ಡಬ್ಬಿಂಗ್ ಗೆ ಬೆಂಬಲ ಸೂಚಿಸಿದ ರಾಜಕೀಯ ಗಣ್ಯರು
ಡಬ್ಬಿಂಗ್ ನಮ್ಮ ಸಂಸ್ಕೃತಿ ಅಲ್ಲ..ಕನ್ನಡ ಸಿನಿಮಾರಂಗಕ್ಕೆ ಡಬ್ಬಿಂಗ್ ಬೇಡವೇ ಬೇಡ ಎಂದು ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.
ಪ್ರೇಕ್ಷಕರಲ್ಲಿ ಎರಡು ರೀತಿಯ ವರ್ಗವಿದ್ದು ಕೆಲವರು ಡಬ್ಬಿಂಗ್ ಬೇಡ ಎಂದರೆ ಮತ್ತೆ ಕೆಲವು ಡಬ್ಬಿಂಗ್ ಬೇಕೇ ಬೇಕು ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ನಮ್ಮ ಭಾಷೆಯಲ್ಲಿ ನೋಡುವ ಅವಕಾಶವನ್ನು ಮಾಡಿ ಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಡಬ್ಬಿಂಗ್ ವಿಚಾರ ಮತ್ತೆ ಸದ್ದು ಮಾಡುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಹಾಲಿವುಡ್ ಸಿನಿಮಾ 'ಮೋಗ್ಲಿ' ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಮೋಗ್ಲಿ' ಚಿತ್ರವನ್ನ ಕನ್ನಡ ಭಾಷೆಯಲ್ಲಿ ನೋಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜಕೀಯ ಗಣ್ಯರು ಡಬ್ಬಿಂಗ್ ಬರಲಿ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹಾಗಾದರೆ ಯಾವ ರಾಜಕೀಯ ವ್ಯಕ್ತಿಗಳು ಡಬ್ಬಿಂಗ್ ಪರವಾಗಿ ನಿಂತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಡಬ್ಬಿಂಗ್ ಬೇಕು ಎಂದ ರಾಜಕೀಯ ಗಣ್ಯರು
ಇಷ್ಟು ದಿನಗಳ ಕಾಲ ಸಿನಿಮಾರಂಗ, ಕನ್ನಡ ಪರ ಹೋರಾಟಗಾರರು ಹಾಗೂ ಪ್ರೇಕ್ಷಕರ ಮಧ್ಯೆ ನಡೆಯುತ್ತಿದ್ದ ಡಬ್ಬಿಂಗ್ ವಿವಾದಕ್ಕೆ ರಾಜಕೀಯ ವ್ಯಕ್ತಿಗಳ ಪ್ರವೇಶಿಸಿದ್ದಾರೆ.
ಇಷ್ಟವಾದದ್ದನ್ನು ತಮ್ಮ ಭಾಷೆಯಲ್ಲೇ ನೋಡಲಿ
ಟ್ವಿಟ್ಟರ್ ನಲ್ಲಿ ಡಬ್ಬಿಂಗ್ ಬೇಕು ಎನ್ನುವ ಅಭಿಯಾನ ನೆಡೆಯುತ್ತಿರುವುದನ್ನು ಗಮನಿಸಿದ ಮಾಜಿ ಸಚಿವ, ಹಾಲಿ ಶಾಸಕ ಸಿ ಟಿ ರವಿ, "ಪ್ರೇಕ್ಷಕರಿಗೆ ಇಷ್ಟವಾಗುವುದನ್ನು ತಮ್ಮ ಭಾಷೆಯಲ್ಲಿಯೇ ನೋಡಲಿ, ನನಗೂ ಬೇರೆ ಭಾಷೆಯ ಸಿನಿಮಾಗಳನ್ನು ನನ್ನ ಭಾಷೆಯಲ್ಲಿ ನೋಡುವ ಆಸೆ ಇದೆ". ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅಂತರಾಷ್ಟ್ರೀಯಮಟ್ಟದ ಸಿನಿಮಾ ಡಬ್ ಆಗಲಿ
ಸಂಸದ ಪ್ರಹ್ಲಾದ್ ಜೋಶಿ ಕೂಡ ಡಬ್ಬಿಂಗ್ ಪರವಾಗಿ ಟ್ವೀಟ್ ಮಾಡಿದ್ದು "ಅಂತರಾಷ್ಟ್ರೀಯಮಟ್ಟದ ಸಿನಿಮಾಗಳು ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳು ಕನ್ನಡದಲ್ಲಿ ಡಬ್ ಆಗಲಿ, ಅವುಗಳನ್ನು ಕನ್ನಡದಲ್ಲೇ ನೋಡಲು ಪ್ರೇಕ್ಷಕರು ಬಯಸುತ್ತಾರೆ." ಎಂದಿದ್ದಾರೆ.

ಸಂತಸ ವ್ಯಕ್ತ ಪಡಿಸಿದ ಪ್ರೇಕ್ಷಕರ
ಸಿ ಟಿ ರವಿ ಹಾಗೂ ಪ್ರಹ್ಲಾದ್ ಜೋಶಿ ಅವರ ಟ್ವೀಟ್ ನೋಡಿರುವ ಅನೇಕ ಕನ್ನಡ ಸಿನಿಮಾ ಪ್ರೇಕ್ಷಕರು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿ ನಮ್ಮ ಮಕ್ಕಳು ನೋಡಲು ಅವಕಾಶ ಮಾಡಿ ಕೊಡಿ. ನಮ್ಮ ಜೊತೆ ಹೋರಾಟದಲ್ಲಿ ಭಾಗಿಯಾಗಿ ಎಂದಿದ್ದಾರೆ.


Click it and Unblock the Notifications











