ಶ್ರೀಲಂಕಾ ಬಾಂಬ್ ಸ್ಫೋಟ: ಕೂದಲೆಳೆಯ ಅಂತರದಲ್ಲಿ ಪಾರಾದ 'ದಿ ವಿಲನ್' ನಿರ್ಮಾಪಕ

ಶ್ರೀಲಂಕಾದಲ್ಲಿ ನಡೆದಿರುವ ಬಾಂಬ್ ಸ್ಫೋಟದಿಂದ ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಸಿ.ಆರ್. ಮನೋಹರ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ ಎಂಬುದು ತಡವಾಗಿ ಬೆಳಕಿದೆ ಬಂದಿದೆ.

ಭಾನುವಾರ ಬೆಳಿಗ್ಗೆ ಶ್ರೀಲಂಕಾದ ಕೊಲೊಂಬೋದಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ಇದರಲ್ಲಿ ಇಬ್ಬರು ಭಾರತೀಯರು ಸೇರಿ ಸುಮಾರು 290ಕ್ಕೂ ಅಧಿಕ ಜನರ ಸಾವನ್ನಪ್ಪಿದ್ದಾರೆ.

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ

ಈ ವೇಳೆ ಶ್ರೀಲಂಕಾಗೆ ತೆರಳಿದ್ದ ಸಿ.ಆರ್ ಮನೋಹರ್ ತಾಜ್ ಹೋಟೆಲ್ ನಲ್ಲಿ ತಂಗಿದ್ದರು. ಅದೇ ಹೋಟೆಲ್ ಪಕ್ಕಾ ಬಾಂಬ್ ಬ್ಲಾಸ್ ಆಗಿದೆ. ಇದರಿಂದ ಸಹಜವಾಗಿ ಆತಂಕಗೊಂಡ ಸಿ.ಆರ್ ಮನೋಹರ್ ಅವರು ನಿನ್ನೆ ಸಂಜೆ ಭಾರತಕ್ಕೆ ವಾಪಸ್ ಆಗಿದ್ದಾರೆ.

Cr manohar escaped in srilanka bomb blast

ಮತ್ತೊಂದೆಡೆ ಬಾಂಬ್ ಸ್ಫೋಟದಿಂದ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಕೂಡ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಸಿನ್ನಮೋನ್ ಹೋಟೆಲ್ ನಲ್ಲಿದ್ದ ರಾಧಿಕಾ, ಅಲ್ಲಿಂದ ಹೊರಗೆ ಹೋದ ಕೆಲವೇ ಸಮಯದಲ್ಲಿ ಬಾಂಬ್ ಸ್ಪೋಟವಾಗಿದೆ. ಅದೃಷ್ಟವಶಾತ್ ರಾಧಿಕಾ ಪಾರಾಗಿದ್ದಾರೆ.

ಸಿ ಆರ್ ಮನೋಹರ್ ಅವರು ವಿಧಾನಪರಿಷತ್ ಸದಸ್ಯ ಹಾಗೂ ಸಿನಿಮಾ ನಿರ್ಮಾಪಕ. ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾವನ್ನ ಕೊನೆಯದಾಗಿ ನಿರ್ಮಾಣ ಮಾಡಿದ್ದರು.

More from Filmibeat

English summary
Kannada producer Cr manohar has escape in sri lanka bomb blast on sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X