'ಅವನೇ ಶ್ರೀಮನ್ನಾರಾಯಣ' ಅರ್ಥ ಮಾಡ್ಕೊಳ್ಳೋಕೆ ಬ್ರೇನ್ ಚುರುಕಾಗಿ ಇರ್ಬೇಕು.!
Recommended Video
''ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ಅರ್ಥ ಮಾಡಿಕೊಳ್ಳೋಕೆ ಬ್ರೇನ್ ಸ್ವಲ್ಪ ಚುರುಕಾಗಿ ಇರಬೇಕು.!'' - ಹೀಗಂತ ಪಕ್ಕದಲ್ಲಿ ನಿರ್ದೇಶಕ ಸಚಿನ್ ರವಿ ರವರನ್ನ ನಿಲ್ಲಿಸಿಕೊಂಡು ಹೇಳಿದವರು ಕ್ರೇಜಿ ಸ್ಟಾರ್ ರವಿಚಂದ್ರನ್.
'ಅವನೇ ಶ್ರೀಮನ್ನಾರಾಯಣ' ಇವತ್ತು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ಕನ್ನಡ ಸಿನಿ ಪ್ರಿಯರು ಕಣ್ತುಂಬಿಕೊಳ್ಳುವ ಮುನ್ನ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗಾಗಿ ನಿನ್ನೆ ರಾತ್ರಿ ಪ್ರೀಮಿಯರ್ ಶೋ ಆಯೋಜಿಸಿತ್ತು ಚಿತ್ರತಂಡ.
ಬೆಂಗಳೂರಿನ ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ 'ಅವನೇ ಶ್ರೀಮನ್ನಾರಾಯಣ' ಪ್ರೀಮಿಯರ್ ಶೋ ನಡೆಯಿತು. ಇದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜ್ ಸ್ಟಾರ್ ರವಿಚಂದ್ರನ್, ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರಿಷಬ್ ಶೆಟ್ಟಿ, ವಿನಯ್ ರಾಜ್ ಕುಮಾರ್, ಆಶಿಕಾ ರಂಗನಾಥ್, ತರುಣ್ ಸುಧೀರ್, ಶರಣ್, ಶ್ರೀಲೀಲಾ, ಅಕುಲ್ ಬಾಲಾಜಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು ಪಾಲ್ಗೊಂಡಿದ್ದರು.

'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ವೀಕ್ಷಿಸಿದ ಬಳಿಕ, ನಿರ್ದೇಶಕ ಸಚಿನ್ ರವಿ ರನ್ನ ಪಕ್ಕದಲ್ಲಿ ನಿಲ್ಲಿಸಿಕೊಂಡು ಮೀಡಿಯಾ ಮುಂದೆ ರವಿಚಂದ್ರನ್ ಕೊಟ್ಟ ರಿವ್ಯೂ ಇದು -
''ಈ ಸಿನಿಮಾ ಒಂದೊಳ್ಳೆ ಅನುಭವ ಕೊಡುತ್ತೆ. ಸಿನಿಮಾ ಟೇಕಾಫ್ ಆದ ರೀತಿ, ಆಡಿಯನ್ಸ್ ನ ಹಿಡಿದಿಟ್ಟುಕೊಳ್ಳುವ ಶೈಲಿ ಚೆನ್ನಾಗಿದೆ. ಕುತೂಹಲದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ತಮಾಷೆ ಮಿಕ್ಸ್ ಮಾಡಿಕೊಂಡು ಸೀರಿಯಸ್ ಕಥೆಯನ್ನ ಹೇಳಿರುವುದು ತುಂಬಾ ಚೆನ್ನಾಗಿದೆ. ಇದು ವಿಶುವಲ್ ಟ್ರೀಟ್ ಮಾತ್ರ ಅಲ್ಲ. ಬ್ರೇನ್ ಸ್ವಲ್ಪ ಚುರುಕಾಗಿ ಇರಬೇಕು ಚಿತ್ರವನ್ನ ಅರ್ಥಮಾಡಿಕೊಳ್ಳೋಕೆ. ಈ ಚಿತ್ರದ ಹಿಂದೆ ಇರುವ ಪ್ರತಿಯೊಬ್ಬರ ಪ್ರಯತ್ನ ಮೆಚ್ಚಬೇಕು. ಯಾರ ಬಗ್ಗೆಯೂ ನಾನು ಕೊರತೆ ಕಂಡು ಹಿಡಿಯಲು ಆಗಲಿಲ್ಲ. ಒಂದು ಕಂಪ್ಲೀಟ್ ಸಿನಿಮಾ ನೋಡಿದ ಅನುಭವ ನನಗೆ ಆಯ್ತು. ಚಿತ್ರ ನೋಡುವಾಗ ಎರಡುವರೆ ಗಂಟೆ ನಾನು ಫೋನ್ ನೋಡಲಿಲ್ಲ. ಫೋನ್ ನೋಡಬೇಕು ಅಂತ ನನಗೆ ಅನಿಸಲಿಲ್ಲ. ಆ ಕ್ಯೂರಿಯಾಸಿಟಿ ಲೆವೆಲ್ ನ ಚಿತ್ರ ಮೇನ್ಟೇನ್ ಮಾಡಿದೆ. ಈ ಚಿತ್ರದ ನಿರ್ಮಾಪಕರಿಗೆ ಲಕ್ಷ್ಮಿ ಸಿಗಲಿ''
ಒಟ್ನಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಗಂತೂ ಇಷ್ಟವಾಗಿದೆ. ಹಾಗಾದ್ರೆ, ಇವತ್ತು ರಿಲೀಸ್ ಆಗಿರುವ ಈ ಚಿತ್ರವನ್ನ ನೋಡಲು ನೀವು ರೆಡಿನಾ.?


Click it and Unblock the Notifications











