»   » ಕ್ರಿಕೆಟ್‌ ವರ್ಲ್ಡ್‌ ಕಪ್‌ಗೆ ಸ್ಯಾಂಡಲ್‌ವುಡ್‌ ಹೋಗಿದ್ದಿದ್ದರೆ...

ಕ್ರಿಕೆಟ್‌ ವರ್ಲ್ಡ್‌ ಕಪ್‌ಗೆ ಸ್ಯಾಂಡಲ್‌ವುಡ್‌ ಹೋಗಿದ್ದಿದ್ದರೆ...

Posted By: Staff
Subscribe to Filmibeat Kannada

ಡಾ.ರಾಜ್‌ : ನಮ್ಮ ಅಪ್ಪಾಜಿ ಕಾಲದಲ್ಲಿ ನಮಗೆ ಈ ಚೆಂಡು ಆ ದಾಂಡು ಆಟ ಏನು ಹೇಳಿ ಕೊಡಲಿಲ್ಲ . ಆದ್ರೂ ಮರಕೋತಿ, ಗಿಲ್ಲಿ ದಾಂಡು ಆಡ್ತಾ ಇದ್ವಿ. ಆ ದೊಡ್ಡ ಮನುಷ್ಯ ಬಿಳಿ ಶರ್ಟು, ಕರಿ ಕೋಟು ಹಾಕ್ಕೊಂಡು ನಮಗೆಲ್ಲ ಮೋಸ ಮಾಡಿಬಿಟ್ಟ . ನಮ್ಮ openers ಅಂಬಿ ಮತ್ತು ವಿಷ್ಣು ಇಬ್ಬರಿಗೂ ಕಾಲಿಗೆ ಚೆಂಡು ತಾಕದೇ ಇದ್ರೂ L.B.W. out ಕೊಟ್ಟು ಬಿಟ್ಟ. ನನಗೆ ಕನ್ನಡ ಬಾವುಟ ತೋರಿಸಿ ಮರುಳು ಮಾಡಿಬಿಟ್ಟ . ಬರೋ ಸಲ ನಮ್ಮ ವಾಟಾಳ್‌ನಾಗರಾಜ್‌ನ ಟೀಮ್‌ಗೆ ಸೇರಿಸಿಕೊಂಡ್ರೆ ಒಳ್ಳೇದು. ಬಾವುಟಕ್ಕೆಲ್ಲ ವಾಟಾಳ್‌ ಜಗ್ಗಲ್ಲ . ಹೆಂಗಾದ್ರು ಹೊಡೆದಾಟ ಮಾಡೆ ಮಾಡ್ತಾನೆ.

ದಿ. ಪುಟ್ಟಣ್ಣ ಕಣಗಾಲ್‌: ನಾನು ಮೊದಲೆ ಹೇಳಿದ್ದೆ , ಸೆಟ್‌ನಲ್ಲಿ ಅಭ್ಯಾಸ ಮಾಡೋದು ಬೇಡ ಅಂತ.. ಒಳ್ಳೆ ಸ್ಕಿೃಪ್ಟ್‌ ಇದ್ದರೆ ಯಾಕೆ ಸ್ಕೋರ್‌ ಮೂವ್‌ ಆಗಲ್ಲ ಅಂತೀನಿ... ಅಂಥ ಕಲ್ಪನ, ಆರತಿ ಜೊತೆ ಆಡಿದಾಗಲೆ ನನಗೆ ಇಂಥ ಅವಮಾನ ಆಗಿರ್ಲಿಲ್ಲ... ನಮ್ಮ ಆಟಗಾರರು, ಕುಣಿಲಾರದ ಸೂಳೆ ಪಿಚ್‌ ಡೊಂಕು ಅಂದಂಗೆ ಆಡಿದ್ರು... ಬರೀ ರಿಮೇಕ್‌ ಆಟ ಆಡಿದ್ರೆ ಯಾವ ಬೌಲರ್‌ ಬೇಕಾದ್ರೂ ನಮ್ಮ ಹುಡುಗರನ್ನ ಔಟ್‌ ಮಾಡಬಹುದು.

ರೆಬೆಲ್‌ ಸ್ಟಾರ್‌ ಅಂಬರೀಷ್‌: ಜನ ಚೇಂಜ್‌ ಕೇಳ್ತಾರೆ. ಹಾ... ಇಂಗ್ಲೆಂಡ್‌ ಆಗಿದ್ದಕ್ಕೆ ಬಿಟ್ಟಿದೀನಿ. ನಮ್ಮ ಮಂಡ್ಯ ಮದ್ದೂರು ಅಂತ ಆಗಿದ್ದರೆ ನಮ್ಮ ಒಕ್ಕಲಿಗರೆಲ್ಲ ಸೇರ್ಕೊಂಡು ಒಂದು ದಾರಿ ಮಾಡ್ತಾ ಇದ್ವಿ. ಬರೋ ವರ್ಲ್ಡ್‌ ಕಪ್‌ನಲ್ಲಿ ದಪ್ಪಗಾಗ ಬೇಕಾ, ದಪ್ಪಗಾಗ್ತೀನಿ... ಸಣ್ಣಗಾಗಬೇಕಾ ಸಣ್ಣಗಾಗ್ತೀನಿ... ಆಗ ಈ ಕಂತ್ರಿ ಬೌಲರ್‌ಗಳ್ನ ಹುಚ್ಚು ನಾಯಿನ ಅಟ್ಟಿಸ್ಕೊಂಡು ಹೊಡೆದಂಗೆ ಹೊಡಿತೀನಿ.

ತ್ಯಾಗರಾಜ ರಮೇಶ್‌ : ಅಲ್ಲ ನಾನು ಎಷ್ಟು ಆಟದಲ್ಲಿ ನನ್ನ ವಿಕೆಟ್‌ ಸಾಕ್ರಿಫೈಸ್‌ ಮಾಡಲಿ . ಅದಕ್ಕೆ ಫೈನಲ್ಸ್‌ನಲ್ಲಿ ಎಲ್ಲ 50 ಓವರ್‌ ಚೆಂಡನ್ನ ನೋಡ್ತಾನೆ ಇದ್ದೆ... ಇನ್ನೇನು ಚೆಂಡನ್ನ ಹೊಡೆಯೋಣ ಅನ್ನೋ ಅಷ್ಟರಲ್ಲಿ ಕೊನೆ ಓವರ್‌ ಆಗೆ ಹೋಗಿತ್ತು... ಮುಂದಿನ ಮ್ಯಾಚ್‌ನಲ್ಲಿ ಬೌಲರನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳೇ ಬಿಡ್ತೀನಿ- ನನ್ನ ನೀನು ಇಷ್ಟ ಪಡ್ತೀಯಾ ಅಂತ.

ದಿ। ಕಲ್ಪನಾ : ಮೇಲೆ ಬಿದ್ದ ಬಾಲು ಮೂರು ರನ್ನಿಗೂ ಪ್ರಯೋಜನ ಇಲ್ಲ ಅಲ್ವಾ.. ನನಗೆ ಒಂದು ಅವಕಾಶ ಕೊಡಬೇಕಿತ್ತು... ರೀ ವಿಶಾಲಕ್ಷಮ್ಮ ನಾನು ನನ್ನ ವಿಕೇಟ್‌ ನಾ ಇಲ್ಲೆ ಕಳೆದ್‌ ಕೊಂಡಿದ್ದು.

ವಿಷ್ಣುವರ್ಧನ್‌: ಡ್ರಿಂಕ್ಸ್‌ ಇಂಟರ್‌ವೆಲ್‌ನಲ್ಲಿ ' ಮೂರು ರನ್ನು ಹೊಡೆಯೋಕೆ, ಬೊಗಸೆ ತುಂಬ ಕ್ಯಾಚು ಹಿಡಿಯೋಕೆ, ಸ್ವರ್ಗದಂತ ಪೆವಿಲಿಯನ್‌ ನನ್ನ ಹತ್ತಿರ ಕರೆದಂತಾಯಿತು" ಅಂತ ಹಾಡ್ಕೋತ ಇದ್ದೆ. ನೆಕ್ಸ್ಟ್‌ ಬಾಲು ಬೌನ್ಸರ್‌ ಹಾಕಿ ನನ್ನ ಸಂಜಯ ಗಾಂಧಿ ಆಸ್ಪತ್ರೆಗೆ ಕಳಿಸಿ ಬಿಟ್ಟರು. ನಾನೆ ಬೇರೆ... ನನ್ನ ಔಟ್‌ ಮಾಡಿದ ಬಾಲೆ ಬೇರೆ.. ನನ್ನ ಸಮ ಯಾರಿಲ್ಲ.... ನನಗೆ ಯಾರ ಹಂಗಿಲ್ಲ.... ನನ್ನ ಬೌಲಿಂಗ್‌ನಲ್ಲಿ ಸ್ವಿಂಗ್‌ ಇಲ್ಲ...

ಶಿವರಾಜ್‌ ಕುಮಾರ್‌: ನಾನು ಹ್ಯಾಟ್ರಿಕ್‌ ತಗೊಂಡಿದ್ದಕ್ಕೆ ಇಂಡಿಯಾ ಸೋತಿದ್ದು... ಹೆಂಗೆ ಅಂತೀರಾ ಕೊನೆ ಮೂರು ಮ್ಯಾಚ್‌ನಲ್ಲು 0 ರನ್ನಿಗೆ ನಾನು ಔಟ್‌.

ರವಿಚಂದ್ರನ್‌: ನಾನು ಸ್ಟೇಡಿಯಂ ವಿಕೆಟ್‌ ಎಲ್ಲ ಸೆಟ್‌ ಹಾಕಿದ್ದಾರೆ ಅಂತ ಅಂದ್ಕೊಂಡಿದ್ದೆ... ಅಲ್ಲಿ ಹೋದ ಮೇಲೆ ತಿಳಿತು ಎಲ್ಲ ರಿಯಲ್‌ ಅಂತ... ಏನ್‌ ಮಾಡಲಿ, ನನಗೆ ಯಾವಾಗಲೂ ಬೇರೆ ಪ್ಲೇಯರ್ಸ್‌ ಆಟ ಕಾಪಿ ಮಾಡಿ ಆಡಕ್ಕೆ ಮಾತ್ರ ಬರತ್ತೆ. ನನಗೆ ಸ್ವಂತವಾಗಿ ಬ್ಯಾಟ್‌ ಹಿಡಿಯಕ್ಕೆ ಬರಲ್ಲ.

ಉಪೇಂದ್ರ: ನಾನ್‌ ಕಚಡ ಬ್ಯಾಟ್ಸ್‌ಮನ್‌. ಆದರೆ, ನಮ್ಮ ಟೀಂನಲ್ಲಿರೋ ಎಲ್ಲಾರೂ ನನಗಿಂತ ಕಚಡ...ನಾನು ಮೊದಲನೆ ಬಾಲಿಗೆ ಔಟ್‌ ಆಗ್ತೀನಿ. ಅವರೆಲ್ಲಾ 100 ನೇ ಬಾಲಿಗೆ ಔಟ್‌ ಆಗ್ತಾರೆ ಅಷ್ಟೆ... ಆದರೆ ಸ್ಕೋರ್‌ ಮಾಡೋದು ಮಾತ್ರ ಸೊನ್ನೇನೆ. ಡ್ರೆಸಿಂಗ್‌ ರೂಮಲ್ಲಿರೋ ಗೋಡೆಗಳಿಗೆ ನೋಡೋ ಕಣ್ಣಿದ್ದು ಮಾತಾಡೋ ಬಾಯಿದ್ದಿದ್ದರೆ ನಮ್ಮ ಟೀಂನಲ್ಲಿ ಆಗೋ ಮ್ಯಾಚ್‌ ಫಿಕ್ಸಿಂಗ್‌ ಯಾವತ್ತೋ ಬಯಲಾಗಿ ಆ ಹಣದಲ್ಲಿ ಇಷ್ಟೊತ್ತಿಗೆ IMF loanತೀರಿಸಬಹುದಿತ್ತು.

ಜೆ.ಎಚ್‌. ಪಟೇಲ್‌: ನನಗೆ ಶಾರ್ಟ್‌ ಲೆಗ್‌ ಲಾಂಗ್‌ ಲೆಗ್‌ ಅಂದ್ರೆ ವೀಕ್‌ನೆಸ್‌... I am anserable to Indian Cricket Board. ನೈಟ್‌ ಮ್ಯಾಚ್‌ ಆಗಿದ್ದರಿಂದ ನನ್ನ ಕಾನ್ಸಂಟ್ರೇಷನ್‌ ಎಲ್ಲ ಸಂಜೆ ಆರು ಗಂಟೆ ಆದ ಮೇಲೆ ಜೆ.ಪಿ. ನಗರದ ಕಡೇನೆ ಇತ್ತು. ಅಲ್ಲಿ ಕತ್ತಲ ಮನೆ ನೆನೆಪಲ್ಲೆ ನನ್ನ ವಿಕೇಟು ಕಳೆದುಕೊಂಡು ಬಿಟ್ಟೆ.

ಬಂಗಾರಪ್ಪ : ನಾನು ಬೌಲರ್‌ ಕಡೆ ನೋಡೋ ಬದಲು ಶಾರ್ಟ್‌ ಲೆಗ್‌ ಅಂಪೈರ್‌ನ ನೋಡ್ತಾ ಇದ್ದಾಗ, ಹೆಗ್ಗಡೆ ಹೆಲ್ಮಟ್‌ನಲ್ಲಿ ನನ್ನ ವಿಕೆಟ್‌ ಬೋಲ್ಡ್‌ ಮಾಡಿ ಬಿಟ್ರು. ಬರೋ ಚುನಾವಣೆಲಿ ನಮ್ಮ ಸಿದ್ದು (ಸಿದ್ದುನ್ಯಾಮಗೌಡ) ಕೈಯಲ್ಲಿ ಬೌನ್ಸರ್‌ ಹಾಕಿಸಿ ಅವರನ್ನ ಪೊಲಿಟಿಕಲಿ ಫಿನಿಶ್‌ ಮಾಡಿಸ್ತೀನಿ.

ದೇವೇಗೌಡ: ನಾನು ಬ್ಯಾಟ್‌ ಮಾಡೋಕೆ ಹೋದಾಗ ಮಧ್ಯಾಹ್ನ 1 ಗಂಟೆ. ಬ್ಯಾಟ್‌ ಹಿಡ್ಕೊಂಡು ನಿದ್ದೆ ಮಾಡಿಬಿಟ್ಟೆ. ಎದ್ದಾಗ ನೋಡಿದ್ರೆ ಸ್ಟೇಡಿಯಂ ಕಲಾಪಗಳೆಲ್ಲ ಮುಗಿದು ಜನ ಎದ್ದು ಹೋಗಿದ್ದರು. ಮನೆಗೆ ಬಂದು ಟಿ.ವಿ ನೋಡಿದಾಗ ತಿಳೀತು, ನಿದ್ದೆ ಮಂಪರಿನಲ್ಲಿ ಅಂಪೈರ್‌ ನೋಬಾಲ್‌ಗೆ ಕೈ ತೋರಿಸಿದ್ದು ನೋಡಿ ನಾನು ಲೆಗ್‌ಅಂಪೈರ್‌ ಹತ್ರ ಹೋಗಿ ಮಲಕ್ಕೊಂಡು ಬಿಟ್ಟಿದ್ದೆ.

ಕನ್ನಡದ Eddie Murphyಜಗ್ಗೇಶ್‌ : ಅವ್‌.. ನಾನು ಬ್ಯಾಟಿಂಗ್‌ ಮಾಡೋವಾಗ ಇಂಗ್ಲೇಂಡ್‌ ಕ್ಯಾಪ್ಟನ್‌ ಅವನ ಡವ್‌ ಫೋಟೋ ತೋರಿಸಿ, ನನ್ನ ಕಣ್ಣಿಗೆ ಟಾರ್ಚ್‌ ಲೈಟ್‌ ಹೊಡೆದು ಬಿಟ್ಟ. ನನ್ನ ಕಣ್ಣು ಸ್ವಲ್ಪ ಡಿಮ್‌ ಅಂಡ್‌ ಡಿಪ್‌ ಆಗೋಯ್ತು. ಆದ್ರೂ ಬ್ಯಾಟ್‌ ಹಿಡಿದುಕೊಂಡೆ ಬಾಲ್‌ಗೆ ಕಾಯ್ತಿದ್ದೆ. silly point ಫೀಲ್ಡರ್‌ ಹತ್ತು ರೂಪಾಯಿ ನೋಟು ವಿಕೇಟ್‌ ಮುಂದೆ ಹಾಕಿ ನನಗೆ ಚಮಕಾಯಿಸ್ದ. ಅವನಿಗೆ ತಿಳೀದೆ ನೋಟ್‌ನ ಕಮಾಯಿಸಿ ಬಿಡೋಣ ಅಂತ ಸ್ವಲ್ಪ ಮುಂದಕ್ಕೆ ಬಂದು ಬಗ್ಗಿದಾಗ ನನ್ನ ಸ್ಟಂಪ್‌ ಔಟ್‌ ಮಾಡಿಬಿಟ್ಟ , ವಿಕೇಟ್‌ ಹಿಂದೆ ಬಕೇಟ್‌ ಹಿಡಿದುಕೊಂಡು ಬೆಳಗ್ಗೆ ನಂಬರ್‌ ಟೂಗೆ ಕುಂತಂಗೆ ಕೂತಿದ್ದ ಆ ಚಪ್ಪರ ನನ್ನ ಮಗ. ನೆಕ್ಸ್ಟ್‌ ಮ್ಯಾಚ್‌ನಲ್ಲಿ ಎಲ್ಲಾರಿಗು ಡ್ರಿಂಕ್ಸ್‌ ಇಂಟರ್‌ವೆಲ್‌ನಲ್ಲಿ ಡ್ರಿಂಕ್ಸ್‌ ಜೊತೆ ಜಾಪಾಳ್‌ ಮಾತ್ರೆ ಕಲೆಸಿ ಕುಡ್ಸಿಬಿಡ್ತೀನಿ.

ಕಲಾ ಬ್ರಹ್ಮ ಅಶ್ವಥ್‌ : ಬೀಗರ ಮನೆ ಕ್ಯಾಪ್ಟನ್‌ ಹತ್ರ ಕಾಲಿಗೆ ಬಿದ್ದು ಕೇಳ್ಕೊಂಡೆ . ಇನ್ನು ಎರಡೇ ಎರಡು ಬಾಲ್‌ ಸಾಲ ಕೊಡಿ ನಾನು ನಿಮ್ಮನ್ನೆಲ್ಲ ಮುಗಿಸ್ತೀನಿ ಅಂತ. ಅವರು ನಿಮ್ಮ ವಿಕೇಟ್‌ ಬೇಕೆ ಬೇಕು ಅಂತ ಪಟ್ಟು ಹಿಡಿದು ಬಿಟ್ರು ಕಣೆ ಕಮಲ. ಬೇಕಾದ್ರೆ ನನ್ನ ಮನೆ ಮಾರಿ ನಿಮ್ಮ ಎರಡು ಬಾಲ್‌ ಸಾಲ ತೀರಿಸ್ತೀನಿ ಅಂತ ಕಾಲ್‌ ಕಾಲ್‌ ಹಿಡಿದುಕೊಂಡ್ರು ದರ ದರ ಅಂತ ನನ್ನನ ಸ್ಟೇಡಿಯಂ ಆಚೆ ತಳ್ಳಿಬಿಟ್ರು. ಜಟಕ ಗಾಡಿ ತರ ಇರೋ ಆ ಪೆಪ್ಸಿ ಡ್ರಿಂಕ್ಸ್‌ ಗಾಡಿನೇ ಹಿಡಿದುಕೊಂಡು ಮನೆಗೆ ಬಂದೆ ಕಣೆ .

ಡೈಲಾಗ್‌ ಕಿಂಗ್‌ ಸಾಯಿಕುಮಾರ್‌: ನಕ್ಕನ್‌! ನನಗೆ ಪೊಲೀಸ್‌ ಯೂನಿಫಾರಂ ಹಾಕಿಕೊಂಡು ಮೈದಾನಕ್ಕೆ ಬಿಟ್ಟಿದ್ದರೆ ಅದರ ಕತೆನೇ ಬೇರೆ. ನನ್ನ ಪಿಸ್ತೂಲಿನಲ್ಲಿ ಅವರ ಹಾಕಿದ್ದ ಬಾಲ್‌ನೆಲ್ಲ ಬೌಂಡರಿಗೆ ಕಳಿಸ್ತ ಇದ್ದೆ. ಗಾಂಡು ನನ್ನ ಮಕ್ಕಳು ಬರಿ ಬ್ಯಾಟನಲ್ಲಿ ಹೊಡಿ ಅಂದ್ರೆ ಹೆಂಗೆ ಹೊಡೆಯೋದು....

ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು: ನಾನು ಎಷ್ಟು ಅಂತ ಸ್ವಂತ ಆಟ ಆಡಲಿ. ರನ್ನೇ ಬರ್ತಾ ಇಲ್ಲ . ಇನ್ಮೇಲೆ ಬೇರೆ ಟೀಂ ಪ್ಲೇಯರ್ಸ್‌ ಆಡೋ ಕ್ಯಾಸೆಟ್‌ ನೋಡಿ ಹಂಗೆ ಆಡ್ತೀನಿ. ಆಗಾನ್ನ ರನ್ನ ಆಟ ಮುಂದೆ ಹೋಗತ್ತೋ ನೋಡೋಣ.

ಪರಿಸರವಾದಿ ಸುರೇಶ ಹೆಬ್ಳೀಕರ್‌: ನಾನು ಆಡೋವಾಗ ಕಂಪ್ಲೀಟ್‌ ಸೈಲೆನ್ಸ್‌ ಇರಬೇಕು. ಜನ ಎಲ್ಲ ಕೂಗಕ್ಕೆ ಶುರುಮಾಡಿದ್ರು. ಆ ಶಬ್ದ ಮಾಲಿನ್ಯ, ವಾಯುಮಾಲಿನ್ಯ, ನನ್ನ ಸಾನೆ ಡಿಸ್ಟರ್ಬ್‌ ಮಾಡಿಬಿಡ್ತು. ಅದು ಶಾರ್ಜದಂತ ಸುಡುಗಾಡಲ್ಲಿ ಏನೇನೂ ಪರಿಸರ ಇಲ್ಲ, ಅಲ್ಲಿ ಏನ್‌ ಆಟ ಅಂತ ಆಡೋದು. ಬರಲಿ ನಮ್ಮ ಮಲೆನಾಡಿಗೆ ಅಲ್ಲಿ ತೆಂಗಿನ ಮರದ ಮೇಲೆ ನಿಂತ್ಕೊಂಡು ಬೇಕಾದ್ರೂ ಬ್ಯಾಟ್‌ ಮಾಡಿ ಇಂಡಿಯಾನ ಗೆಲ್ಲಿಸ್ತೀನಿ.

English summary
Naan Kachada Batsman, Aadare Namma Teamnalliroru Innoo Kachada, says Uppi, the bad batsman

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada