ಕ್ರಿಕೆಟ್ ಅಂಗಳದಿಂದ ಗಾಂಧಿ ನಗರಕ್ಕೆ ಬಂದ ಪ್ರವೀಣ್

ಕ್ರಿಕೆಟ್ ಅಂಗಳದಲ್ಲಿ ಬ್ಯಾಟು ಬೀಸುತ್ತಿದ್ದ ಕ್ರಿಕೆಟಿಗ ಸಿನಿಮಾ ನಾಯಕನಾಗುವ ಕನಸು ಹೊತ್ತು ಗಾಂಧಿ ನಗರಕ್ಕೆ ಅಡಿಯಿಟ್ಟಿದ್ದಾರೆ. ಕ್ರಿಕೆಟ್‌ನಲ್ಲಿ ಸಿಕ್ಸರ್‌ ಹೊಡೆದು ಅಭ್ಯಾಸವಿರುವ ಯುವಕ ಪ್ರವೀಣ್ ಗಾಂಧಿ ನಗರದಲ್ಲಿಯೂ 'ಸಿಕ್ಸರ್' ಹೊಡೆಯುತ್ತಾರಾ ನೋಡಬೇಕಿದೆ.

'ಡಿಯರ್ ಕಣ್ಮಣಿ' ಸಿನಿಮಾದ ಮೂಲಕ ನಾಯಕ ನಟನಾಗಲು ಹೊರಟಿದ್ದಾರೆ ಪ್ರವೀಣ್. ವಿಸ್ಮಯಾ ಗೌಡ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ಆಡಿಷನ್ ಮೂಲಕ ಪ್ರವೀಣ್‌ ಅನ್ನು ಆಯ್ಕೆ ಮಾಡಿದ್ದರಂತೆ ವಿಸ್ಮಯ.

ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿವಹಿಸಿದ್ದ ಪ್ರವೀಣ್, ಕರ್ನಾಟಕದ ಅಂಡರ್ 19, ಅಂಡರ್ 22 ಹಾಗೂ ರೈಲ್ವೇಸ್ ತಂಡಗಳಲ್ಲಿ ಆಡಿದ್ದಾರೆ. ಕ್ಲಬ್‌ ಒಂದಕ್ಕಾಗಿ ಆಡುವಾಗ ಅವರು ಹೊಡೆದಿದ್ದ 188 ರನ್‌ ಹೊಡೆದಿರುವುದು ಅವರ ಬೆಸ್ಟ್ ಇನಿಂಗ್ಸ್. ಕೆಪಿಎಲ್, ಕೆಸಿಸಿನಲ್ಲೂ ಆಡಿ ಮಿಂಚಿದ್ದಾರೆ.

Cricketer Praveen Becoming Hero In Dear Kanmani Movie

ಸುದೀಪ್ ಅಭಿಮಾನಿ ಆಗಿರುವ ಪ್ರವೀಣ್, "ನಾನು ಸುದೀಪ್ ಅಣ್ಣ ಅವರ ಅಭಿಮಾನಿ. ಅವರನ್ನೇ ನನ್ನ ರೋಲ್ ಮಾಡೆಲ್ ಎಂದು ನಂಬುತ್ತೇನೆ. ಅವರ ಅಭಿನಯ ನೋಡಿ ನನಗೂ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಕಳೆದ 5-6 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸಬೇಕು ಎಂದು ಅವಕಾಶದ ಹುಡುಕಾಟದಲ್ಲಿದ್ದೆ, ಈಗ ಅವಕಾಶ ದೊರೆತಿದೆ' ಎಂದಿದ್ದಾರೆ.

'ಕ್ರಿಕೆಟ್ ಆಡುವಾಗ ನನಗೆ ಯಾರೂ ಬೆಂಬಲಿಗರು ಇರಲಿಲ್ಲ. "ಡಿಯರ್ ಕಣ್ಮಣಿ"ಗೆ ಆಡಿಷನ್ ಕೊಟ್ಟ ನಂತರ ವಿಸ್ಮಯಾ ಗೌಡ ಅವರು ನನಗೆ ಬೆಂಬಲ ಕೊಟ್ಟರು. ಮೊದಲೇ ಸ್ನೇಹಿತರಾಗಿದ್ದರು ಆದರೆ ಅವರ ತಂಡದ ಉತ್ಸಾಹ, ಸಿನಿಮಾದ ಕಥೆ, ನನಗೆ ಸಿಕ್ಕ ಪಾತ್ರ, ಅದರಲ್ಲೂ ಮೊದಲ ಸಿನಿಮಾದಲ್ಲೇ "ಹೀರೋ ರೋಲ್' ಇದೆಲ್ಲಾ ನೋಡಿ ನಾನು ನಿಜಕ್ಕೂ ಕನಸು ಕಾಣಲು ಆರಂಭಿಸಿದೆ ಎಂದರು.

Cricketer Praveen Becoming Hero In Dear Kanmani Movie

ಕ್ರಿಕೆಟ್‌ ಆಡುವಾಗ ನಾನು ಸಾಕಷ್ಟು ಬೆವರು ಹರಿಸಿದ್ದೆ. ಅದೇ ರೀತಿ ಸಿನಿಮಾಕ್ಕಾಗಿ ಕೂಡ ನಾನು ಶ್ರಮ ಹಾಕಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಗೆದ್ದೇ ಗೆಲ್ಲುತ್ತೇನೆ ಅನ್ನುವ ಭರವಸೆ ಇದೆ' ಎಂದಿದ್ದಾರೆ ಪ್ರವೀಣ್.

ಕ್ರಿಕೆಟ್‌ ಆಟಗಾರನಿಂದ ನಟನಾಗಲಿರುವ ಪ್ರವೀಣ್ ಅವರಿಗೆ ಅವರಿಂದ ಧ್ವನಿ, ನಟನೆ, ಲುಕ್ ಎಲ್ಲಾ ರೀತಿಯಲ್ಲೂ ತರಬೇತಿಯನ್ನು ನೀಡಲಾಗುತ್ತಿದೆ.

Recommended Video

ಏಪ್ರಿಲ್ 15ಕ್ಕೆ ವಿಕ್ರಾಂತ್ ರೋಣ ತಂಡದಿಂದ ಸಿಗಲಿದೆ ಸರ್ಪ್ರೈಸ್ | Kichcha Sudeep | Filmibeat Kannada

'ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ತೆರೆ ಮೇಲೂ ಅದು ಹಾಗೇ ಕಾಣಬೇಕಾದರೆ ತರಬೇತಿ ಬೇಕು ಎನ್ನುವುದು ನಿರ್ದೇಶಕಿ ವಿಸ್ಮಯಾ ಅವರ ಕನಸು. ಅವರ ಶ್ರಮ ಹಾಗೂ ಕನಸಿಗೆ ನಾವು ಬೆಂಬಲ ನೀಡುತ್ತಿದ್ದೇವೆ. ನಮ್ಮ ಎಲ್ಲಾ ಅಗತ್ಯ ಹಾಗೂ ಭರವಸೆಗೂ ವಿಸ್ಮಯಾ ಅವರು ಜೊತೆ ಇದ್ದಾರೆ' ಎಂದು ಪ್ರವೀಣ್ ಹೇಳಿದರು.

More from Filmibeat

English summary
Cricketer Praveen becoming Hero in Dear Kanmani Kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X