twitter
    For Quick Alerts
    ALLOW NOTIFICATIONS  
    For Daily Alerts

    'ಹೊಯ್ಸಳ' ಸೆಟ್ ಗೆ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ

    |

    ಕ್ರಿಕೆಟ್ ಹಾಗೂ ಸಿನಿಮಾ ರಂಗ ಹತ್ತಿರದ ಬಂಧ ಹೊಂದಿವೆ. ಬಹು ವರ್ಷಗಳಿಂದಲೂ ಸಿನಿಮಾ ರಂಗದವರು ಹಾಗೂ ಕ್ರಿಕೆಟ್ ರಂಗದವರು ಪರಸ್ಪರ ಆತ್ಮೀಯರಾಗಿದ್ದಾರೆ. ಕರ್ನಾಟಕದಲ್ಲಿಯೂ ಈ ಸಂಪ್ರದಾಯ ಇದೆ.

    ಗುಂಡಪ್ಪ ವಿಶ್ವನಾಥ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರಂಥಹವರು ರಾಜ್‌ಕುಮಾರ್ ಕುಟುಂಬದೊಂದಿಗೆ ಬಹಳ ಆಪ್ತ ಬಂಧ ಹೊಂದಿದ್ದರು. ರಣಜಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ದೊಡ್ಮನೆ ಕುಟುಂಬದವರೆಲ್ಲರೂ ಒಟ್ಟಿಗೆ ತೆರಳುತ್ತಿದ್ದ ಸಂದರ್ಭಗಳೂ ಇದ್ದವು.

    ಈಗಿನ ಜಮಾನಾದ ಕರ್ನಾಟಕದ ಕ್ರಿಕೆಟಿಗರಲ್ಲಿ ಕೆ.ಎಲ್.ರಾಹುಲ್, ಕೆಲವು ಸಿನಿಮಾ ನಟರೊಟ್ಟಿಗೆ ಬಾಂಧವ್ಯ ಹೊಂದಿದ್ದಾರೆ. ಇತ್ತೀಚೆಗೆ ಅಂಬರೀಶ್ ಪುತ್ರ ಅಭಿಷೇಕ್‌ರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಕೆ.ಎಲ್.ರಾಹುಲ್. ಆದರೆ ಕರ್ನಾಟಕದ ಮಹಿಳಾ ಕ್ರಿಕೆಟಿಗರು ಸಿನಿಮಾ ರಂಗದೊಂದಿಗೆ ತುಸು ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಕರ್ನಾಟಕದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಕನ್ನಡ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ್ದಾರೆ.

    'ಹೊಯ್ಸಳ' ಸೆಟ್‌ಗೆ ವೇದಾ ಕೃಷ್ಣಮೂರ್ತಿ ಭೇಟಿ

    'ಹೊಯ್ಸಳ' ಸೆಟ್‌ಗೆ ವೇದಾ ಕೃಷ್ಣಮೂರ್ತಿ ಭೇಟಿ

    ಡಾಲಿ ಧನಂಜಯ್ ಅಭಿನಯದ "ಹೊಯ್ಸಳ" ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ. ಭಾರತ ಮಹಿಳೆ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರು "ಹೊಯ್ಸಳ" ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರತಂಡದೊಂದಿಗೆ ವೇದಾ ಕೃಷ್ಣಮೂರ್ತಿ ಫೋಟೊ ತೆಗೆಸಿಕೊಂಡಿದ್ದು, ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡಾಲಿ ಧನಂಜಯ್ ನಾಯಕ, ಅಮೃತಾ ನಾಯಕಿ

    ಡಾಲಿ ಧನಂಜಯ್ ನಾಯಕ, ಅಮೃತಾ ನಾಯಕಿ

    ಮೈಸೂರಿನಲ್ಲಿ ಪೊಲೀಸ್ ಠಾಣೆಯ ಸೆಟ್‌ ಒಂದರಲ್ಲಿ 'ಹೊಯ್ಸಳ' ಸಿನಿಮಾದ ಚಿತ್ರೀಕರಣದ ವೇಳೆ ವೇದಾ ಕೃಷ್ಣಮೂರ್ತಿ ಭೇಟಿ ನೀಡಿ ಚಿತ್ರೀಕರಣ ವೀಕ್ಷಿಸಿದ್ದಾರೆ. ಚಿತ್ರತಂಡಕ್ಕೂ ಶುಭ ಕೋರಿದ್ದಾರೆ. ವೇದಾ ಕೃಷ್ಣಮೂರ್ತಿ ಸೆಟ್‌ಗೆ ಭೇಟಿ ನೀಡಿದ ವೇಳೆ ಸಿನಿಮಾದ ನಾಯಕ ಡಾಲಿ ಧನಂಜಯ್, ನಾಯಕಿ ಅಮೃತಾ ಅಯ್ಯಂಗಾರ್, ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ವಿಜಯ್ ನಾಗೇಂದ್ರ, ಸಾಹಸ ನಿರ್ದೇಶಕ ದಿಲೀಪ್ ಸುಬ್ಬರಾಯಣ್ ಮುಂತಾದವರು ಉಪಸ್ಥಿತರಿದ್ದರು.

    ಸಾಮಾಜಿಕ ಕಳಕಳಿ ಹೊಂದಿರುವ ವೇದಾ

    ಸಾಮಾಜಿಕ ಕಳಕಳಿ ಹೊಂದಿರುವ ವೇದಾ

    ಸಾಮಾಜಿಕ ಕಳಕಳಿಯನ್ನೂ ಹೊಂದಿರುವ ವೇದಾ ಕೃಷ್ಣಮೂರ್ತಿ ಸರ್ಕಾರದ ಕೆಲವು ಮಹಿಳಾಪರ ಯೋಜನೆಗಳಿಗೂ ಸಾಥ್ ನೀಡಿದ್ದಾರೆ. ಜುಲೈ 06 ರಂದು ನಡೆದ 'ಮೈತ್ರಿ ಕಪ್' ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಿದ್ದರು. ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಇಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ವಿನೂತನ 'ಮೈತ್ರಿ ಕಪ್' ಯೋಜನೆಗೆ ಚಾಲನೆ ನೀಡಿದರು.

    ಕಡೂರಿನವರು ವೇದಾ ಕೃಷ್ಣಮೂರ್ತಿ

    ಕಡೂರಿನವರು ವೇದಾ ಕೃಷ್ಣಮೂರ್ತಿ

    ಮಹಿಳಾ ಕ್ರಿಕೆಟ್ ನಲ್ಲಿ ವೇದ ಕೃಷ್ಣಮೂರ್ತಿ ಅವರು ತಮ್ಮದೇ ಆದ ಹೆಸರು ಮಾಡಿದ್ದಾರೆ. 2017 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಫೈನಲ್ ತಲುಪಿತು. ಆ ತಂಡದಲ್ಲಿ ವೇದ ಕೃಷ್ಣಮೂರ್ತಿ ಸಹ ಇದ್ದರು. ಕಡೂರಿನವರಾಗಿರುವ ವೇದಾ ಕೃಷ್ಣಮೂರ್ತಿ ಭಾರತ ಮಹಿಳಾ ತಂಡದ ಪರವಾಗಿ 48 ಒನ್‌ಡೇ, 74 ಟಿ20 ಪಂದ್ಯಗಳನ್ನಾಡಿದ್ದಾರೆ. ಜೊತೆಗೆ ಬಿಗ್‌ಬ್ಯಾಶ್ ಲೀಗ್ ಪಂದ್ಯಗಳಲ್ಲಿಯೂ ವೇದಾ ಆಡಿದ್ದಾರೆ.

    English summary
    Indian women cricket team member Veda Krishnamurthy visited Kannada movie Hoysala set in Mysore. Dali Dhananjay is the hero of the movie.
    Friday, July 8, 2022, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X