»   » ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಮ್ಯಾ ಅಭಿಮಾನಿಗಳು!

ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಮ್ಯಾ ಅಭಿಮಾನಿಗಳು!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬಕ್ಕೆ ಇನ್ನರಡೇ ದಿನಗಳು ಬಾಕಿ. ಹುಟ್ಟುಹಬ್ಬದ ಸಂಭ್ರಮದಲ್ಲಿ ಫಾರಿನ್ ನಿಂದ ರಮ್ಯಾ ಮೇಡಂ ಭಾರತಕ್ಕೆ ಬರ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಲಕ್ಕಿ ಸ್ಟಾರ್ ಅಭಿಮಾನಿಗಳು ಮಾತ್ರ ಬ್ಯಾಟ್ ಹಿಡಿದು ಮೈದಾನಕ್ಕಿಳಿಯೋಕೆ ಸಜ್ಜಾಗಿದ್ದಾರೆ. ಅರ್ಥಾತ್ ಕ್ರಿಕೆಟ್ ಆಡುವ ತಯಾರಿ ನಡೆಸುತ್ತಿದ್ದಾರೆ.

ರಮ್ಯಾ ಬರ್ತಡೇಗೂ, ಅವರ ಅಭಿಮಾನಿಗಳು ಕ್ರಿಕೆಟ್ ಆಡೋಕೂ ಎಲ್ಲಿಗೆಲ್ಲಿಯ ಸಂಬಂಧ ಅಂದ್ರಾ? ರಮ್ಯಾ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸುತ್ತಿರುವ ರೀತಿ ಇದು. ಎಷ್ಟೇ ಆಗ್ಲಿ ರಮ್ಯಾ ಅಭಿಮಾನಿಗಳು ಎಲ್ಲರಿಗಿಂತ ಸ್ವಲ್ಪ ಡಿಫರೆಂಟು.

Cricket Tournament on ramya aka divya spandana's 32nd birthday

ಮಾಮೂಲಾಗಿ ಸ್ಟಾರ್ ಗಳ ಹುಟ್ಟುಹಬ್ಬವನ್ನ ಬರೀ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಆಚರಿಸುವ ರೀತಿ ರಮ್ಯಾ ಫ್ಯಾನ್ಸ್ ಮಾಡ್ತಿಲ್ಲ. ಈಗಾಗಲೇ ರಮ್ಯಾ ಹುಟ್ಟುಹಬ್ಬಕ್ಕೆ 'ರಸಪ್ರಶ್ನೆ ಸ್ಪರ್ಧೆ' ನಡೆದಿರುವುದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ಇದೀಗ ಕ್ರಿಕೆಟ್ ಸರದಿ ಅಷ್ಟೆ. [ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ]

ರಮ್ಯಾ ಹುಟ್ಟುಹಬ್ಬದ ಪ್ರಯುಕ್ತ, ಅವರ ಅಭಿಮಾನಿಗಳ ಸಂಘ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಅದು ಕೇವಲ ಸೆಲೆಬ್ರೇಷನ್ ಗಾಗಿ ಅಲ್ಲ. ಅನಾಥ ಮಕ್ಕಳ ಸಹಾಯಕ್ಕಾಗಿ. ಇದೇ ತಿಂಗಳ 29ರಂದು ಅಂದ್ರೆ ರಮ್ಯಾ ಹುಟ್ಟುಹಬ್ಬದಂದು ವಿದ್ಯಾರಣ್ಯಪುರದ ಎನ್.ಟಿ.ಐ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಮತ್ತು ಅಂಗದಾನ ಶಿಬಿರ ನಡೆಯಲಿದೆ. [ಎಕ್ಸ್ ಕ್ಯೂಸ್ ಮೀ ಇದು ರಮ್ಯಾ ಅಭಿಮಾನಿಗಳಿಗೆ ಮಾತ್ರ]

ಸರ್ವರಿಗೂ ಸ್ವಾಗತವಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಗ್ರಹಿಸಲಾಗುವ ಹಣವನ್ನು ಅನಾಥಾಶ್ರಮಕ್ಕೆ ನೀಡಲಾಗುವುದು. ಆ ಮೂಲಕ ರಮ್ಯಾ ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸೋಕೆ ರಮ್ಯಾ ಫ್ಯಾನ್ ಕ್ಲಬ್ ಸಿದ್ಧವಾಗಿದೆ. [ಫಾರಿನ್ ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?]

ಸ್ಟಾರ್ ಗಳ ಹುಟ್ಟುಹಬ್ಬವನ್ನು ಅಬ್ಬರದಿಂದ ಆಚರಿಸುವ ಅಭಿಮಾನಿಗಳಿರುವಾಗ, ರಮ್ಯಾ ಅಭಿಮಾನಿಗಳು ಉತ್ತಮ ಆಶಯದೊಂದಿಗೆ ಬರ್ತಡೆ ಸೆಲೆಬ್ರೇಟ್ ಮಾಡುತ್ತಿರುವುದು ಮೆಚ್ಚುವಂತಹ ಕೆಲಸ. ಎಷ್ಟೇ ಆಗ್ಲಿ ರಮ್ಯಾ ಕೂಡ ಮಾನವಹಿತಕಾರಿ ಕೆಲಸಗಳಲ್ಲಿ ಹೆಸರುವಾಸಿ ಅಲ್ಲವೇ! (ಫಿಲ್ಮಿಬೀಟ್ ಕನ್ನಡ)

English summary
Sandalwood Queen Ramya aka Divya Spandana fans are all set to celebrate Ramya's birthday in unique style. Ramya's fan club has organised a Cricket Tournament on behalf of the actress's 32nd birthday. Venue: Vidyaranyapura, NTI Ground, Date:29/11/2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada