Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಬ್ಬನಿಂದ 150 ಫೇಕ್ ಅಕೌಂಟ್; ಅಣ್ಣಾವ್ರ ಕುಟುಂಬವನ್ನು ಟ್ರೋಲ್ ಮಾಡುತ್ತಿದ್ದವರ ಹೆಸರು ರಿವೀಲ್, ಕೇಸ್ ದಾಖಲು!
ತಮ್ಮ ನೆಚ್ಚಿನ ನಟನಿಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎಂದು ತೋರಿಸಲು, ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಪೋಲ್‌ಗಳಿಗೆ ಹೆಚ್ಚು ಮತ ಹಾಕಿ ತನ್ನ ನೆಚ್ಚಿನ ನಟನನ್ನು ವಿಜೇತನನ್ನಾಗಿ ಮಾಡಲು ಹುಚ್ಚು ಅಭಿಮಾನಿಗಳು ಐದಾರು ನಕಲಿ ಖಾತೆಗಳನ್ನು ಸೃಷ್ಟಿಸುವುದು ಒಂದು ರೀತಿಯ ಕಾಮನ್ ವಿಷಯ ಎನ್ನಬಹುದು. ಆದರೆ ಈ ಫ್ಯಾನಿಸಂ ಅತಿರೇಕಕ್ಕೆ ತಿರುಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬ ನಟನ ಬಗ್ಗೆ ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿತ್ತು.
ಅದರಲ್ಲಿಯೂ ರಾಜ್‌ಕುಮಾರ್ ಹಾಗೂ ಅವರ ಕುಟುಂಬದ ಇತರೆ ನಟರುಗಳ ಬಗ್ಗೆ ಕೆಟ್ಟದಾಗಿ ಫೋಟೊ ಎಡಿಟ್ ಮಾಡಿ, ಆಶ್ಲೀಲ ಸಾಲುಗಳನ್ನು ಬರೆದು ಪೋಸ್ಟ್ ಮಾಡಿ ವಿಕೃತಿ ಮೆರೆಯುತ್ತಿದ್ದರು. ಇನ್ನು ರಾಜ್‌ಕುಮಾರ್ ಕುಟುಂಬವನ್ನು ಗುರಿಯನ್ನಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದ ಕಿಡಿಗೇಡಿಗಳು ಅಪ್ಪು ಸಾವನ್ನು ಸಂಭ್ರಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಪ್ಪು ನಿಧನದ ಫೋಟೊ ಹಂಚಿಕೊಂಡು ಖುಷಿಪಟ್ಟಿದ್ದರು.
ಅಂದೇ ಇಂತಹ ಕೆಟ್ಟ ಟ್ರೋಲರ್‌ಗಳಿಗೆ ಪಾಠ ಕಲಿಸಬೇಕು ಎಂದು ತೀರ್ಮಾನಿಸಿದ್ದ ರಾಜ್ ಕುಟುಂಬದ ಅಭಿಮಾನಿಗಳು ಹಲವರ ವಿರುದ್ಧ ದೂರು ದಾಖಲಿಸಿದ್ದರು. ಕೆಲ ದಿನಗಳ ಮಟ್ಟಿಗೆ ರಾಜ್ ಕುಟುಂಬದ ವಿರುದ್ಧ ಟ್ರೋಲ್‌ಗಳು ಸಹ ನಿಂತವು. ಆದರೆ ಈಗ ಮತ್ತೆ ಅದೇ ರೀತಿಯ ಅಶ್ಲೀಲ ಟ್ರೋಲ್‌ಗಳು ಶುರುವಾದ ಕಾರಣ ದೃಢ ನಿರ್ಧಾರ ಮಾಡಿದ ರಾಜ್ ಕುಟುಂಬದ ಅಭಿಮಾನಿಗಳು ಆ ಕಿಡಿಗೇಡಿಗಳಿಗೆ ಬುದ್ಧಿ ಕಲಿಸಲೇಬೇಕು ಎಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಎನ್ ಆರ್ ರಮೇಶ್ ಅವರು ನೀಡಿದ್ದ ದೂರನ್ನು ಸ್ವೀಕರಿಸಿದ್ದ ಸೈಬರ್ ಕ್ರೈಮ್ ಪೊಲೀಸರು ಇದೀಗ ಈ ದೂರಿನ ಕುರಿತು ಕೆಲ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾಜ್ ಕುಟುಂಬವನ್ನು ಹೀಯಾಳಿಸಲು ಒಬ್ಬ ಬರೋಬ್ಬರಿ 150 ಖಾತೆಗಳನ್ನು ತೆರೆದಿದ್ದ ಎಂಬ ಸಂಗತಿ ಬಹಿರಂಗವಾಗಿದೆ.

ರಿಪೋರ್ಟ್‌ನಲ್ಲಿ ಇರುವುದೇನು?
ಪೊಲೀಸರು ಹಂಚಿಕೊಂಡಿರುವ ಕೇಸ್‌ನ ರಿಪೋರ್ಟ್‌ನಲ್ಲಿ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ನಾಲ್ವರು ಸುಮಾರು 150ಕ್ಕೂ ಹೆಚ್ಚು ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ವಿವಿಧ ಮೊಬೈಲ್‌ಗಳಲ್ಲಿ ಲಾಗ್ ಇನ್ ಆಗಿ ಬೇರೆ ನಟರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದರು ಎಂಬುದು ದೃಢಪಟ್ಟಿದ್ದು, ಅವರ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಹಾಗೂ ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಅಭಿಮಾನಿ ಎಂಬ ಹೆಸರಿನಲ್ಲಿ ಖಾತೆಗಳು!
ಇನ್ನು ಸೈಬರ್ ಪೊಲೀಸರು ಹಂಚಿಕೊಂಡಿರುವ ಈ ಮಾಹಿತಿಯಲ್ಲಿರುವ ನಾಲ್ವರು ಆರೋಪಿಗಳು ಸಹ ದರ್ಶನ್ ಅಭಿಮಾನಿಗಳು ಎಂದು ಬಿಂಬಿಸಿಕೊಂಡು ಖಾತೆ ತೆರೆದಿದ್ದಾರೆ. ಓರ್ವ ಮಂಡ್ಯದಲ್ಲಿ ಡಿ ಬಾಸ್ ಕರ್ನಾಟಕ ಎಂಬ ಖಾತೆಯನ್ನು ತೆರೆದಿದ್ದಾನೆ, ಮತ್ತೊಬ್ಬ ನಾಗರಾಜ್ ದಚ್ಚು ಮೈಸೂರಿನಲ್ಲಿ ಖಾತೆ ತೆರೆದಿದ್ದಾನೆ, ಕಿಚ್ಚ ಹರೀಶ್ ಎಂಬ ಹೆಸರಿನಲ್ಲಿ ಬೆಂಗಳೂರಿನ ಓರ್ವ ಖಾತೆ ತೆರೆದಿದ್ದಾನೆ ಹಾಗೂ ಗಡ್ಡ ಸ್ಟೈಲ್ ದಚ್ಚು ನಾಗರಾಜ್ ( ಡಿ ಬಾಸ್ ) ಎಂಬ ಹೆಸರಿನಲ್ಲಿ ಮೈಸೂರಿನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಹೀಗೆ ಬಹುತೇಕ ಖಾತೆಗಳನ್ನು ದರ್ಶನ್ ಅಭಿಮಾನಿಗಳು ಎಂದೇ ತೆರೆದಿರುವ ಈ ಕಿಡಿಗೇಡಿಗಳು ದರ್ಶನ್ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇನ್ನು ಪೊಲೀಸರು ಇವರು ಬಳಸುತ್ತಿದ್ದ ಟೆಲಿಕಾಂ ಕಂಪನಿ, ಮೊಬೈಲ್ ಐಎಂಇಐ ನಂಬರ್, ಲ್ಯಾಪ್‌ಟಾಪ್ ಸೀರಿಯಲ್ ಸಂಬರ್ ಹಾಗೂ ಮೊಬೈಲ್ ನಂಬರ್‌ಗಳನ್ನೂ ಸಹ ಈ ಮಾಹಿತಿಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೂ ಮಾಹಿತಿಗಳೂ ರೂಪಾ ರೆಡ್ಡಿ ಎಂಬ ಸಬ್‌ಇನ್ಸ್‌ಪೆಕ್ಟರ್ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಆಗಿದೆ.

ಇನ್ನಾದರೂ ನಿಲ್ಲುತ್ತಾ ಅನಗತ್ಯ ಫ್ಯಾನ್ ವಾರ್?
ಸದ್ಯ ಈ ಮಹತ್ವದ ಬೆಳವಣಿಗೆ ಸಾಮಾಜಿಕ ಜಾಲತಾಣದ ಫ್ಯಾನ್ ವಾರ್‌ಗೆ ಅಂತ್ಯ ಹಾಡುತ್ತಾ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಈ ಮೇಲ್ಕಂಡ ಕಿಡಿಗೇಡಿಗಳು ಬಂಧನಕ್ಕೊಳಗಾದಾಗ ಅನುಭವಿಸುವ ನೋವು ಹಾಗೂ ಅವಮಾನವನ್ನು ನೋಡಿಯಾದರೂ ಅಭಿಮಾನದ ಹೆಸರಿನಲ್ಲಿ ಫ್ಯಾನ್ ವಾರ್ ನಡೆಸಿ ಪರ ನಟರನ್ನು ಹೀಯಾಳಿಸುವುದನ್ನು ಬಿಟ್ಟು ಒಳ್ಳೆ ಹಾದಿಯಲ್ಲಿ ಜೀವಿಸುತ್ತಾರಾ ಎಂಬುದನನ್ನು ಕಾದು ನೋಡಬೇಕಿದೆ.