For Quick Alerts
  ALLOW NOTIFICATIONS  
  For Daily Alerts

  ಕೊಡಗು ವೆದರ್ ಕೂಲ್, ಹುಡುಗಿಯರು ಹಾಟ್: ವಿ. ರವಿಚಂದ್ರನ್

  |

  ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರೋ 'ರವಿ ಬೋಪಣ್ಣ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಆಂಕರ್ ಅನುಶ್ರೀ ಯೂಟ್ಯೂಬ್‌ ಚಾನಲ್‌ ಸಂದರ್ಶನದಲ್ಲಿ ಕ್ರೇಜಿಸ್ಟಾರ್ ಭಾಗಿಯಾಗಿದ್ದಾರೆ. ಆ ಸಂದರ್ಶನದ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ.

  ಬಿದ್ದಾಗಲೆಲ್ಲಾ ಮತ್ತೆ ಎದ್ದು ಬಂದವರು ಡಾ. ವಿ. ರವಿಚಂದ್ರನ್. ಸದಾ ಸಿನಿಮಾ ಧ್ಯಾನ ಮಾಡುವ ಕ್ರೇಜಿಸ್ಟಾರ್ ತಮಗೆ ತೃಪ್ತಿಯಾಗುವವರೆಗೂ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವುದಿಲ್ಲ. ಎಷ್ಟೇ ವರ್ಷಗಳಾದರೂ ತಾವು ಅಂದುಕೊಂಡ ರೀತಿಯಲ್ಲೇ ಸಿನಿಮಾ ಮೂಡಿ ಬರಬೇಕು ಅನ್ನುವ ಹಠವಾದಿ. ರಿಮೇಕ್‌ ಸಿನಿಮಾಗಳನ್ನು ಹೊಸ ರೀತಿಯಲ್ಲಿ ಹೇಳಿ ರವಿಮಾಮ ಗೆಲ್ಲುತ್ತಾರೆ.

  ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!

  ಟೈಟಲ್‌ನಿಂದಲೇ ಭಾರೀ ಕುತೂಹಲ ಕೆರಳಿಸಿದ್ದ ಸಸ್ಪೆನ್ಸ್ ಥ್ರಿಲ್ಲರ್ 'ರವಿ ಬೋಪಣ್ಣ' ಸಿನಿಮಾ ಈ ವಾರ ರಿಲೀಸ್ ಆಗಿದೆ. ಈಶ್ವರಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ 50ನೇ ಸಿನಿಮಾ ಇದು. ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಹಾಗೂ ರಾಧಿಕಾ ಕುಮಾರಸ್ವಾಮಿ ನಾಯಕಿಯರಾಗಿ ಮಿಂಚಿದ್ದಾರೆ. ನೇರಾನೇರ ಮಾತನಾಡುವ ವ್ಯಕ್ತಿ ರವಿಚಂದ್ರನ್. ತಮಾಷೆ, ಜೀವನದ ಸತ್ಯ ಎಲ್ಲವೂ ಅವರ ಮಾತುಗಳಲ್ಲಿ ಇರುತ್ತದೆ. ಕ್ರೇಜಿಸ್ಟಾರ್ ಸಂದರ್ಶನ ಅಂದರೂ ಅಷ್ಟೇ ಮಜವಾಗಿರುತ್ತದೆ. ಆಂಕರ್ ಅನುಶ್ರೀ ಸಂದರ್ಶನಗಳು ಸಿಕ್ಕಾಪಟ್ಟೆ ಲೈವ್ಲಿ ಆಗಿ ಇರುತ್ತದೆ. ಆ ಶೋಗೆ 'ರವಿ ಬೋಪಣ್ಣ' ಬಂದರೆ ಹೇಗಿರುತ್ತದೆ ಅನ್ನುವುದರ ಸಣ್ಣ ಝಲಕ್ ರಿಲೀಸ್ ಆಗಿದೆ.

  ಕೊಡಗು ಹುಡ್ಗೀರು ಹಾಟ್ ಎಂದು ಕ್ರೇಜಿ

  ಆಂಕರ್ ಅನುಶ್ರೀ ಯೂಟ್ಯೂಬ್‌ ಸಂದರ್ಶನದಲ್ಲಿ ಕ್ರೇಜಿಸ್ಟಾರ್ ಜೊತೆ 'ರವಿ ಬೋಪಣ್ಣ' ಚಿತ್ರದ ನಾಯಕಿ ಕಾವ್ಯಾ ಶೆಟ್ಟಿ ಕೂಡ ಭಾಗಿಯಾಗಿದ್ದರು. ತಮಾಷೆ ಮಾಡುತ್ತಾ ಮಾತಿನಲ್ಲೇ ಕಾವ್ಯಾ ಕಾಲು ಎಳೆಯುತ್ತಾ ಕಿಚಾಯಿಸುತ್ತಾ ಕ್ರೇಜಿಸ್ಟಾರ್- ಅನುಶ್ರೀ ಸಖತ್ ಎಂಜಾಯ್ ಮಾಡಿದ್ದಾರೆ. 'ಕ್ರೇಜಿಸ್ಟಾರ್‌ಗೂ ಕೊಡಗಿಗೂ ಏನ್ ಸಾರ್ ನಂಟು' ಎನ್ನುವ ಪ್ರಶ್ನೆಗೆ 'ಕೊಡಗು ವೆದರ್ ಕೂಲ್, ಹುಡ್ಗೀರು ಹಾಟ್ ಆಗಿ ಇರ್ತಾರೆ' ಎಂದು ಕ್ರೇಜಿಸ್ಟಾರ್ ನಕ್ಕಿದ್ದಾರೆ.

   ಕ್ರೇಜಿಸ್ಟಾರ್‌ನ ನೋಡಿ ಹೆಣ್ಮಕ್ಕಳು ಏನಂತಾರೆ?

  ಕ್ರೇಜಿಸ್ಟಾರ್‌ನ ನೋಡಿ ಹೆಣ್ಮಕ್ಕಳು ಏನಂತಾರೆ?

  ಕನಸುಗಾರ ವಿ. ರವಿಚಂದ್ರನ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿರೋದೇ ಹೆಚ್ಚು. ಸಿನಿಮಾಗಳಲ್ಲಿ ನಾಯಕಿಯರನ್ನು ಸುಂದರವಾಗಿ ತೋರಿಸುವ ಕಲೆ ಕ್ರೇಜಿಸ್ಟಾರ್‌ಗೆ ಕರಗತವಾಗಿದೆ. ಕ್ರೇಜಿಸ್ಟಾರ್‌ ಲೇಡಿ ಫ್ಯಾನ್ಸ್ ಜಾಸ್ತಿ ಇದ್ದಾರೆ. "ಇವತ್ತೂ ನಾನು ಎಲ್ಲೆ ಹೋದರೂ ಹೆಣ್ಮಕ್ಕಳು ನನ್ನ ಇಷ್ಟಪಡುವುದು, ನನ್ನ ಗಂಡ ಹಿಂಗಿಲ್ಲವಲ್ಲ ಸಾರ್, ನನ್ನ ಗಂಡ ಹಿಂಗೆ ಇರಬೇಕು ಅಂತ ಆಸೆ ಪಡುತ್ತಾರೆ" ಎಂದಿದ್ದಾರೆ.

   ರವಿಮಾಮನ ಆ ಮಾತಿಗೆ ಮರುಳಾದ ಅನುಶ್ರೀ

  ರವಿಮಾಮನ ಆ ಮಾತಿಗೆ ಮರುಳಾದ ಅನುಶ್ರೀ

  ಹುಡುಗಿಯರು ಹೇಗಿದ್ದರೆ ಚಂದ ಎನ್ನುವುದನ್ನು ಕ್ರೇಜಿಸ್ಟಾರ್ ನೋಡಿದ ಕೂಡಲೇ ಹೇಳಿಬಿಡುತ್ತಾರೆ. ಸಂದರ್ಶನದ ನಡುವೆ ಅನುಶ್ರೀನ ನೋಡಿ ಹಣೆ ಮೇಲೆ ಇಳಿಬಿದ್ದಿರೋ ಕೂದಲೇ ನಿನಗೆ ಚೆನ್ನಾಗಿ ಕಾಣಿಸೋದು ಎಂದಿದ್ದಾರೆ. ಈ ಕಾಂಪ್ಲಿಮೆಂಟ್ ಹೇಳಿ ಅನುಶ್ರೀ ಚೋರಿಯಾಗಿದೆ ನನ್ನ ದಿಲ್ ಎಂದು ಹಾಡು ಹಾಡಿದ್ದಾರೆ. ಶೀಘ್ರದಲ್ಲೇ ಕಂಪ್ಲೀಟ್ ಸಂದರ್ಶನ ಅಪ್‌ಲೋಡ್ ಆಗಲಿದೆ.

   'ಲೇ ಲೇ ಬೋಪಣ್ಣ' ಸಾಂಗ್

  'ಲೇ ಲೇ ಬೋಪಣ್ಣ' ಸಾಂಗ್

  ಇತ್ತೀಚೆಗೆ 'ರವಿ ಬೋಪಣ್ಣ' ಚಿತ್ರದ 7 ನಿಮಿಷಗಳ ಸುದೀರ್ಘ ಟ್ರೈಲರ್ ರಿಲೀಸ್ ಮಾಡಿ ರವಿಮಾಮ ಗಮನ ಸೆಳೆದಿದ್ದರು. ಇದೀಗ 'ಲೇ ಲೇ ಬೋಪಣ್ಣ' ಅನ್ನುವ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಸ್ವತಃ ರವಿಚಂದ್ರನ್ ಮ್ಯೂಸಿಕ್ ಮಾಡಿ ಸಾಹಿತ್ಯ ಬರೆದು 'ಲೇ ಲೇ ಬೋಪಣ್ಣ' ಎಂದು ಹಾಡಿದ್ದಾರೆ. ಕ್ರೇಜಿಸ್ಟಾರ್ ಧ್ವನಿಯಲ್ಲಿ ಸಾಂಗ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

   'ರವಿ ಬೋಪಣ್ಣ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ

  'ರವಿ ಬೋಪಣ್ಣ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ

  ನಿನ್ನೆ(ಆಗಸ್ಟ್ 12) ಬಿಡುಗಡೆಯಾಗಿರುವ 'ರವಿ ಬೋಪಣ್ಣ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಾ ಬಂದಿತ್ತು. ಚಿತ್ರದ ಬಗ್ಗೆ ಒಳ್ಳೆ ಪ್ರಮೋಷನ್ ಕೂಡ ಮಾಡಲಿಲ್ಲ. 'ರವಿ ಬೋಪಣ್ಣ' ಜೊತೆ 'ಗಾಳಿಪಟ-2' ಸಿನಿಮಾ ಕೂಡ ಬಿಡುಗಡೆಯಾಗಿದೆ. ಭಟ್ರು ಹಾಗೂ ಗಣಿ ಮ್ಯಾಜಿಕ್‌ಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಆದರೆ ಕ್ರೇಜಿಸ್ಟಾರ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ಯಶಸ್ಸು ಗಳಿಸಿಲ್ಲ.

  English summary
  Crazy Star V Ravichandran Latest Interview Promo Goes Viral On Social Media.
  Saturday, August 13, 2022, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X