ್ಯುಪೆನ್ಸಿ ನಿಯಮ ಈಗ ಮತ್ತೆ ಜಾರಿಯಾಗಿದೆ.
ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ಇಲ್ಲ. ಕೇವಲ ಶೇಕಡ 50ರಷ್ಟು ಮಂದಿಗೆ ಮಾತ್ರ ಸಿನಿಮಾ ನೋಡಲು ಅವಕಾಶ ಕೊಡಲಾಗಿದೆ. ಈ ನಿಯಮ ಇಂದು (5-1-2022)ರ ರಾತ್ರಿ ಹತ್ತು ಗಂಟೆಯಿಂದ ಜಾರಿಗೆ ಬರಲಿದೆ. ಸರ್ಕಾರದ ಮುಂದಿನ ಆದೇಶದ ತನಕ ಈ ನಿಯಮ ಜಾರಿಯಲ್ಲಿ ಇರಲಿದೆ.

ಸಿನಿಮಾ ಮಂದಿಗೆ ಮತ್ತೆ 50% ಆಕ್ಯೂಪೆನ್ಸಿ ಬರೆ!
ಎರಡನೇ ಅಲೆಯ ಬಳಿಕ ಈಗ ತಾನೆ ಚಿತ್ರ ರಂಗ ಚೇತರಿಸಿಕೊಳ್ಳುತ್ತಿತ್ತು. ಸಾಲು ಸಾಲು ಚಿತ್ರಗಳು ರಿಲೀಸ್‌ಗಾಗಿ ರೆಡಿ ಆಗಿದ್ದವು. ಸಿನಿಮಾ ಪ್ರೇಕ್ಷಕರು ಕೂಡ ಭಯ ಬಿಟ್ಟು ನಿಧಾನವಾಗಿ ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡಲು ಒಗ್ಗಿ ಬಿಟ್ಟಿದ್ದರು. ಆದರೆ ಈ ಮತ್ತೆ 50% ಆಕ್ಯುಪೆನ್ಸಿ ಬರೆ ಎಳೆಯಲಾಗಿದೆ. ಇದು ಕೊರೊನಾ ಹೆಚ್ಚಾಗುತ್ತಿರುವುದಕ್ಕೆ ತೆಗೆದು ಕೊಂಡಿರುವ ಕ್ರಮ.

ವೀಕೆಂಡ್‌ನಲ್ಲಿ ಮುಚ್ಚಿರಲಿವೆ ಚಿತ್ರಮಂದಿರಗಳು!
ಇನ್ನು 50% ಆಕ್ಯುಪೆನ್ಸಿ ಮಾತ್ರವಲ್ಲ. ವೀಕೆಂಡ್ ಕರ್ಫೂ ಕೂಡ ಜಾರಿ ಆಗಿದೆ. ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ ಎಲ್ಲವೂ ಬಂದ್ ಆಗಿರಲಿದೆ. ಜನರು ಹೆಚ್ಚಾಗಿ ಸಿನಿಮಾ ಮಂದಿರಗಳತ್ತ ಮುಖ ಮಾಡುವುದೇ ವಾರಾಂತ್ಯದಲ್ಲಿ. ಆದರೆ ಈಗ ವಾರಾಂತ್ಯದಲ್ಲಿ ಚಿತ್ರ ಮಂದಿರಗಳು ಬಂದ್ ಆಗಲಿವೆ. ಆಗಾಗಿ ಇದು ಕೂಡ ಸಿನಿಮಾಗಳಿಗೆ ಕಷ್ಟಕರವಾದ ವಿಚಾರ.

ಚಿತ್ರಗಳ ರಿಲೀಸ್ ಮುಂದೂಡಿಕೆ ಸಾಧ್ಯತೆ!
ಸದ್ಯ ಕೊರೊನಾ ಹೆಚ್ಚಾಗುತ್ತಿರುವ ಕಾರಣಕ್ಕೆ ನಿಧಾನವಾಗಿ ಸಿನಿಮಾ ಕೆಲಸಗಳಿಗೂ ಬ್ರೇಕ್ ಬೀಳಲಿದೆ. ಹಾಗಾಗಿ ಸದ್ಯಕ್ಕೆ ಸಿನಿಮಾಗಳನ್ನು ರಿಲೀಸ್ ಮಾಡುವ ಆಲೋಚನೆಯನ್ನು ಮುಂದೂಡವ ಅನಿವಾರ್ಯತೆ ಎದುರಾದಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿಲ್ಲ.

ಪೋಸ್ಟ್ ಪೋನ್ ಆಗುತ್ತಾ ವಿಕ್ರಾಂತ್ ರೋಣ!
ದೇಶಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ, ಬಹು ನಿರೀಕ್ಷಿತ RRR ಚಿತ್ರದ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿದೆ. ಇನ್ನು ಕನ್ನಡದಲ್ಲಿ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಫೆಬ್ರವರಿ 24ಕ್ಕೆ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. ಪರಿಸ್ಥಿತಿ ಹೀಗೆ ಇದ್ದರೆ, ಅ ಚಿತ್ರವೂ ಪೋಸ್ಟ್ ಪೋನ್ ಆಗುವ ಸಾಧ್ಯತೆ ಇದೆ.


Click it and Unblock the Notifications











