»   » 'ಹೆಬ್ಬುಲಿ' ಮೇಲೆ ಗರಂ ಆದ ಕ್ರೇಜಿಸ್ಟಾರ್ ಅಭಿಮಾನಿಗಳು

'ಹೆಬ್ಬುಲಿ' ಮೇಲೆ ಗರಂ ಆದ ಕ್ರೇಜಿಸ್ಟಾರ್ ಅಭಿಮಾನಿಗಳು

Posted By: BK
Subscribe to Filmibeat Kannada

ಇಂದು (ಫೆಬ್ರವರಿ 23) ಇಡೀ ಸ್ಯಾಂಡಲ್ ವುಡ್ 'ಹೆಬ್ಬುಲಿ'ಯ ಅಬ್ಬರದಿಂದ ಮುಳುಗಿಹೋಗಿದೆ. ಆದ್ರೆ, ಈ ಅಬ್ಬರದ ನಡುವೆ ರವಿಚಂದ್ರನ್ ಅಭಿಮಾನಿಗಳ ಆಕ್ರೋಶಕ್ಕೆ 'ಹೆಬ್ಬುಲಿ' ಚಿತ್ರತಂಡ ಗುರಿಯಾಗಿರುವುದು ಮಾತ್ರ ಬೇಸರದ ಸಂಗತಿ.

ಈ ಹಿಂದೆ ಕಟೌಟ್ ವಿಚಾರದಲ್ಲಿ ರವಿಚಂದ್ರನ್ ಫ್ಯಾನ್ಸ್ ಸುದೀಪ್ ಅವರ ಚಿತ್ರತಂಡದ ಮೇಲೆ ಗರಂ ಆಗಿದ್ದರು. ಅಂತಹದ್ದೇ ಘಟನೆಗೆ ಈಗ ಸುದೀಪ್ ಅಭಿನಯದ 'ಹೆಬ್ಬುಲಿ' ಸಾಕ್ಷಿಯಾಗಿದೆ.

ಇದರ ಪರಿಣಾಮ ಕಿಚ್ಚನ ಅಭಿಮಾನಿಗಳು ಖುಷಿಯಿಂದ 'ಹೆಬ್ಬುಲಿ' ಸಿನಿಮಾ ನೋಡುತ್ತಿದ್ದರೇ, ರವಿಮಾಮನ ಅಭಿಮಾನಿಗಳು ಮಾತ್ರ, ಬೇಸರ ಮಾಡಿಕೊಳ್ಳುವಂತಾಗಿದೆ.

ಕ್ರೇಜಿ ಫ್ಯಾನ್ಸ್ ಬೇಸರಕ್ಕೆ ಕಾರಣವಾದ 'ಹೆಬ್ಬುಲಿ'

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಇಂದು ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಬಿಡುಗಡೆಯಾಗಿದೆ. ಬಹುನಿರೀಕ್ಷೆಯ ಈ ಚಿತ್ರವನ್ನ ಮೊದಲ ಶೋನೇ ನೋಡಬೇಕೆಂದ್ದಿದ್ದ ರವಿಚಂದ್ರನ್ ಅಭಿಮಾನಿಗಳು ಬೇಸರವಾಗುವ ಘಟನೆಯೊಂದು ನಡೆದಿದೆ.

'ಹೆಬ್ಬುಲಿ' ಪಕ್ಕದಲ್ಲಿಲ್ಲ ಕ್ರೇಜಿಸ್ಟಾರ್ ಕಟೌಟ್!

'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಜೊತೆಯಲ್ಲಿ ರವಿಚಂದ್ರನ್ ಅಭಿನಯಿಸಿದ್ದಾರೆ. ಹೀಗಾಗಿ, ಇಬ್ಬರು ಕಟೌಟ್ ಚಿತ್ರಮಂದಿರದ ಎದುರು ಹಾಕಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದ್ರೆ, ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದ್ದು, ಸುಮಾರು 60 ಅಡಿಗೂ ಎತ್ತರದ ಸುದೀಪ್ ಅವರ ಕಟೌಟ್ ಮಾತ್ರ ನಿಲ್ಲಿಸಲಾಗಿದೆ.

ಕೋಪಗೊಂಡ ರವಿಚಂದ್ರನ್ ಅಭಿಮಾನಿಗಳು

ರವಿಚಂದ್ರನ್ ಕನ್ನಡದ ದಿಗ್ಗಜ ನಟ. 'ಹೆಬ್ಬುಲಿ' ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರೂ, ಕಟೌಟ್ ನಿಲ್ಲಿಸದೆ ಇರುವುದು ಅವರ ಅಭಿಮಾನಿಗಳಿಗೆ ಆಕ್ರೋಶ ಉಂಟು ಮಾಡಿದೆ. ಹೀಗಾಗಿ, 'ಹೆಬ್ಬುಲಿ' ಪಕ್ಕದಲ್ಲಿ ರವಿಮಾಮನ ಕಟೌಟ್ ಇಲ್ಲದೆ ಇರುವುದು ಕ್ರೇಜಿಸ್ಟಾರ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ನಿರ್ಮಾಪಕರ ವಿರುದ್ಧ ಫ್ಯಾನ್ಸ್ ಗರಂ

ಈ ವಿಚಾರದಲ್ಲಿ ಸುದೀಪ್ ಅವರ ಮೇಲೆ ಯಾವುದೇ ಬೇಸರವಿಲ್ಲ. ಆದ್ರೆ, ಚಿತ್ರದ ನಿರ್ಮಾಪಕರು ಈ ವಿಷ್ಯದಲ್ಲಿ ಜವಾಬ್ದಾರಿಯಾಗಿರುತ್ತಾರೆ ಎಂಬುದು ರವಿಚಂದ್ರನ್ ಅವರ ಅಭಿಮಾನಿಗಳ ವಾದ.

ರವಿ ಫ್ಯಾನ್ಸ್ ಗೆ 'ಹೆಬ್ಬುಲಿ' ನಿರ್ದೇಶಕರಿಂದ ಸಮಾಧಾನ

ಈ ವಿಚಾರವಾಗಿ ಸಂತೋಷ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ 'ಹೆಬ್ಬುಲಿ' ನಿರ್ದೇಶಕರ ಬಳಿ, ಕ್ರೇಜಿಸ್ಟಾರ್ ಅಭಿಮಾನಿಗಳು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಿರ್ದೇಶಕ ಕೃಷ್ಣ ಅಭಿಮಾನಿಗಳನ್ನ ಸಮಾಧಾನ ಪಡಿಸಿದ ಘಟನೆ ಕೂಡ ನಡೆಯಿತು.

'ಮಾಣಿಕ್ಯ' ಚಿತ್ರದ ವೇಳೆಯೂ ಕಟೌಟ್ ವಿವಾದ!

ಈ ಹಿಂದೆ ಸುದೀಪ್ ಹಾಗೂ ರವಿಚಂದ್ರನ್ ಒಟ್ಟಿಗೆ ಕಾಣಿಸಿಕೊಂಡಿದ್ದ ಮಾಣಿಕ್ಯ ಚಿತ್ರದ ವೇಳೆ ಕೂಡ ರವಿಚಂದ್ರನ್ ಅಭಿಮಾನಿಗಳು ಕೋಪಗೊಂಡಿದ್ದ ಘಟನೆ ನಡೆದಿತ್ತು. ಚಿತ್ರಮಂದಿರದ ಎದುರು ಸುದೀಪ್ ಹಾಗೂ ರವಿಚಂದ್ರನ್ ಇಬ್ಬರ ಕಟೌಟ್ ನಿಲ್ಲಿಸಿದ್ದರೂ, ಸುದೀಪ್ ಅವರ ಕಟೌಟ್ ಗೆ ಮಾತ್ರ ಹಾರ ಹಾಕಲಾಗಿತ್ತು. ಇದು ಕ್ರೇಜಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

'ಅಪೂರ್ವ' ಸಮಯದಲ್ಲಿತ್ತು ಇಬ್ಬರ ಕಟೌಟ್!

ರವಿಚಂದ್ರನ್ ನಿರ್ದೇಶಿಸಿ, ನಿರ್ಮಾಣ ಮಾಡಿ, ನಟನೆ ಮಾಡಿದ್ದ 'ಅಪೂರ್ವ' ಚಿತ್ರದಲ್ಲಿ, ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಈ ಚಿತ್ರದ ಬಿಡುಗಡೆ ವೇಳೆ ಕಿಚ್ಚ ಮತ್ತು ರವಿಚಂದ್ರನ್ ಇಬ್ಬರ ಕಟೌಟ್ ಕೂಡ ನಿಲ್ಲಿಸಲಾಗಿತ್ತು.

English summary
Crazy Star Ravichandran Fans Boredom Over Hebbuli Team. Ravi Fans Have Alleged That, Ravichandran Was Dishonoured at the Santosh Theatre. Becuse, No Cut-out For Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada