ಒಂದಲ್ಲ ಎರಡಲ್ಲ.. ದುನಿಯಾ ವಿಜಯ್ ಕಿರಿಕ್ ಗಳ ಪಟ್ಟಿ ನೋಡಿ

Recommended Video

ಒಂದೆಲ್ಲಾ ಎರಡಲ್ಲಾ ದುನಿಯಾ ವಿಜಯ್ ಮಾಡಿರುವ ಕೆಲಸಗಳು..! | Filmibeat Kannada

ನಟ ದುನಿಯಾ ವಿಜಯ್ ಮೇಲಿಂದ ಮೇಲೆ ಕಿರಿಕ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಮಾಡಿರುವ ಹೆಸರನ್ನು ತಮ್ಮ ಪುಂಡಾಟಗಳ ಮೂಲಕ ಕಳೆದುಕೊಳ್ಳುತ್ತಿದ್ದಾರೆ.

ಜಿಮ್ ಟ್ರೈನರ್ ಪಾನಿ ಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್​ ಹಾಗೂ ಮಣಿಪ್ರಸಾದ್​ ಕಿಡ್ನಾಪ್​ ಮಾಡಿದ್ದರು. ಈ ಸಂಬಂಧ ಈಗಾಗಲೇ ನಟ ದುನಿಯಾ ವಿಜಯ್ ರನ್ನ ಹೈಗ್ರೌಂಡ್ಸ್​ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ದುನಿಯಾ ವಿಜಯ್ ಗೆ ಈ ರೀತಿಯ ಪ್ರಕರಣಗಳು ಹೊಸತೇನಲ್ಲ. ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ದುನಿಯಾ ವಿಜಯ್ ಈ ಹಿಂದೆ ಮಾಡಿಕೊಂಡ ಕಿರಿಕ್ ಗಳ ಪಟ್ಟಿ ಮುಂದಿದೆ ಓದಿ....

ಪತ್ನಿ ನಾಗರತ್ನಗೆ ಜೀವ ಬೆದರಿಕೆ

ಪತ್ನಿ ನಾಗರತ್ನಗೆ ಜೀವ ಬೆದರಿಕೆ

ದುನಿಯಾ ವಿಜಯ್ ತಮ್ಮ ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದ. ಜೊತೆಗೆ ಅವರ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಪ್ರಯತ್ನ ಮಾಡಿದ್ದ. 2013 ಜನವರಿಯಲ್ಲಿ ಈ ಘಟನೆ ನೆಡೆದಿತ್ತು. ಸಿಕೆ ಅಚ್ಚುಕಟ್ಟು ಪೊಲೀಸರು ಈ ಪ್ರಕರಣಗಳನ್ನು ನಿಭಾಹಿಸಿದ್ದರು.

'ಮಾಸ್ತಿಗುಡಿ' ಪ್ರಕರಣ

'ಮಾಸ್ತಿಗುಡಿ' ಪ್ರಕರಣ

ಮಾಸ್ತಿಗುಡಿ ಚಿತ್ರದಲ್ಲಿ ಆದ ಅನಾಹುತ ಎಲ್ಲರಿಗೂ ತಿಳಿದಿದೆ. ಇದೆ. ಚಿತ್ರದ ಶೂಟಿಂಗ್ ನಲ್ಲಿ ಅನಿಲ್, ಉದಯ್ ನೀರಿನಲ್ಲಿ ಮುಳುಗಿ ವಿಧಿವಶರಾದರು. ಈ ಪ್ರಕರಣದ ತನಿಖೆಯ ವೇಳೆ ನಿರ್ಮಾಪಕ ಸುಂದರ್ ಪಿ ಗೌಡಗೆ ತಪ್ಪಿಸಿಕೊಳ್ಳಲು ವಿಜಿ ಸಹಾಯ ಮಾಡಿದ್ದ. ಬಳಿಕ ಸುಂದರ್ ಪಿ ಗೌಡ ಹಾಗೂ ದುನಿಯಾ ವಿಜಯ್ ಇಬ್ಬರು ಪೋಲೀಸರ ಅತಿಥಿ ಆಗಿದ್ದರು.

ವೃದ್ಧ ವ್ಯಕ್ತಿಗೆ ಹಲ್ಲೆ

ವೃದ್ಧ ವ್ಯಕ್ತಿಗೆ ಹಲ್ಲೆ

ವೃದ್ಧ ವ್ಯಕ್ತಿಯೊಬ್ಬರಿಗೆ ಎದೆಗೆ ಒದ್ದು ದುನಿಯಾ ವಿಜಯ್ ಹಲ್ಲೆ ಮಾಡಿದ್ದರು. ಘಟನೆಯ ಬಳಿಕ ಚೆನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ವಿಜಿ ಅರೆಸ್ಟ್ ಆಗಿದ್ದರು. ಆದರೆ, ಬೇಲ್ ಪಡೆದು ಹೊರ ಬಂದ ವಿಜಿಗೆ ಪೋಲೀಸರು ಮತ್ತೆ ರೀತಿ ಮಾಡಬೇಡ ಎಂದು ವಾರ್ನ್ ಮಾಡಿದ್ದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ

ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕರಿಚಿರತೆ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ವಿಜಿ ಅಡ್ಡಿಪಡಿಸಿದ್ದರು ಹಾಗೂ ಕರ್ತವ್ಯ ನಿರತ ಪೊಲೀಸ್ ಜೊತೆ ಮಾತು ಬೆಳೆಸಿದ್ದರು ಈ ಆರೋಪದಲ್ಲಿ ವಿಜಿ ವಿರುದ್ಧ 31 ಐಪಿಸಿ ಕಲಂ 353 ಪ್ರಕಾರ ಎಫ್‍ಐಆರ್ ದಾಖಲಾಗಿತ್ತು.

ಇಂದಿನ ಘಟನೆ

ಇಂದಿನ ಘಟನೆ

ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ದುನಿಯಾ ವಿಜಿ ತಂಡ ಹಾಗೂ ​ಟ್ರೈನರ್​ ಮಾರುತಿ ಗೌಡ ನಡುವೆ ಜಗಳ ಶುರುವಾಗಿತ್ತು. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್​ ಹಾಗೂ ಮಣಿಪ್ರಸಾದ್​ ಕಿಡ್ನಾಪ್​ ಮಾಡಿದ್ದರು. ಈ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ರನ್ನ ಹೈಗ್ರೌಂಡ್ಸ್​ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

More from Filmibeat

English summary
List of criminal cases against kannada actor Duniya Vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X