For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್!

  By Harshitha
  |

  ಸಿನಿಮಾ...ಸಿನಿಮಾ...ಅಂತ ಸದಾ ಕಾಲ ಬಣ್ಣದ ಬದುಕಲ್ಲೇ ಉಸಿರಾಡುವ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಚಿತ್ರರಂಗಕ್ಕೆ ಕಾಲಿಟ್ಟ ಮೂರು ದಶಕಗಳಲ್ಲಿ ಕನ್ನಡ ಸಿನಿಪ್ರಿಯರ ಪ್ರೀತಿಯ ಮಲ್ಲನಾಗಿರುವ ರವಿಚಂದ್ರನ್ ಇನ್ಮುಂದೆ ಡಾ.ರವಿಚಂದ್ರನ್!

  ನಟ ಸಾರ್ವಭೌಮ ಡಾ.ರಾಜ್ ಕುಮಾರ್, ರೆಬೆಲ್ ಸ್ಟಾರ್ ಡಾ.ಅಂಬರೀಶ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ತರಹ ರವಿಚಂದ್ರನ್, ಡಾ.ರವಿಚಂದ್ರನ್ ಆಗಿಲ್ಲ. ಅವ್ರು ವೈದ್ಯಕೀಯ ಶಿಕ್ಷಣ ಮಾಡಿಲ್ಲ. ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಯಾವುದೇ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಕೂಡ ಕೊಟ್ಟಿಲ್ಲ. ಆದರೂ ರವಿಚಂದ್ರನ್ ಡಾಕ್ಟರ್ ಆಗಿದ್ದಾರೆ. ಅದು ತೆರೆಮೇಲೆ. [ಇದೇ ಮೊದಲ ಬಾರಿಗೆ ಸ್ತ್ರೀರೋಗ ತಜ್ಞರಾಗಿ ಕ್ರೇಜಿಸ್ಟಾರ್]

  ಹೌದು, ಮೂರು ದಶಕಗಳ ಚಿತ್ರಜೀವನದಲ್ಲಿ ಮೊಟ್ಟಮೊದಲ ಬಾರಿಗೆ ರವಿಮಾಮ ಪರದೆಮೇಲೆ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್. ಎರಡು ವರ್ಷಗಳ ಗ್ಯಾಪ್ ನಂತ್ರ 'ಲವ್ ಯು ಆಲಿಯಾ' ಸಿನಿಮಾಗೆ ನಿರ್ದೇಶನ ಮಾಡುತ್ತಿರುವ ಇಂದ್ರಜಿತ್ ಲಂಕೇಶ್, ಇದೇ ಪ್ರಪ್ರಥಮ ಬಾರಿಗೆ ರವಿಚಂದ್ರನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಕಂಪ್ಲೀಟ್ ಯೂತ್ ಓರಿಯೆಂಟೆಡ್ ಸಿನಿಮಾ ಆಗಿರುವ 'ಲವ್ ಯು ಆಲಿಯಾ' ಸಿನಿಮಾದಲ್ಲಿ ರವಿಚಂದ್ರನ್ ಕೈಲಿ ಮೊದಲ ಸಲ ಸ್ಟೆತೋಸ್ಕೋಪ್ ಹಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಇಂದ್ರಜಿತ್ ಲಂಕೇಶ್. ಸ್ತ್ರೀರೋಗತಜ್ಞನಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ತೆರೆಮೇಲೆ ಹೇಗೆ ಕಾಣಬಹುದು ಅನ್ನುವುದನ್ನ ಇಂದ್ರಜಿತ್ ಲಂಕೇಶ್ ರಿವೀಲ್ ಮಾಡಿದ್ದಾರೆ. [ಬಾಲಿವುಡ್ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ ಜಿಗಿತ]

  ಚಿತ್ರದ ಪ್ರಮುಖ ಸೀನ್ ನ ಶೂಟಿಂಗ್ ವೇಳೆ ಡಾಕ್ಟರ್ ರವಿಚಂದ್ರನ್ ಗೆಟಪ್ ನ ಕ್ಲಿಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ರವಿಚಂದ್ರನ್ ಪಕ್ಕದಲ್ಲೇ ಅದೇ ಗೆಟಪ್ ನಲ್ಲಿ ಇಂದ್ರಜಿತ್ ಲಂಕೇಶ್ ಕೂಡ ಇದ್ದಾರೆ. ಹಾಗಂತ ಇಬ್ಬರೂ ಒಟ್ಟಾಗಿ ಆಕ್ಟ್ ಮಾಡ್ತಿದ್ದಾರಾ ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಬೇಕು. [ಸೌಂದರ್ಯ ಕೊಲೆ ಕೇಸ್ ಭೇದಿಸಲಿರುವ ಕ್ರೇಜಿಸ್ಟಾರ್]

  'ಲವ್ ಯು ಆಲಿಯಾ' ಕಥೆ ಕೇಳಿ ತಮ್ಮ ಬಿಜಿ ಶೆಡ್ಯೂಲ್ ನಲ್ಲೂ ಕಾಲ್ ಶೀಟ್ ಕೊಟ್ಟಿರುವ ರವಿಚಂದ್ರನ್ ಬಿರುಸಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ರವಿಚಂದ್ರನ್ ಜೊತೆ ಬಹುಭಾಷಾ ತಾರೆ ಭೂಮಿಕಾ ಡಾನ್ಸರ್ ಪಾತ್ರವನ್ನ ನಿರ್ವಹಿಸಲಿದ್ದಾರೆ. ಇಲ್ಲಿಯವರೆಗೂ ಬರೀ ರಸಿಕರ ರಾಜನಾಗಿ ಮೆರೆಯುತ್ತಿದ್ದ ರವಿಚಂದ್ರನ್, ಲವ್ ಯು ಆಲಿಯಾ ಸಿನಿಮಾದಲ್ಲಿ ಸ್ತ್ರೀರೋಗತಜ್ಞರಾಗಿ ಹೇಗೆ ಕಮಾಲ್ ಮಾಡುತ್ತಾರೆ ಅನ್ನುವುದನ್ನ ನೋಡಬೇಕು. (ಫಿಲ್ಮಿಬೀಟ್ ಕನ್ನಡ)
  English summary
  Crazy Star Ravichandran for the first time playing the role of a gynecologist in the movie Love U Alia. The look of Dr.Ravichandran is out. Multi-lingual actress Bhumika Chawla is roped in to play opposite Ravichandran. Indrajith Lankesh is directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X