For Quick Alerts
  ALLOW NOTIFICATIONS  
  For Daily Alerts

  'ದನಕಾಯೋನು' ನಟಿ ಜೊತೆ ಎಂಗೇಜ್ ಆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ

  |

  ಟೀಮ್ ಇಂಡಿಯಾ ಬ್ಯಾಡ್ ಬಾಯ್ ಹಾರ್ದಿಕ್ ಪಾಂಡ್ಯಾ ಹೊಸ ವರ್ಷದ ಮೊದಲ ದಿನವೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ ಮುಚ್ಚಿಟ್ಟಿದ್ದ ಪ್ರೇಮಕಾವ್ಯವನ್ನು ಅಭಿಮಾನಿಗಳ ಜೊತೆ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ನಟಿ ನತಾಶಾ ಸ್ಯಾಂಕೋವಿಕ್ ಜೊತೆಗಿನ ತಮ್ಮ ಪ್ರೇಮ ಸಂಬಂಧವನ್ನು ಖಚಿತಪಡಿಸಿದ್ದಾರೆ.

  ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗಾಗಲೆ ಇಬ್ಬರ ಎಂಗೇಜ್ ಮೆಂಟ್ ಕೂಡ ನಡೆದಿದ್ದು ಎಂಜೇಗ್ ಮೆಂಟ್ ಉಂಗುರ ತೊಟ್ಟಿರುವ ಫೋಟೋವನ್ನು ಹಾರ್ದಿಕ್ ಶೇರ್ ಮಾಡಿದ್ದಾರೆ. ಈ ಪೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳನ್ನು ಹಾರ್ದಿಕ್ ಪಾಂಡ್ಯಾ ಜೋಡಿಗೆ ಕಳುಹಿಸಿದ್ದಾರೆ.

  ಭಟ್ಟರ 'ದನಕಾಯೋನು' ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ! ಭಟ್ಟರ 'ದನಕಾಯೋನು' ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ!

  ಹಾರ್ದಿಕ್ ಪಾಂಡ್ಯಾ ಹೆಸರು ಸಾಕಷ್ಟು ನಟಿಯ ಜೊತೆ ಕೇಳಿ ಬರುತ್ತಿತ್ತು. ಆದರೆ ಇದ್ಯಾವುದರ ಬಗ್ಗೆಯು ಪಾಂಡ್ಯಾ ಬಹಿರಂಗವಾಗಿ ಮಾತನಾಡಿರಲಿಲ್ಲ. ಇತ್ತೀಚಿಗೆ ನತಾಶಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹಾರ್ದಿಕ್ ಈಗ ನತಾಶಾ ಜೊತೆ ಅಧಿಕೃತವಾಗಿ ಎಂಗೇಂಜ್ ಆಗಿರುವ ಫೋಟೋ ಸಮೇತ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಅಂದ್ಹಾಗೆ ಪಾಂಡ್ಯಾ ಕೈ ಹಿಡಿಯುತ್ತಿರುವ ನತಾಶಾ ಸ್ಯಾಂಕೋವಿಕ್ ಸರ್ಬಿಯ ಮೂಲಕ ನಟಿ. ನತಾಶಾ ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ದನಕಾಯೋನು ಸಿನಿಮಾದಲ್ಲಿ ನತಾಶಾ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಹಿಂದಿ ಬಿಗ್ ಬಾಸ್ ಮತ್ತು 'ನಾಚ್ ಬಲಿಯೆ' ರಿಯಾಲಿಟಿ ಶೋಗಳಲ್ಲಿಯೂ ಮಿಂಚಿದ್ದಾರೆ.

  ಹಾರ್ದಿಕ್ ಪಾಂಡ್ಯಾ ಗಾಯದ ಕಾರಣದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮತ್ತೆ ಅಭ್ಯಾಸವನ್ನೂ ಆರಂಭಿಸಿರುವ ಪಾಂಡ್ಯಾ ಮುಂದಿನ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ತಪ್ಪಿಸಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫಿಕ್ರಾ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಇದೆ ವರ್ಷ ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ಸ್ಯಾಂಕೋವಿಕ್ ಮದುವೆ ಸಂಭ್ರಮ ನಡೆಯುವ ಸಾಧ್ಯತೆ ಇದೆ.

  English summary
  Cricketer Hardik Pandya engaged with his love actress Natasa Stankovic on new year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X