For Quick Alerts
  ALLOW NOTIFICATIONS  
  For Daily Alerts

  ಪೊಲೀಸರ ಕೈಗೆ ಮತ್ತೊಮ್ಮೆ ಸಿಕ್ಕಿಬಿದ್ದ ನಟಿ ಭುವನೇಶ್ವರಿ

  By Rajendra
  |

  ತಮಿಳು, ತೆಲುಗು ದ್ವಿಭಾಷಾ ತಾರೆ ಭುವನೇಶ್ವರಿ ಮತ್ತೊಮ್ಮೆ ಚೆನ್ನೈ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಈ ಹಿಂದೊಮ್ಮೆ ಈಕೆ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಈಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಪೊಲೀಸರ ಅತಿಥಿಯಾಗಿದ್ದಾರೆ.

  ಘಟನೆಯ ವಿವರಗಳು ಹೀಗಿವೆ... ಚೆನ್ನೈನ ಇಂಜಂಬಾಕ್ಕಂನಲ್ಲಿನ ಚಿತ್ರಮಂದಿರದಲ್ಲಿ 'ತುಪಾಕಿ' ಚಿತ್ರ ನೋಡಲು ನಟಿ ಭುವನೇಶ್ವರಿ ಅವರು ವಕೀಲ ದಾಮೋದರಕೃಷ್ಣನ್ ಜೊತೆ ಬಂದಿದ್ದರು. ಅಲ್ಲಿ ಕಾರನ್ನು ಪಾರ್ಕ್ ಮಾಡಬೇಕಾದರೆ ಕುಮಾರ್ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಕುಮಾರ್ ಅವರ ಕಾರು ಚಾಲಕನ ಮೇಲೆ ದಾಮೋದರಕೃಷ್ಣನ್ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲೇ ಇದ್ದ ಕೆಲವು ದ್ವಿಚಕ್ರ ವಾಹನ ಸವಾರರು ದಾಮೋದರಕೃಷ್ಣನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಮೊದಲೇ ವಕೀಲರಾದ ದಾಮೋದರ ಅವರ ಜೊತೆ ಒಂದಷ್ಟು ಹುಡುಗರು ಇದ್ದರಂತೆ. ಚಿತ್ರಮಂದಿರದಲ್ಲಿದ್ದ ಎಲ್ಲರ ಮೇಲೂ ತಮ್ಮ ಹುಡುಗರನ್ನು ಬಿಟ್ಟು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಅವರೆಲ್ಲಾ ಅಲ್ಲಿಂದ ಕಾಲ್ತಿತ್ತಿದ್ದರು.

  ಈ ಸಂಬಂಧ ಪೊಲೀಸರು ದಾಮೋದರಕೃಷ್ಣನ್ ಹಾಗೂ ನಟಿ ಭುವನೇಶ್ವರಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಅವರನ್ನು ಬಂಧಿಸಿದ್ದಾರೆ. ಹಲ್ಲೆ ನಡೆದ ಸಂದರ್ಭದಲ್ಲಿ ದಾಮೋದರಕೃಷ್ಣನ್ ಅವರು ಪಾನಮತ್ತರಾಗಿದ್ದರು ಎನ್ನಲಾಗಿದೆ. ಒಟ್ಟು 45 ನಿಮಿಷಗಳ ಕಾಲ ಥಿಯೇಟರ್ ನಲ್ಲಿ ಗಲಿಬಿಲಿ ವಾತಾವರಣ ಸೃಷ್ಟಿಯಾಗಿತ್ತು ಎಂದಿವೆ ಪೊಲೀಸ್ ಮೂಲಗಳು.

  ತಮಿಳಿನ ಖ್ಯಾತ ನಾಮರಾದ ಶಂಕರ್, ಭಾರತಿರಾಜ ಅವರ ಚಿತ್ರಗಳಲ್ಲಿ ಭುವನೇಶ್ವರಿ ನಟಿಸಿದ್ದಾರೆ. ತಮಿಳಿನ ಜನಪ್ರಿಯ 'ಬಾಯ್ಸ್' ಮತ್ತು 'ಥೇರ್ ಕತಿ ಪಣ್ಣು 'ಚಿತ್ರಗಳಲ್ಲಿ ಬೋಲ್ಡ್ ಮತ್ತು ಬ್ಯುಟಿಫುಲ್ ಆಗಿ ನಟಿಸಿ ಉತ್ತಮ ನಟಿ ಎಂದೂ ಗುರುತಿಸಿಕೊಂಡಿದ್ದಾರೆ. ಏನೇ ಆಗಲಿ ಇದೊಂದು ಕ್ರೈಂ ನ್ಯೂಸ್ ಅಷ್ಟೇಯಾ!(ಏಜೆನ್ಸೀಸ್)

  English summary
  Chennai police to register a criminal case against actor Bhuvaneswari for attack on Police at a Theatre. According to the police, lawyer Mr Damodarakrishnan had gone to the Prarthana drive in-theatre to watch the night-show of Thuppaki along with actress Bhuvaneswari, when he allegedly picked up a quarrel with the driver of a vehicle parked in front.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X