»   » ಸದ್ಯಕ್ಕಿಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಚಿತ್ರ

ಸದ್ಯಕ್ಕಿಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಚಿತ್ರ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಅಪೂರ್ವ'. ಸದ್ಯಕ್ಕೆ ಈ ಚಿತ್ರಕ್ಕೆ ರೀ ರೆಕಾರ್ಡಿಂಗ್ ಕೆಲಸ ಭರದಿಂದ ಸಾಗುತ್ತಿದೆ. ಸ್ವತಃ ರವಿಚಂದ್ರನ್ ಅವರೇ ಎಫೆಕ್ಟ್ಸ್ ಕೊಡಲು ಕೂತಿದ್ದು ತಮಗೆ ಸಂಪೂರ್ಣ ತೃಪ್ತಿಯಾದ ಮೇಲಷ್ಟೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುತ್ತೇನೆ ಎಂದಿದ್ದಾರೆ.

'ವಾಸ್ಕೋಡಗಾಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರವಿಚಂದ್ರನ್, 'ಅಪೂರ್ವ' ಚಿತ್ರದ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಏಪ್ರಿಲ್ ತಿಂಗಳಲ್ಲೇ ಅಪೂರ್ವ ಚಿತ್ರ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. [ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]


Apoorva movie still

ಆದರೆ ರವಿಚಂದ್ರನ್ ಅವರು ಆ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಚಿತ್ರದ ಕೆಲಸಗಳು ಇನ್ನೂ ಸಾಕಷ್ಟು ಬಾಕಿ ಉಳಿದಿವೆ. ಬಿಡುಗಡೆ ದಿನಾಂಕವನ್ನು ಸಾಕಷ್ಟು ಮುಂಚಿತಾಗಿಯೇ ಹೇಳಿ ಪ್ರೇಕ್ಷಕರನ್ನು ಕಾಯಿಸುವುದು ನನಗಿಷ್ಟವಿಲ್ಲ. ತಮಗೆ ಸಂಪೂರ್ಣ ತೃಪ್ತಿಯಾದ ನಂತರವಷ್ಟೆ ಚಿತ್ರ ಬಿಡುಗಡೆ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ.

ಅಪೂರ್ವ ಬಗ್ಗೆ ರವಿಚಂದ್ರನ್ ಈ ರೀತಿ ಹೇಳಿರುವುದು ಅಭಿಮಾನಿಗಳು ಮತ್ತಷ್ಟು ನಿರೀಕ್ಷಿಸುವಂತೆ ಮಾಡಿದೆ. ಈ ಚಿತ್ರದ ಪ್ರತಿ ಸನ್ನಿವೇಶ, ದೃಶ್ಯಗಳು ಹೇಗಿರಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾನೇ ರೀ ರೆಕಾರ್ಡಿಂಗ್ ಮಾಡುತ್ತಿದ್ದೇನೆ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ತಡವಾಗಬಹುದು ಎನ್ನುತ್ತಾರೆ.


ಒಂದು ವೇಳೆ ನನ್ನ ಹುಟ್ಟುಹಬ್ಬಕ್ಕೆ (ಮೇ.30) ಬಿಡುಗಡೆಯಾಗಬಹುದು ಅಥವಾ ಆ ನಂತರವಾದರೂ ಬಿಡುಗಡೆಯಾಗಬಹುದು. ಈಗಲೇ ಹೇಳಲು ಸಾಧ್ಯವಿಲ್ಲ ಎಂಬುದು ರವಿಚಂದ್ರನ್ ಅವರ ಮಾತು. ಚಿತ್ರದಲ್ಲಿನ ರವಿಚಂದ್ರನ್ ಗೆಟಪ್, ಕಥೆ ಅಪೂರ್ವ ಚಿತ್ರದ ಪ್ರಮುಖ ಆಕರ್ಷಣೆ.


ಎರಡು ಪಾತ್ರಗಳ ಸುತ್ತುವ ಕಥೆ ಇದಾಗಿದೆ. ಎಪ್ಪತ್ತರ ಆಸುಪಾಸಿನ ನಾಯಕ ಹಾಗೂ ಹತ್ತೊಂಬತ್ತರ ಹರೆಯದ ಯುವತಿ ನಡುವೆ ಲಿಫ್ಟ್ ಒಂದರಲ್ಲಿ ನಡೆಯುವ ಸನ್ನಿವೇಶಗಳೇ ಚಿತ್ರದ ಕಥಾವಸ್ತು. (ಏಜೆನ್ಸೀಸ್)

English summary
Crazy Star Ravichandran's much expected movie 'Apoorva' release date delayed. Ravichandran himself has said that he won’t release the film, until he is fully satisfied.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada