For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಗೌರವಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

  |

  ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳೇ ಕಳೆದಿದೆ. ಹೀಗಿದ್ದರೂ ಕೂಡ ಅವರನ್ನು ಈಗಲೂ ಜನ ಸ್ಮರಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥ ರಕ್ತದಾನ, ಅನ್ನದಾನ, ನೇತ್ರ ದಾನದಂತಹ ಮಹಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಪುನೀತ್ ಅವರನ್ನು ಸ್ಮರಿಸಲಾಗುತ್ತಿದೆ. ಪುನೀತ್ ಅಭಿಮಾನಿಗಳು ಒಂದು ಕಡೆಯಾದರೆ, ಸಾಕಷ್ಟು ಗಣ್ಯರು ಈಗಲೂ ಪುನೀತ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಹಾಗೆ ಅವರನ್ನು ಸ್ಮರಿಸುತ್ತಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗರೊಬ್ಬರು ಪುನೀತ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

  ಪುನೀತ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ದೇಶ ವಿದೇಶದ ಅದೆಷ್ಟೋ ಮಂದಿ ಪುನೀತ್ ಅವರ ಹಾರ್ಡ್ ಕೋರ್ ಫ್ಯಾನ್ಸ್. ಅಪ್ಪು ಅಭಿಮಾನಕ್ಕೆ ಎಲ್ಲೆ ಇಲ್ಲ ಅನ್ನೋದಕ್ಕೆ ಮತ್ತೊಂದು ಸ್ಯಾಂಪಲ್ ಸಿಕ್ಕಿದೆ. ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಪುನೀತ್ ಅವರನ್ನು ವಿಶೇಷವಾಗಿ ಗೌರವಿಸಿದ್ದಾರೆ. ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗನಾಗಿರುವ ಡೇವಿಡ್ ವಾರ್ನರ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪುನೀತ್ ಅವರ ಬಗ್ಗೆ ವಿಡಿಯೋ ಒಂದನ್ನು ಹಾಕಿಕೊಂಡಿದ್ದಾರೆ. ಪುನೀತ್ ರಾಜ್‌ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡಿನ ಒಂದು ಕ್ಲಿಪ್‌ ಅನ್ನು ಡೇವಿಡ್ ಪೋಸ್ಟ್ ಮಾಡಿದ್ದು, ಇದರಲ್ಲಿ ಪುನೀತ್ ಮುಖಕ್ಕೆ ತನ್ನ ಮುಖವನ್ನು ಸೇರಿಸಿ ಅದನ್ನೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

  ಈ ಪೋಸ್ಟರ್‌ನಲ್ಲಿ 'ರೆಸ್ಪೆಕ್ಟ್' ಎಂದು ಬರೆದುಕೊಂಡಿರೋ ಡೇವಿಡ್ ವಾರ್ನರ್ ಪುನೀತ್ ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಪುನೀತ್ ಅಭಿಮಾನಿಗಳು ಸಂತಸಗೊಂಡಿದ್ದು, ಪುನೀತ್ ಮೇಲೆ ಡೇವಿಡ್ ವಾರ್ನರ್ ಇಟ್ಟಿರುವ ಪ್ರೀತಿಗೆ ಫಿದಾ ಆಗಿದ್ದಾರೆ. ತಡವಾಗಿ ಆದರೂ ಪುನೀತ್ ಅವರನ್ನು ಸ್ಮರಣೆ ಮಾಡಿರೋದಕ್ಕೆ ಸಂತಸಗೊಂಡಿದ್ದಾರೆ. ಡೇವಿಡ್ ವಾರ್ನರ್ ಪೋಸ್ಟ್‌ಗೆ ಸಾಕಷ್ಟು ಮಂದಿ ಕಮೆಂಟ್ ಹಾಕುತ್ತಿದ್ದು, ಪುನೀತ್ ಅವರ ಮೇಲೆ ನೀವು ತೋರಿರುವ ಪ್ರೀತಿಗೆ ಖುಷಿ ಆಗಿದೆ ಎಂದು ಹೇಳುತ್ತಿದ್ದಾರೆ.


  ಈ ಪೋಸ್ಟ್ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದೀರ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರೀಯಿಸಿರೋ ಡೇವಿಡ್ ವಾರ್ನರ್ ಲವ್ ಸಿಂಬಲ್ ಹಾಕೋ ಮೂಲಕ ಉತ್ತರಿಸಿದ್ದಾರೆ. 1000ಕ್ಕೂ ಹೆಚ್ಚು ಕಮೆಂಟ್‌ಗಳು ಡೇವಿಡ್ ವಾರ್ನರ್ ಅವರ ಈ ಪೋಸ್ಟ್‌ಗೆ ಬಂದಿದೆ. ಇನ್ನು ಡೇವಿಡ್ ಅವರು ಇಂಡಿಯನ್ ಸಿನಿಮಾಗಳನ್ನು ಆಗಾಗ ನೋಡುತ್ತಿರುತ್ತಾರೆ. ಈ ಬಗ್ಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಡೇವಿಡ್ ಸಿನಿಮಾ ಹೆಗಿತ್ತು ಅಂತಲೂ ತನ್ನ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಕನ್ನಡ, ಹಿಂದಿ, ತೆಲುಗು, ಹಾಡುಗಳಿಗೆ ರೀಲ್ಸ್ ಮಾಡೋದು, ಅದಕ್ಕೆ ಡ್ಯಾನ್ಸ್ ಮಾಡೋದು ಮಾಡುತ್ತಿರುತ್ತಾರೆ. ತಾನು ಹಾಗೂ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಡೇವಿಡ್ ವಾರ್ನರ್‌ಗೆ ಈಗಾಗಲೇ ಸಾಕಷ್ಟು ಭಾರತೀಯ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡೇವಿಡ್ ಅವರನ್ನು ಹೆಚ್ಚು ಮಂದಿ ಅನುಸರಿಸುತ್ತಿದ್ದಾರೆ.

  ಡೇವಿಡ್ ವಾರ್ನರ್ ಪುನೀತ್ ಅವರ ಸ್ಮರಣೆ ಮಾಡಿರುವ ವೀಡಿಯೋ ವೈರಲ್ ಆಗುತ್ತಿದ್ದು, ಡೇವಿಡ್‌ ಕೂಡ ಸಂತಸಗೊಂಡಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಐಪಿಎಲ್ ಸರಣಿಯಲ್ಲಿ ಸನ್ ರೈಸರ್ಸ್ ತಂಡದಲ್ಲಿ ಅವಕಾಶ ವಂಚಿತರಾಗಿ ತಂಡದಿಂದ ಹೊರನಡೆದಿದ್ದರು. 2020ರ ಐಪಿಎಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆ ಫ್ರಾಂಚೈಸಿ ಡೇವಿಡ್ ವಾರ್ನರ್‌ಗೆ ತಂಡದಲ್ಲಿ ಇದ್ದರೂ ಯಾವುದೇ ಪಂದ್ಯವನ್ನು ಆಡೋಕೆ ಅವಕಾಶ ನೀಡಿರಲಿಲ್ಲ.

  ಇತ್ತೀಚೆಗೆ ನಡೆದ ಟಿ20 ವರ್ಲ್ಡ್ ಕಪ್ ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಕಲೆಹಾಕಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು, ಜೊತೆಗೆ ಅತಿ ದೊಡ್ಡ ಟೈಟಲ್ ವರ್ಲ್ಡ್ ಕಪ್ ಟ್ರೋಫಿಯನ್ನು ಆಸ್ಟ್ರೇಲಿಯಾ ಮುಡಿಗೇರಿಸಿಕೊಳ್ಳೊಕೆ ಡೇವಿಡ್ ವಾರ್ನರ್ ಪ್ರಮುಖ ಕಾರಣರಾಗಿದ್ದರು. ತಮ್ಮನ್ನ ಕಡೆಗಣಿಸಿದವರಿಗೆ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಉತ್ತರಿಸಿದ್ದರು. ಇನ್ನೂ ಈ 2022 ರ ಐಪಿಎಲ್ ಪಂದ್ಯಾವಳಿಯ ಮೆಗಾ ಆಕ್ಷನ್ ನಡೆಯಲಿದ್ದು, ವಾರ್ನರ್ ದೊಡ್ಡ ಮೊತ್ತಕ್ಕೆ ಬಿಕರಿ ಆಗುವ ಸಾಧ್ಯತೆ ಇದೆ.

  English summary
  cricketer David Warner tribute to Puneeth Rajkumar by creating special video on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X