For Quick Alerts
  ALLOW NOTIFICATIONS  
  For Daily Alerts

  ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ'

  By Suneetha
  |

  ಸ್ಯಾಂಡಲ್ ವುಡ್ ನ ದಿಗ್ಗಜರಿಬ್ಬರು ಇದೇ ಮೊದಲ ಬಾರಿಗೆ ಒಂದಾಗಿರುವ ಚಿತ್ರಕ್ಕೆ 'ಕಲಿ' ಎಂದು ಟೈಟಲ್ ಫಿಕ್ಸ್ ಆಗಿದೆ. ನಿನ್ನೆ (ಡಿಸೆಂಬರ್ 13) ಹೊಟೆಲ್ ಲಲಿತ್ ಅಶೋಕದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೈಟಲ್ ಲಾಂಚ್ ಮಾಡಿದ್ದಾರೆ.

  ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಈ ಸ್ಟಾರ್ ನಟರಿಬ್ಬರನ್ನು ಹಾಕಿಕೊಂಡು ಮಾಡುತ್ತಿರುವ 'ಕಲಿ' ಚಿತ್ರ ಇಡೀ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿಸಿದೆ. ಸುಮಾರು 110 ಕೋಟಿಯ ಭರ್ಜರಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಸಿ.ಆರ್.ಮನೋಹರ್ ಅವರು ಬಂಡವಾಳ ಹೂಡುತ್ತಿದ್ದಾರೆ.[ವಾವ್.! ಶಿವಣ್ಣ-ದೀಪಣ್ಣ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತಾ?]

  ಸಾಮಾನ್ಯವಾಗಿ ದಿಗ್ಗಜರಿಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದ ಮೇಲೆ ಕೇಳಬೇಕೆ. ಅಭಿಮಾನಿಗಳಂತೂ ಬಹಳ ಕುತೂಹಲದಿಂದಲೇ ಹೊಟೆಲ್ ಲಲಿತ್ ಅಶೋಕ್ ನಲ್ಲಿ ನೆರೆದಿದ್ದರು. ಅದಕ್ಕೆ ತಕ್ಕಂತೆ ನಿರ್ದೇಶಕ ಪ್ರೇಮ್ ಅವರು ಕೂಡ ಅದ್ದೂರಿ ಸಮಾರಂಭವನ್ನು ಏರ್ಪಡಿಸಿದ್ದರು.

  ಭಾನುವಾರ ಲಲಿತ್ ಅಶೋಕ್ ಹೊಟೆಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟೈಟಲ್ ಲಾಂಚ್ ಮಾಡಿದ ವಿಡಿಯೋ ಝಲಕ್ ಇಲ್ಲಿದೆ. ನೀವು ನೋಡಿ ಕಣ್ತುಂಬಿಕೊಳ್ಳಿ..

  ಅಂದಹಾಗೆ ಈ 'ಕಲಿ' ಶೀರ್ಷಿಕೆಯ ಕೆಳಗೆ ವಾರಿಯರ್ ಮತ್ತು ರೂಲರ್ ಎಂಬ ಅಡಿಬರಹ ಇದ್ದು, ಇದರಲ್ಲಿ ವಾರಿಯರ್ ಯಾರು ರೂಲರ್ ಯಾರು ಅನ್ನೋದನ್ನ ನಿರ್ದೇಶಕ ಪ್ರೇಮ್ ಅವರು ಸೀಕ್ರೆಟ್ ಆಗಿ ಇಟ್ಟಿದ್ದಾರೆ.[ಶಿವಣ್ಣ-ಸುದೀಪ್ ಸಿನಿಮಾ ಟೈಟಲ್ ಲಾಂಚ್ ಮಾಡೋದು ಇವರೇ!]

  ಜೊತೆಗೆ ಈ ಅಡಿಬರಹ ನೋಡುತ್ತಿದ್ದರೆ ಇದೊಂದು ಪಕ್ಕಾ ಆಕ್ಷನ್-ಓರಿಯೆಂಟೆಡ್ ಪೀರಿಯಡ್ ಸಿನಿಮಾ ಎನ್ನಲಾಗಿದೆ. ಅಲ್ಲದೇ ಯೋಧರ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಕ ಪ್ರೇಮ್ ಅವರು ಮಾಡಿದ್ದಾರೆ.

  ಕಾರ್ಯಕ್ರಮದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್, ಲವ್ಲಿ ಸ್ಟಾರ್ ಪ್ರೇಮ್, ಗೀತಾ ಶಿವರಾಜ್ ಕುಮಾರ್, ನಟಿ ರಕ್ಷಿತಾ ಪ್ರೇಮ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ರಕ್ಷಿತ್, ನಟಿ ಹರಿಪ್ರಿಯಾ, ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಸಂಭ್ರಮದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

  English summary
  Superstars Shivarajkumar and Sudeep in a big-budget multi-starrer movie. On Suday (Dec 13), the movie and the title of the movie was officially launched by CM Siddaramaiah. The movie has been titled 'Kali' and it was a big event function held at hotel, The Lalit Ashok. The movie is directed by 'Jogi' Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X