For Quick Alerts
    ALLOW NOTIFICATIONS  
    For Daily Alerts

    ಕ್ರಿಕೆಟಿಗ ಮನೀಶ್ ಪಾಂಡೆ ಕೈ ಹಿಡಿದ ಕುಡ್ಲದ ಸುಂದರಿ ಯಾರು ಗೊತ್ತಾ?

    |
    Manish Pandey marries Kudla Girl Ashritha Shetty | Oneindia Kannada

    ಟೀಮ್ ಇಂಡಿಯಾ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಇಂದು ಮುಂಬೈಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ನಟಿ ಮತ್ತು ಕನ್ನಡತಿ ಆಶ್ರಿತಾ ಶೆಟ್ಟಿ ಜೊತೆ ಮನೀಶ್ ಹಸೆಮಣೆ ಏರಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಇಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

    30ರ ಹರೆಯದ ಮನೀಶ್ ಪಾಂಡೆ ಮತ್ತು 26ರ ಹರೆಯದ ನಟಿ ಆಶ್ರಿತಾ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರು, ಸ್ನೇಹಿತರು ಮತ್ತು ಕ್ರೀಡಾ ಜಗತ್ತಿನ ಗಣ್ಯರು ಪಾಲ್ಗೊಂಡಿದ್ದಾರೆ. ಮೂಲತಃ ಮಂಗಳೂರಿನವರಾದ ಆಶ್ರಿತಾ ಶೆಟ್ಟಿ, ತಮಿಳು, ತೆಲುಗು ಮತ್ತು ತುಳು ಚಿತ್ರಗಳಲ್ಲಿ ಅಭಿನಿಯಿಸಿದ್ದಾರೆ. 2012ರಲ್ಲಿ ತೆರೆಕಂಡ ತೆಲಿಕೆದ ಬೊಳ್ಳಿಯ ಎನ್ನುವ ತುಳು ಚಿತ್ರದ ಮೂಲಕ ಆಶ್ರಿತಾ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ.

    ದಕ್ಷಿಣ ಭಾರತದ ನಟಿಯ ಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ ದಕ್ಷಿಣ ಭಾರತದ ನಟಿಯ ಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ

    ಆಶ್ರಿತಾ ಶೆಟ್ಟಿ ಅಭಿನಯದ ಚಿತ್ರಗಳು

    ಆಶ್ರಿತಾ ಶೆಟ್ಟಿ ಅಭಿನಯದ ಚಿತ್ರಗಳು

    ಆಶ್ರಿತಾ ಒಟ್ಟು 5 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಈ ನಟಿ ಕನ್ನಡ ಚಿತ್ರಗಳನ್ನು ಬಿಟ್ಟು ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲಿ ಬಣ್ಣಹಚ್ಚಿದ್ದಾರೆ. ತಮಿಳಿನ ಇಂದ್ರಜಿತ್, ತುಳುವಿನಲ್ಲಿ ತೆಲಿಕೆದ ಬೊಳ್ಳಿ, ತಮಿಳಿನಲ್ಲಿ 'ಒರು ಕನ್ನಿಯುಮ್ ಮೂನು ಕಲಾವಾನಿಕಲಂ' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

    ಆಶ್ರಿತಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ

    ಆಶ್ರಿತಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ

    ಮಂಗಳೂರು ಮೂಲಕ ಆಶ್ರಿತಾ ಹುಟ್ಟಿ ಬೆಳೆದಿದ್ದೆಲ್ಲ ಮಾಯ ನಗರಿ ಮುಂಬೈನಲ್ಲಿ. ಫ್ಯಾಶನ್ ಶೋಗಳಲ್ಲಿ ಭಾಗಿಯಾಗುತ್ತಿದ್ದ ಆಶ್ರಿತಾ ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮೂಲಕ ಬಣ್ಣದ ಲೋಕದ ನಂಟನ್ನು ಬೆಳೆಸಿಕೊಂಡಿದ್ದರು.

    ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?

    ಪಾರ್ಟಿಯಲ್ಲಿ ಪರಿಚಯ

    ಪಾರ್ಟಿಯಲ್ಲಿ ಪರಿಚಯ

    ಸಿನಿಮಾಗಳ ಜೊತೆಗೆ ಆಶ್ರಿತಾ ಅನೇಕ ಜಾಹಿರಾತುಗಳಲ್ಲಿಯೂ ಮಿಂಚಿದ್ದಾರೆ. ಕರ್ನಾಟಕ ಮೂಲಕದ ಆಶ್ರಿತಾ ಉತ್ತರಖಂಡ ಮೂಲದ ಮನೀಶ್ ಅವರ ಪರಿಚಯವಾಗಿದ್ದು ಮುಂಬೈನ ಪಾರ್ಟಿವೊಂದರಲ್ಲಿ. ಪರಿಚಯವಾದ ನಂತರ ಇಬ್ಬರು ಸಾಕಷ್ಟು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಇಬ್ಬರ ಮದುವೆ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸುಮಾರು ನಾಲ್ಕೈದು ವರ್ಷಗಳ ಪ್ರೀತಿಗೆ ಈಗ ಮದುವೆ ಮುದ್ರೆ ಬಿದ್ದಿದೆ.

    ಮದುವೆಗೆ ಟ್ರೋಫಿ ಉಡುಗೊರೆ

    ಮದುವೆಗೆ ಟ್ರೋಫಿ ಉಡುಗೊರೆ

    ಮನೀಶ್ ಹಸೆಮಣೆಗೇರುವ ಮುನ್ನಾದಿನ, ಡಿಸೆಂಬರ್ 1ರಂದು ಪಾಂಡೆ ನಾಯಕತ್ವದ ಕರ್ನಾಟಕ ತಂಡ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಜಯಿಸಿತ್ತು. ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಕರ್ನಾಟಕ 1 ರನ್‌ನಿಂದ ಸೋಲಿಸಿತ್ತು.

    ಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ

    ಭಾರತ ಪರ ಬ್ಯಾಟಿಂಗ್

    ಭಾರತ ಪರ ಬ್ಯಾಟಿಂಗ್

    ಟೀಮ್ ಇಂಡಿಯಾ ಪರ ಪಾಂಡೆ 23 ಏಕದಿನ, 32 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 440, 587 ರನ್ ಗಳಿಸಿದ್ದಾರೆ. 120 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಮನೀಶ್ 2,843 ರನ್ ಕಲೆ ಹಾಕಿದ್ದಾರೆ.

    Read more about: marriage ಮದುವೆ
    English summary
    Cricketer Manish Pandey got married with his sweetheart actress Ashrita Shetty.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X