ಉಪ್ಪಿ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಗಿಫ್ಟ್; ಆ ಸೂಪರ್ ಹಿಟ್ ಸಿನಿಮಾ ರೀ- ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ವಿದೇಶಗಳಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಿಸಿದ್ದಾರೆ. 'ಯುಐ' ವಿಚಾರ ಪಕ್ಕಕ್ಕಿಟ್ಟರೆ ಈ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಮತ್ತೊಂದು ಸರ್‌ಪ್ರೈಸ್ ಕಾಯ್ತಿದೆ.

Cult classic Upendra Re-release on actor birthday

ಸೂಪರ್ ಸ್ಟಾರ್ ನಿರ್ದೇಶಿಸಿ ನಟಿಸಿದ್ದ 'ಉಪೇಂದ್ರ' ರೀ-ರಿಲೀಸ್‌ಗೆ ಸಜ್ಜಾಗಿದೆ. ಸದ್ಯ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ಮತ್ತೆ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಇತ್ತಿಚೆಗೆ 'ಕರಿಯ' ಸಿನಿಮಾ ರೀ-ರಿಲೀಸ್ ಆಗಿತ್ತು. ಇದಕ್ಕೂ ಮುನ್ನ 'ಜಾಕಿ', 'ಶಾಸ್ತ್ರಿ', 'ರಾಜಾಹುಲಿ' ಹೀಗೆ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿತ್ತು. 3 ತಿಂಗಳ ಹಿಂದೆ ಉಪೇಂದ್ರ ಅವರ 'ಎ' ಸಿನಿಮಾ ಸಹ ಬಂದಿತ್ತು.

ಹೆಚ್ಚು ಕಮ್ಮಿ 25 ವರ್ಷಗಳ ಹಿಂದೆ 'ಉಪೇಂದ್ರ' ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ತೆರೆಗಪ್ಪಳಿಸಿ ಗೆದ್ದಿತ್ತು. ಉಪ್ಪಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನ, ನಿರೂಪಣೆ, ನಟನೆಯಿಂದ ಮೋಡಿ ಮಾಡಿದ್ದರು. ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಾಯಕಿಯರಾಗಿ ನಟಿಸಿದ್ದರು.

ಗುರುಕಿರಣ್ ಸಂಗೀತದ ಆಲ್ಬಮ್ ಸೂಪರ್ ಹಿಟ್ ಆಗಿತ್ತು. 'ಏನಿಲ್ಲ ಏನಿಲ್ಲ' ಸಾಂಗ್ ಬಹಳ ಸದ್ದು ಮಾಡಿತ್ತು. ಇತ್ತೀಚೆಗೆ ರೀಲ್ಸ್‌ನಲ್ಲಿ 'ಕರಿಮಣಿ ಮಾಲೀಕ' ಅಂತ ಈ ಮತ್ತಷ್ಟು ದೊಡ್ಡದಾಗಿ ಹಿಟ್ ಆಗಿದ್ದು ಗೊತ್ತೇಯಿದೆ. ಶಿಲ್ಪಾ ಶ್ರೀನಿವಾಸ್ 'ಉಪೇಂದ್ರ' ಸಿನಿಮಾ ನಿರ್ಮಿಸಿದ್ದರು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಅವತ್ತಿನ ಕಾಲಕ್ಕೆ 8ರಿಂದ 10 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು.

Cult classic Upendra Re-release on actor birthday

ಬಹಳ ದಿನಗಳಿಂದ ಅಭಿಮಾನಿಗಳು 'ಉಪೇಂದ್ರ' ಸಿನಿಮಾ ರೀ-ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಆರ್‌. ಕೆ ಗ್ರೂಪ್ಸ್ ಸಿನಿ ಕಂಬೈನ್ಸ್ ಸಂಸ್ಥೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ. 4K ಡಿಜಿಟಲ್ ವರ್ಷನ್‌ನಲ್ಲಿ ಉಪೇಂದ್ರ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾನೆ. ಅವತ್ತಿನ ಕಾಲಕ್ಕೆ ಭಾರೀ ಚರ್ಚೆ ಹುಟ್ಟಾಕ್ಕಿದ್ದ ಚಿತ್ರವನ್ನು ಇವತ್ತಿನ ಜನರೇಷನ್ ಕೂಡ ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗುತ್ತಿದೆ.

'ಎ' ಸೂಪರ್ ಹಿಟ್ ಬೆನ್ನಲ್ಲೇ 'ಉಪೇಂದ್ರ' ಚಿತ್ರ ಬಂದಿತ್ತು. ತಮ್ಮದೇ ಹೆಸರನ್ನು ಟೈಟಲ್ ಆಗಿ ಇಟ್ಟು ಉಪ್ಪಿ ಗಮನ ಸೆಳೆದಿದ್ದರು. 'ನಾನು' ಎನ್ನುವ ಹೆಸರಿನ ನಾಯಕ. ಆತನ ಬಾಳಿಗೆ ಹಣ ಹಾಗೂ ಬಿರುಗಾಳಿಯಂತೆ ಬರುವ ಕೀರ್ತಿ(ರವೀನಾ ಟಂಡನ್), ಜವಾಬ್ದಾರಿ ಜೊತೆಗೆ ಮಳೆಗಾಲದಂತೆ ಬರುವ ಸ್ವಾತಿ(ಪ್ರೇಮಾ), ಇನ್ನು ಸೌಂದರ್ಯ - ಬೇಸಿಗೆ ರೀತಿ ಬರುವ ರತಿ(ದಾಮಿನಿ) ಕಥೆ ಚಿತ್ರದಲ್ಲಿತ್ತು.

ಈ ಸಿನಿಮಾ ಉಪೇಂದ್ರ ಕರಿಯರ್‌ನಲ್ಲಿ ಎಂದೂ ಮರೆಯಲಾಗದ ಸಿನಿಮಾ. ಅದಾಗಲೇ 'ಓಂ' ಹಾಗೂ 'ಎ' ಚಿತ್ರಗಳನ್ನು ಬಹಳ ವಿಭಿನ್ನ ಕಟ್ಟಿಕೊಟ್ಟಿದ್ದ ರಿಯಲ್ ಸ್ಟಾರ್ ಅದನ್ನೆಲ್ಲಾ ಮೀರಿ 'ಉಪೇಂದ್ರ' ಚಿತ್ರ ಮಾಡಿದ್ದರು. ಅದಕ್ಕೆ ತಕ್ಕಂತೆ ಯಶಸ್ಸು ಸಿಕ್ಕಿತ್ತು. ಮತ್ತೊಮ್ಮೆ ಪ್ರೇಕ್ಷಕರು ಬೆಳ್ಳಿ ಪರದೆ ಮೇಲೆ ಈ ಸಿನಿಮಾ ನೀಡುವ ಅವಕಾಶ ಸಿಗುತ್ತಿದೆ.

More from Filmibeat

English summary
Super hit Upendra film to once again hit theaters on sept 18th;
Read more about: upendra sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X