ದಕ್ಷಿಣ ಭಾರತದ ನಟಿಯ ಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ
Recommended Video
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ನಟಿಯನ್ನು ಕೈ ಹಿಡಿಯುತ್ತಿದ್ದಾರೆ ಮನೀಶ್. ಅಂದ್ಹಾಗೆ ಮನೀಶ್ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿರುವ ನಟಿ ಕುಡ್ಲದ ಸುಂದರಿ ಆಶ್ರಿತಾ ಶೆಟ್ಟಿ.
ಮಂಗಳೂರು ಮೂಲಕ ಆಶ್ರಿತಾ ಹುಟ್ಟಿ ಬೆಳೆದಿದ್ದೆಲ್ಲ ಮಾಯ ನಗರಿ ಮುಂಬೈನಲ್ಲಿ. ಫ್ಯಾಶನ್ ಶೋಗಳಲ್ಲಿ ಭಾಗಿಯಾಗುತ್ತಿದ್ದ ಆಶ್ರಿತಾ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದರು. 2012ರಲ್ಲಿ ತುಳು ಚಿತ್ರ ತೆಲಿಕೆದ ಬೊಳ್ಳಿಯ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ನಂತರ ನಟ ಸಿದ್ಧಾರ್ಥ್ ಜೊತೆ ಉದಯಂ ಎನ್ ಎಚ್-4, ಒರು ಕನ್ನಿಯಮ್ ಮೂನ್ ಕಲವಾನಿಕಾಲುಮ್, ಇಂದ್ರಜಿತ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾಗಳ ಜೊತೆಗೆ ಆಶ್ರಿತಾ ಅನೇಕ ಜಾಹಿರಾತುಗಳಲ್ಲಿಯೂ ಮಿಂಚಿದ್ದಾರೆ. ಆಶ್ರಿತಾ ಮತ್ತು ಮನೀಶ್ ಪಾಂಡೆ ಸಾಕಷ್ಟು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಇಬ್ಬರ ಮದುವೆ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸುಮಾರು ನಾಲ್ಕೈದು ವರ್ಷಗಳ ಪ್ರೀತಿಗೆ ಈಗ ಮದುವೆ ರೂಪ ಕೊಡುತ್ತಿದ್ದಾರೆ.

ಅಂದ್ಹಾಗೆ ಮನೀಶ್ ಪಾಂಡೆ ಆಶ್ರಿತಾ ಪರಿಚಯವಾಗಿದ್ದು ಪಾರ್ಟಿಯಲ್ಲಿ. ಮುಂಬೈನ ಪಾರ್ಟಿಯೊಂದರಲ್ಲಿ ಭೇಟಿಯಾದ್ದರು. ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿ ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಂದ್ಹಾಗೆ ಡಿಸೆಂಬರ್ 2 ರಂದು ಇಬ್ಬರ ಮದುವೆ ಸಮಾರಂಭ ನಡೆಯಲಿದೆ .


Click it and Unblock the Notifications











