ಮಗಳ ಜೊತೆಗಿನ ಕ್ಯೂಟ್ ವೀಡಿಯೋ ಹಂಚಿಕೊಂಡ ಯಶ್; ಕೆಲವೇ ಕ್ಷಣಗಳಲ್ಲಿ ದಾಖಲೆ

ರಾಕಿಂಗ್ ಸ್ಟಾರ್ ಯಶ್ ಸದ್ಯ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದ್ದು ಪೋಸ್ಟ್ ಪ್ರೊಡಕ್ಷನ್, ಮಾರ್ಕೆಟಿಂಗ್, ಪ್ರಮೋಷನ್, ರಿಲೀಸ್ ಅಂತೆಲ್ಲಾ ಓಡಾಡುತ್ತಿದ್ದಾರೆ. ಕುಟುಂಬದ ಜೊತೆಗೂ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗ್ತಿಲ್ಲ. ಅಂತಾರಾಷ್ಟ್ರೀಯ ಮಗಳ ದಿನಾಚರಣೆ ಹಿನ್ನೆಲೆಯಲ್ಲಿ ಯಶ್ ತಮ್ಮ ಮಗಳು ಐರಾ ಜೊತೆಗಿನ ಕ್ಯೂಟ್ ವೀಡಿಯೋ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಷ್ಟೇನು ಆಕ್ಟೀವ್ ಆಗಿ ಇರಲ್ಲ. ಆದರೆ ನಿನ್ನೆ(ಸೆಪ್ಟೆಂಬರ್ 28) ರಾತ್ರಿ ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ವೀವ್ಸ್, ಲೈಕ್ಸ್ ಗಿಟ್ಟಿಸಿ ಸದ್ದು ಮಾಡಿತ್ತು. ಸಾಕಷ್ಟು ಜನ ಅಭಿಮಾನಿಗಳು ವೀಡಿಯೋ ಶೇರ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಯಶ್ ಮಗಳಿಗೆ 'Soda Pop' ರೈಮ್ಸ್ ಅನ್ನು ಮಗಳಿಗೆ ಹೇಳಿ ಕೊಡುವ ಕ್ಯೂಟ್ ವೀಡಿಯೋ ವೈರಲ್ ಆಗ್ತಿದೆ.

Cute Video of Yash Teaching Rhymes to Daughter Ayra Creates Buzz on Social Media

ಐರಾ ಅಪ್ಪನ ಮುಂದೆ Soda Pop ರೈಮ್ಸ್ ಹೇಳುತ್ತಿದ್ದಂತೆ ಅದನ್ನು ಕೊಂಚ ಬದಲಿಸಿ ಹೇಳಲು ಹೇಳಿದ್ದಾರೆ. ಕೂಡಲೇ ಐರಾ ಹಾಗೆ ಹಾಡುತ್ತಿದ್ದಂತೆ ಯಶ್ ಖುಷಿಯಾಗಿ ಮಗಳನ್ನು ಎತ್ತಿ ಅಪ್ಪಿ ಮುತ್ತಿಟ್ಟಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಇತ್ತೀಚೆಗೆ ಯಶ್ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಹೆಚ್ಚು ಓಡಾಡುತ್ತಿದ್ದರು. ಆದರೆ ಅವ್ರು ಲುಕ್ ಚೇಂಜ್ ಆಗಿದೆ ಎನ್ನುವ ಊಹಾಪೋಹ ಶುರುವಾಗಿತ್ತು. ವೀಡಿಯೋದಲ್ಲಿ ಉದ್ದನೆಯ ಗಡ್ಡ, ಕೂದಲಿನ ಅದೇ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಹೊಸ ಚಿತ್ರಿಸಿರುವ ವೀಡಿಯೋನಾ ಅಥವಾ ಹಿಂದೆ ಸೆರೆಹಿಡಿದಿದ್ದ ವೀಡಿಯೋನಾ? ಎನ್ನುವುದು ಗೊತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಯಶ್ ದೇಹ ದಂಡಿಸಿ ಖಡಕ್ ಆಗಿ ಕಾಣಿಸಿಕೊಂಡಿರುವುದು 'ಟಾಕ್ಸಿಕ್' ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ 10 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಸಿಕ್ಕಿತ್ತು.

ಮೊದಲ 50 ನಿಮಿಷಗಳಲ್ಲಿ ಈ ವೀಡಿಯೋ 25 ಲಕ್ಷ ವೀವ್ಸ್ ಹಾಗೂ 3 ಲಕ್ಷ 30 ಸಾವಿರ ಲೈಕ್ಸ್ ಪಡೆದುಕೊಂಡಿತ್ತು. ಇದನ್ನು ನೋಡಿ ಯಶ್ ಕ್ರೇಜ್ ಹೆಂಗಿದೆ ನೋಡ್ರಪ್ಪಾ? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಯಶ್ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗೆ ಸಮಯ ಕೊಡುವುದನ್ನು ಮಿಸ್ ಮಾಡುವುದಿಲ್ಲ. ಆಗಾಗ್ಗೆ ಮಡದಿ ಮಕ್ಕಳ ಜೊತೆ ಪ್ರವಾಸಕ್ಕೆ ತೆರೆಳುತ್ತಿರುತ್ತಾರೆ. ಹಬ್ಬ ಹರಿದಿನಗಳಲ್ಲಿ ಇಲ್ಲೇ ಇದ್ದರೂ ಮನೆಗೆ ಬರುತ್ತಾರೆ.

ಸದ್ಯ 'ರಾಮಾಯಾಣ' ಹಾಗೂ 'ಟಾಕ್ಸಿಕ್' ಸಿನಿಮಾಗಳಲ್ಲಿ ಯಶ್ ಮುಳುಗಿದ್ದಾರೆ. ಎರಡೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸುವುದು ಮಾತ್ರವಲ್ಲ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ವಿಚಾರವಾಗಿ ಚರ್ಚಿಸಲು ಇತ್ತೀಚೆಗೆ ಲಂಡನ್‌ಗೆ ಹೋಗಿದ್ದರು. ಇನ್ನುಳಿದಂತೆ ಮುಂಬೈ, ಬೆಂಗಳೂರು ವಿಮಾನ ಏರಿ ಇಳಿಯುತ್ತಲೇ ಇರುತ್ತಾರೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮಾರ್ಚ್ 19ರಂದು ಸಿನಿಮಾ ತೆರೆಗೆ ಬರಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಭಾರೀ ಬಜೆಟ್‌ನಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಗ್ಯಾಂಗ್‌ಸ್ಟರ್ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಚಿತ್ರ ತೆರೆಗಪ್ಪಳಿಸಲಿದೆ. ರಾವಣನಾಗಿ ಯಶ್ ದರ್ಬಾರ್ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

More from Filmibeat

English summary
Fans Shower Love as Yash’s Sweet Daughters’ Day Moment with Aira Goes Viral
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X